ಮಲೆನಾಡಿನ ಅಡುಗೆ ಪರಂಪರೆಯಲ್ಲಿ ಕಾಡು ಸಸ್ಯ ಬಳಕೆ ವಿಶೇಷವಾಗಿದೆ. ಆಹಾರದಿಂದ ಆರೋಗ್ಯವನ್ನು ತಲೆಮಾರಿನಿಂದ ತಾಯಂದಿರು ಕರುಣಿಸಿದ್ದಾರೆ. 

ವಿವಿಧ ಜಿಲ್ಲೆಗಳಲ್ಲಿರುವ ಅಡುಗೆ ಸಸ್ಯ ಬಳಕೆಯ ಜ್ಞಾನ ವಿನಿಮಯದ ಮೂಲಕ ಸಸ್ಯಗಳ ಮಹತ್ವ, ಸಂರಕ್ಷಣೆ, ಬಳಕೆಯ ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ.

ಪರಿಸರಕ್ಕೆ ಸೂಕ್ತ ಕೃಷಿ ಯೋಗ್ಯ ಅರಣ್ಯ ಸಸ್ಸಯ ಗುರುತಿಸಿ ಕಷಾಯ, ತಂಬುಳಿ, ವನಗಳ ಮೂಲಕ ಗ್ರಾಮೀಣ ಬದುಕಿಗೆ ಪರಿಸರಪರ ಆರ್ಥಿಕ ಚೇತನ ನೀಡಬಹುದಾಗಿದೆ.

ಸುಮಾರು 25 ಮಹಿಳೆಯರು ನೂರಾರು ಸಸ್ಯ ಬಳಸಿ ಕಣಿವೆಯ ಕಾನ್ಮನೆಯಲ್ಲಿ ಅಡುಗೆ ತಯಾರಿಸುವ ಪ್ರಾತ್ಯಕ್ಷಿಕೆ ನಡೆಸುವರು. ಸಸ್ಯ ಬಳಕೆಯ ಪರಿಣಾಮಗಳ ಕುರಿತು ಅರಿವು ಮೂಡಿಸಲು ಡಾ. ಪತಂಜಲಿ ಸಾಗರ, ಶ್ರೀ ಬೇದಶ್ರವ ಶರ್ಮ, ಶ್ರಿಧರ ದೇಸಾಯಿ, ಜಿ.ಎಸ್ ಹೆಗಡೆ ಮುಂತಾದ ವೈದ್ಯರು, ಮೂಲಿಕಾ ತಜ್ಞರು ಭಾಗವಹಿಸುವರು.

ಅಲ್ಲದೇ ಕರ್ನಾಟಕ ಅರಣ್ಯ ಇಲಾಖೆಯ ಶಿರಸಿ ವಿಭಾಗ ಹಾಗೂ ಯೂಥ್ ಫಾರ್ ಸೇವಾ ಸಂಸ್ಥೆಯ ಸಹಕಾರದಿಂದ ಸಸ್ಯ ಪ್ರದರ್ಶನ ಕೂಡ ಏರ್ಪಡಿಸಲಾಗಿದೆ.

ಕಾಯರ್ಯಕ್ರಮದ ವಿವರ:
ಫೆ.16: ಬೆಳಗ್ಗೆ 9-30 ರಿಂದ ಸಾಯಂಕಾಲ 6 ರವರೆಗೆ
ಫೆ.17: ಬೆಳಗ್ಗೆ 9 ರಿಂದ ಮಧ್ಯಾಹ್ನ 1-30 ಗಂಟೆವರೆಗೆ