ಕಿತ್ತಳೆ, ನಿಂಬೆ ಮೊದಲಾದ ಸಿಟ್ರಸ್ ಹಣ್ಣಗಳನ್ನು ಎಲ್ಲರೂ ಯಥೇಚ್ಛವಾಗಿ ಬಳಸುತ್ತಾರೆ. ಇದರ ಸಿಪ್ಪೆಯನ್ನು ಬಿಸಾಕೋ ಬದಲು ಹಲವು ರೀತಿಯಲ್ಲಿ ಬಳಸಬಹುದು. ಇದರ  ಸಿಪ್ಪೆಯಲ್ಲಿ ಲಿಮೊನಿಂ, ಬೈ ಪ್ಲಾವಿನೋಯ್ಡ್, ವಿಟಾಮಿನ್ ಸಿ ಮತ್ತು ಪೊಟ್ಯಾಶಿಯಂ ಮೊದಲಾದ ಫೈಟೋಕೆಮಿಕಲ್ಸ್ ಅಂಶಗಳಿವೆ. ಇವು ಹಣ್ಣುಗಳಿಗಿಂತ ಹೆಚ್ಚಾಗಿ ನಿಮ್ಮ ಅರೋಗ್ಯ ಕಾಪಾಡುತ್ತದೆ. 

  • ಈ ಸಿಪ್ಪೆಯಲ್ಲಿಇರುವ ಆಂಟಿ ಇನ್‌ಫ್ಲೇಮಟರಿ ಗುಣ ಮತ್ತು ಪೊಟ್ಯಾಶಿಯಂ ಬ್ಲಡ್ ಪ್ರೆಶರ್ ಮ್ಯಾನೇಜ್ ಮಾಡುತ್ತದೆ. 
  • ಇದರಲ್ಲಿರುವ ಪಾಲಿಮೆಥಾಕ್ಸಿಲೇಟ್ ಫ್ಲೇವೋನ್ಸ್ ಡಯಾಬಿಟೀಸ್ ಕಂಟ್ರೋಲ್ ಮಾಡುತ್ತದೆ. 
  • ಸಿಟ್ರಸ್ ಹಣ್ಣುಗಳ ಸಿಪ್ಪೆಯನ್ನು ಡಯಟಿನಲ್ಲಿ ಬಳಸಿ. ಇದರಿಂದ ಕೊಲೆಸ್ಟ್ರಾಲ್ ಲೆವೆಲ್ ಕಡಿಮೆಯಾಗುತ್ತದೆ. ಇದರಲ್ಲಿರುವ  ಪಾಲಿಮೆಥಾಕ್ಸಿಲೇಟ್ ಫ್ಲೇವೋನ್ಸ್ ಕೊಲೆಸ್ಟ್ರಾಲ್ ಲೆವೆಲ್ ಅನ್ನು ಶೇ.40 ಕಡಿಮೆ ಮಾಡುತ್ತದೆ. 
  • ನಿಂಬೆ ಸಿಪ್ಪೆ ಪಚನ ಕ್ರಿಯೆ ಸಮರ್ಪಕವಾಗಿಡುತ್ತದೆ. ಇದರಿಂದ ಆ್ಯಸಿಡಿಟಿ, ಕ್ರಾಂಪ್ ಮೊದಲಾದ ಸಮಸ್ಯೆಗಳೂ ದೂರವಾಗುತ್ತವೆ. 
  • ಈ ಸಿಪ್ಪೆಯಲ್ಲಿರುವ ಲೋಮೋನಿನ್ ಅಂಶ ದೇಹದ ಉರಿಯನ್ನು ಕಡಿಮೆ ಮಾಡುತ್ತದೆ. 
  • ಇಮ್ಯೂನ್ ಸಿಸ್ಟಮ್ ಬೂಸ್ಟ್ ಮಾಡುತ್ತದೆ. ನಿಂಬೆ ಸಿಪ್ಪೆಯಲ್ಲಿರುವ ಎಣ್ಣೆಯಲ್ಲಿ ಆ್ಯಂಟಿ ಮೈಕ್ರೋಬಿಯಲ್ ಅಂಶವಿದೆ. 
  • ಅಲ್ಲದೇ ಆ್ಯಂಟಿ ಬ್ಯಾಕ್ಟಿರಿಯಲ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಫಂಗಲ್ ಅಂಶವಿದೆ. ಇವೆಲ್ಲವೂ ಇಮ್ಯೂನ್ ಸಿಸ್ಟಮ್ ಹೆಚ್ಚಿಸುತ್ತದೆ. 

ಏನು ಮಾಡಬಹುದು?

ಈ ಸಿಪ್ಪೆಯಿಂದ ಕಾಯಿರಸದಂಥ ಕೆಲವು ಅಡುಗೆಗಳನ್ನು ತಯಾರಿಸಬಹುದು. ಅಲ್ಲದೇ ಒಣಗಿಸಿ ತಲೆ ಹಚ್ಚಿಕೊಳ್ಳುವುದರಿಂದ ಹಾಗೂ ಕಷಾಯ ಮಾಡಿ ಕುಡಿಯುವುದರಿಂದ ಹಲವು ಸಮಸ್ಯೆಗಳಿಗೆ ಮದ್ದಾಗುವಂಥ ಗುಣ ವಿಶೇಷಗಳು ಈ ಸಿಪ್ಪೆಗಿವೆ