ಸ್ತ್ರೀಯರೇ ಈ 20 ನಿಮಗೆ ತರುವವು ಆಪತ್ತು!

Health Tips For Women
Highlights

ಸಾಮಾನ್ಯವಾಗಿ ಮಹಿಳೆಯರು ಪುರುಷರಷ್ಟು ಆರೋಗ್ಯದತ್ತ ಕಾಳಜಿ ವಹಿಸುವುದು ತೀರಾ ಕಡಿಮೆ. ಕೆಲವು ಸಂದರ್ಭಗಳಲ್ಲಂತೂ ಕಾಯಿಲೆಯ ತೀವ್ರತೆ ಹೆಚ್ಚಾದಾಗ ಮಾತ್ರ ಆ ಬಗ್ಗೆ ಗಮನಹರಿಸುತ್ತಾರೆ. ಆದರೆ, ಕೆಲವು ಚಿಹ್ನೆಗಳು ದೇಹದಲ್ಲಿ ಕಾಣಿಸಿಕೊಂಡಾಗ ಅದು ನೇರವಾಗಿ ಕ್ಯಾನ್ಸರ್‌ಗೆ ಸಂಬಂಧಿಸಿದ್ದು ಎಂದು ಮನಗಾಣಲೇಬೇಕು. ಕ್ಯಾನ್ಸರ್ ಎಂಬುದು ಎಲ್ಲಾ ಮಯೋಮಾನದವರಿಗೂ ಗಂಡಾಂತರಕಾರಿಯಾದಂಥ ರೋಗವೆನಿಸಿದೆ. ವಯಸ್ಸು ಹೆಚ್ಚಾದಂತೆಲ್ಲಾ ಕಾಡುವಂಥ ಕಾಯಿಲೆ ಇದಾಗಿದೆ. ವಂಶವಾಹಿನಿಯ ಅಂಗಾಂಶಕೋಶಗಳಲ್ಲಿನ ಪರಿವರ್ತನವು ಅಸ್ವಾಭಾವಿಕತೆಯ ಹಾದಿ ಹಿಡಿಯುತ್ತದೆ. ಅಸ್ವಾಭಾವಿಕ ವೈಪರೀತ್ಯಗಳು ಕ್ಯಾನ್ಸರ್‌ನ ಮುನ್ಸೂಚನೆಗಳು. ಆರಂಭದಲ್ಲಿಯೇ ಮಹಿಳೆಯರು ಸುದೀರ್ಘವಾಗಿ ಕಾಡುವ ಈ ಲಕ್ಷಣಗಳನ್ನು ಗುರುತಿಸಿದರೆ, ಕ್ಯಾನ್ಸರ್‌ಗೆ ಸುಲಭವಾಗಿ ಆನ್ಸರ್ ಕೊಡಬಹುದು.

ಸಾಮಾನ್ಯವಾಗಿ ಮಹಿಳೆಯರು ಪುರುಷರಷ್ಟು ಆರೋಗ್ಯದತ್ತ ಕಾಳಜಿ ವಹಿಸುವುದು ತೀರಾ ಕಡಿಮೆ. ಕೆಲವು ಸಂದರ್ಭಗಳಲ್ಲಂತೂ ಕಾಯಿಲೆಯ ತೀವ್ರತೆ ಹೆಚ್ಚಾದಾಗ ಮಾತ್ರ ಆ ಬಗ್ಗೆ ಗಮನಹರಿಸುತ್ತಾರೆ. ಆದರೆ, ಕೆಲವು ಚಿಹ್ನೆಗಳು ದೇಹದಲ್ಲಿ ಕಾಣಿಸಿಕೊಂಡಾಗ ಅದು ನೇರವಾಗಿ ಕ್ಯಾನ್ಸರ್‌ಗೆ ಸಂಬಂಧಿಸಿದ್ದು ಎಂದು ಮನಗಾಣಲೇಬೇಕು. ಕ್ಯಾನ್ಸರ್ ಎಂಬುದು ಎಲ್ಲಾ ಮಯೋಮಾನದವರಿಗೂ ಗಂಡಾಂತರಕಾರಿಯಾದಂಥ ರೋಗವೆನಿಸಿದೆ. ವಯಸ್ಸು ಹೆಚ್ಚಾದಂತೆಲ್ಲಾ ಕಾಡುವಂಥ ಕಾಯಿಲೆ ಇದಾಗಿದೆ. ವಂಶವಾಹಿನಿಯ ಅಂಗಾಂಶಕೋಶಗಳಲ್ಲಿನ ಪರಿವರ್ತನವು ಅಸ್ವಾಭಾವಿಕತೆಯ ಹಾದಿ ಹಿಡಿಯುತ್ತದೆ. ಅಸ್ವಾಭಾವಿಕ ವೈಪರೀತ್ಯಗಳು ಕ್ಯಾನ್ಸರ್‌ನ ಮುನ್ಸೂಚನೆಗಳು. ಆರಂಭದಲ್ಲಿಯೇ ಮಹಿಳೆಯರು ಸುದೀರ್ಘವಾಗಿ ಕಾಡುವ ಈ ಲಕ್ಷಣಗಳನ್ನು ಗುರುತಿಸಿದರೆ, ಕ್ಯಾನ್ಸರ್‌ಗೆ ಸುಲಭವಾಗಿ ಆನ್ಸರ್ ಕೊಡಬಹುದು.

ಬೆನ್ನು ನೋವು ಹಾಗೂ ಸೊಂಟನೋವು: ಬೆನ್ನು ನೋವಿನಿಂದ ಬಳಲುವಂಥ ಅನೇಕ ಮಹಿಳೆಯರು ‘ಲಿವರ್ ಕ್ಯಾನ್ಸರ್’ಗೆ ತುತ್ತಾಗಿರುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೆ, ಸದಾ ಬೆನ್ನು ನೋವಿನಿಂದ ಬಳಲುತ್ತಿರುವವರಲ್ಲಿ ಸ್ತನ ಕ್ಯಾನ್ಸರ್‌ನ ಸಾಧ್ಯತೆಯೂ ಇರುತ್ತದೆ. ಕಾರಣವೇನೆಂದರೆ ಬೆನ್ನಿನಲ್ಲಿ ಉಂಟಾದ ಬಾವು ಅಥವಾ ಗಡ್ಡೆ, ಪಕ್ಕೆಲುಬುಗಳಿಗೆ ಸದಾ ಒತ್ತುತ್ತಿರುವುದರಿಂದ ಕಾಲಕ್ರಮೇಣ ಕ್ಯಾನ್ಸರ್‌ಗೆ ತಿರುಗುವ ಅಪಾಯವಿರುತ್ತದೆ.

ಬದಲಾದ ಉಗುರಿನ ಚರ್ಯೆ: ತುಂಬಾ ಬಿಳಿ ಛಾಯೆಯ ಬಣ್ಣದಿಂದ ಕೂಡಿದಂತಹ ಉಗುರಿನ ಲಕ್ಷಣಗಳೂ ಲಿವರ್ ಕ್ಯಾನ್ಸರ್‌ನ ಲಕ್ಷಣವೆಂದು ಅಥವಾ ಇದರ ಮುನ್ಸೂಚನೆಯೆಂದು ಸಂಶೋಧನೆಗಳು ಹೇಳುತ್ತವೆ. ಇದರೊಂದಿಗೆ ಉಗುರಿನ ಮಧ್ಯದಲ್ಲಿ ಅಥವಾ ಉಗುರಿನ ಯಾವುದೇ ಭಾಗದಲ್ಲಿ ಕಪ್ಪು ಅಥವಾ ಕಂದು ಬಣ್ಣದ ಚುಕ್ಕಿ ಅಥವಾ ಗೆರೆಗಳು ಕಂಡುಬಂದಲ್ಲಿ ಚರ್ಮದ ಕ್ಯಾನ್ಸರ್‌ನ ಲಕ್ಷಣಗಳೆಂದು ಪರಿಗಣಿಸಿ ನಿರ್ಲಕ್ಷಿಸದೇ ತಕ್ಷಣವೇ ಸೂಕ್ತ ವೈದ್ಯರನ್ನು ಕಂಡು ತಪಾಸಣೆಗೆ ಒಳಗಾಗಬೇಕು.

ಮುಖ ಊತ: ಕೆಲವರ ಮುಖವು ಊದಿದಂತಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ತುಟಿ, ಕೆನ್ನೆ, ಕಣ್ಣಿನ ರೆಪ್ಪೆಯ ಭಾಗದಲ್ಲಿ ದಪ್ಪ ಆಗಿರುವಂತೆ ಮೇಲ್ನೋಟಕ್ಕೆ ಗೋಚರಿಸುತ್ತದೆ. ಇದಕ್ಕೆ ಕಾರಣ ಶ್ವಾಸಕೋಶದಲ್ಲಿ ಉಂಟಾದಂಥ ಗಡ್ಡೆ ಅಥವಾ ಬಾವು ಮುಖ್ಯ ಕಾರಣವಾಗುತ್ತದೆ. ಹೀಗಾದಾಗ ರಕ್ತನಾಳದಲ್ಲಿ ಮುಖದ ಭಾಗಕ್ಕೆ ರಕ್ತ ಸಂಚಾರಕ್ಕೆ ತಡೆಯುಂಟಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಶ್ವಾಸಕೋಶದ ಕ್ಯಾನ್ಸರ್.

ಚರ್ಮದಲ್ಲಿ ಹುಣ್ಣು ಅಥವಾ ಗಡ್ಡೆ: ದೇಹದಲ್ಲಿ ಉಂಟಾಗುವಂಥ ಪ್ರತಿಯೊಂದು ಹುಣ್ಣು ಅಥವಾ ಗಡ್ಡೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹುಣ್ಣಿನಿಂದ ರಕ್ತ ಒಸರುವುದು, ಚರ್ಮವು ಇದ್ದಕ್ಕಿದ್ದಂತೆ ದಪ್ಪ ಆಗುವ ಲಕ್ಷಣಗಳು ಕಂಡುಬಂದರೆ ಅದು ಚರ್ಮದ ಕ್ಯಾನ್ಸರ್ ಆಗುವ ಸಾಧ್ಯತೆಗೆ ಕನ್ನಡಿ ಆಗಿರಬಹುದು.

ಕೆಂಪಾದ, ಊದಿದಂತಹ ಸ್ತನಗಳು: ಮಹಿಳೆಯ ಸ್ತನಗಳು ಇದ್ದಕ್ಕಿದ್ದಂತೆ ತುಂಬಾ ದಪ್ಪನಾಗುವುದು, ಸ್ತನಗಳಲ್ಲಿ ಗಡ್ಡೆಗಳು ಕಾಣಿಸಿಕೊಂಡಾಗ ಹಾಲಿನ ಬದಲು ರಕ್ತ ಬಂದರೆ, ಕಂಕುಳಲ್ಲಿ ನೋವು ಅಥವಾ ಊತ ಕಂಡುಬಂದಾಗ ಸ್ತನ ಕ್ಯಾನ್ಸರ್‌ನ ಪರೀಕ್ಷೆಗೊಳಪಡುವುದು ಅತ್ಯಗತ್ಯ.

ಸ್ತನಾಗ್ರದಲ್ಲಿ ಅಸ್ಥಿರ: ಸ್ತನಾಗ್ರದ ತುದಿಯು ಕೆಳಮುಖ ಬಾಗಿದ್ದರೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿದರೆ ಸ್ತನದ ಆಕಾರದಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ ಕಂಡುಬಂದಲ್ಲಿ ಹಾಗೂ ನಿಪ್ಪಲ್‌ನ ಮೇಲಿನ ಚರ್ಮದ ಪದರ ಸಿಪ್ಪೆಯಂತೆ ಕಳಚುತ್ತಿದ್ದರೆ ಇದು ಸ್ತನದ ಕ್ಯಾನ್ಸರ್‌ಗೆ ಮುನ್ನುಡಿ ಆಗಿರಬಹುದು.

ಋತುಸ್ರಾವದಲ್ಲಿ ವಿಲಕ್ಷಣ ನೋವು: ಋತುಸ್ರಾವವಾಗುವಾಗ ಅಥವಾ ಆ ಸಮಯದಲ್ಲಿ ಪದೇಪದೆ ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು, ಸೆಳೆತ ಕಾಣಿಸಿಕೊಂಡರೆ ಗರ್ಭಕೋಶದ ಕ್ಯಾನ್ಸರ್‌ನ ಲಕ್ಷಣ ಆಗಿರಬಹುದು.

ಉಸಿರಾಟದ ತೊಂದರೆ: ಸಹಜ ಸ್ಥಿತಿಯಲ್ಲೂ ಸರಾಗ ಉಸಿರಾಟ ಅಸಾಧ್ಯವೆಂದಾದಾಗ ಸುಮ್ಮನೆ ಕೈಕಟ್ಟಿ ಕೂರಬಾರದು. ಅದರಲ್ಲೂ ಉಸಿರಾಡುವಾಗ ಗಂಟಲಿನಲ್ಲಿ ಗೊರ ಗೊರ ಸದ್ದು ಉಂಟಾದರೆ ಅದು ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣ ಆಗಿರಬಹುದು. ಹೀಗಾದಾಗ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಿ ಕೂರಬಾರದು.

ಸುದೀರ್ಘ ಕೆಮ್ಮು- ಎದೆನೋವು: ದೀರ್ಘ ಕಾಲದವರೆಗೆ ಕೆಮ್ಮುವುದು ಹಾಗೂ ಎದೆನೋವು ಕಾಣಿಸಿದರೆ ಕ್ಷಯರೋಗದ ಆಗಮನದ ಮುನ್ಸೂಚನೆ ಆಗಿರಬಹುದು. ಮೊದಲು ಎದೆಯಲ್ಲಿ ನೋವು ಕಾಣಿಸಿಕೊಂಡು ಕ್ರಮೇಣ ಭುಜ ಹಾಗೂ ಕೈಗಳಿಗೂ ಹರಡಿದರೆ ಶ್ವಾಸಕೋಶದ ಕ್ಯಾನ್ಸರ್‌ನ ಸಾಧ್ಯತೆಯಿದೆಯೆಂದು ಅರ್ಥ.

ಪದೇಪದೆ ಜ್ವರ ಹಾಗೂ ಸೋಂಕು: ಒಮ್ಮೆ ಬಂದ ಜ್ವರ ಕಡಿಮೆಯಾಗಿ, ಮತ್ತೆ ಮೂರ್ನಾಲ್ಕು ದಿನ ಇಲ್ಲವೇ ವಾರದೊಳಗೆ ಮರುಕಳಿಸಿದರೆ ಮತ್ತು ಅಂಟುರೋಗದ ಸೋಂಕುಗಳಿಂದ ಬಳಲುತ್ತಿದ್ದರೆ ಇದು ಕ್ಯಾನ್ಸರ್‌ನ ಲಕ್ಷಣವಾಗಿರುತ್ತದೆ.

ಕಂಕುಳು, ಕುತ್ತಿಗೆ, ತೊಡೆ ಸಂದುಗಳಲ್ಲಿ ಊತ: ಇದ್ದಕ್ಕಿದ್ದಂತೆ ಇಂಥ ಲಕ್ಷಣಗಳು ಕ್ಯಾನ್ಸರ್‌ನ ಪ್ರಥಮ ಘಟ್ಟವೆಂದು ಪರಿಗಣಿಸುವುದು ಸೂಕ್ತ.

ಸೇವನೆಯಲ್ಲಿ ತೊಂದರೆ: ಆಹಾರ ಪದಾರ್ಥಗಳನ್ನು ಸೇವಿಸುವಾಗ, ಎಂಜಲು ನುಂಗುವಾಗ ಗಂಟಲಿನಲ್ಲಿ ನೋವು ಅಥವಾ ತೊಂದರೆ ಉಂಟಾದರೆ ಅದು ಗಂಟಲು ಕ್ಯಾನ್ಸರ್ ಅಥವಾ ಶ್ವಾಸಕೋಶದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು.

ರಕ್ತಸ್ರಾವ ಮತ್ತು ಹೆಪ್ಪುಗಟ್ಟುವಿಕೆ: ಸಣ್ಣ ಗಾಯದಿಂದ ಪದೇಪದೆ ರಕ್ತಸ್ರಾವವಾಗುವುದು, ರಕ್ತ ಹೆಪ್ಪುಗಟ್ಟುವುದು ನಿಲ್ಲದಿರುವಂಥ ಲಕ್ಷಣಗಳು ಇದ್ದರೆ ಇದು ಯಾವುದೇ ಕ್ಯಾನ್ಸರ್‌ನ ಸೂಚನೆ ಆಗಿರಬಹುದು.

ವಿಪರೀತ ದಣಿವು: ದೇಹದಲ್ಲಿ ದಣಿವು ಅಥವಾ ಆಯಾಸವುಂಟಾಗುವುದು ಸಹಜ. ಆದರೆ ಅನಿರೀಕ್ಷಿತವಾಗಿ ಮುನ್ಸೂಚನೆಯಿಲ್ಲದೆ ಅತಿಯಾಗಿ ಪದೇಪದೆ ದಣಿವುಂಟಾಗಿ ತುಂಬಾ ಸುಸ್ತು ಕಾಣಿಸಿಕೊಂಡರೆ ಒಮ್ಮೆ ವೈದ್ಯರಲ್ಲಿ ಪರೀಕ್ಷೆಗೆ ಮುಂದಾಗುವುದು ಉತ್ತಮ.

ಉದರ ಉಬ್ಬರ: ಹೊಟ್ಟೆಯ ಭಾಗದಲ್ಲಿ ಉಬ್ಬರ ಕಂಡುಬರುವುದು ಹಾಗೂ ತೂಕ ಹೆಚ್ಚಾಗುವುದು ಕಂಡುಬಂದರೆ ಅಂಡಾಶಯದ ಕ್ಯಾನ್ಸರ್ ಇರಬಹುದೆಂಬ ಅನುಮಾನ ಹುಟ್ಟುತ್ತದೆ.

ಮಂದ ಹಸಿವು: ಹಸಿವು ಆಗದಿರುವುದು, ಏನಾದರೂ ತಿನ್ನಬೇಕೆಂಬ ಹಂಬಲ ಉಂಟಾಗದಿರುವುದೂ ಅಂಡಾಶಯ ಕ್ಯಾನ್ಸರ್‌ನ ಲಕ್ಷಣವಾಗಿರುತ್ತದೆ.

ಕಿಬ್ಬೊಟ್ಟೆಯಲ್ಲಿ ಸೆಳೆತ: ಕಿಬ್ಬೊಟ್ಟೆಯಲ್ಲಿ ನೋವು, ಸೆಳೆತ, ಊತ ಕಾಣಿಸಿಕೊಂಡರೆ ಅದೂ ಅಂಡಾಶಯದ ಕ್ಯಾನ್ಸರ್‌ನ ಲಕ್ಷಣವಾಗಿರುತ್ತದೆ.

ಉದರ ಶೂಲೆ: ಅನಗತ್ಯವಾದ ಉದರಶೂಲೆ ಬಿಟ್ಟೂಬಿಡದೆ ಕಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಿ ಕೂರದಿರಿ. ಎಲ್ಲ ಕ್ಯಾನ್ಸರ್‌ಗಳೂ ಈ ಲಕ್ಷಣವನ್ನು ಎತ್ತಿಹಿಡಿಯುತ್ತವೆ.

ಗುದನಾಳದ ರಕ್ತಸ್ರಾವ: ಪದೇಪದೆ ಅನಗತ್ಯವಾದ ರಕ್ತಸ್ರಾವವು ಗುದನಾಳದಲ್ಲಿ ಉಂಟಾದರೆ ಅದನ್ನು ನಿರ್ಲಕ್ಷಿಸುವುದರಲ್ಲಿ ಅರ್ಥವೇ ಇಲ್ಲ. ವೈದ್ಯರಲ್ಲಿ ತೋರಿಸುವುದು ಒಳ್ಳೆಯದು.

ತೂಕದಲ್ಲಿ ವ್ಯತ್ಯಯ: ಇದ್ದಕ್ಕಿದ್ದಂತೆ ತೂಕದಲ್ಲಿ ಅಗಾಧ ವ್ಯತ್ಯಯ ಉಂಟಾದರೆ ಅದು ಜಠರದ ಕ್ಯಾನ್ಸರ್ ಅಥವಾ ಕರುಳಿನ ಕ್ಯಾನ್ಸರ್‌ನ ಲಕ್ಷಣ ಆಗಿರಬಹುದು.

loader