Asianet Suvarna News Asianet Suvarna News

ರುಚಿ ರುಚಿ ಸೀಬೆಕಾಯಿ ಸೌಂದರ್ಯ ವರ್ಧಕವೂ ಹೌದು

ಸೀಬೆ ಹಣ್ಣನ್ನು ಎಲ್ಲರೂ ಇಷ್ಟಪಡುತ್ತಾರೆ. ಎಲ್ಲಾ ಕಾಲದಲ್ಲೂ ಸುಲಭವಾಗಿ ಸಿಗೋ ಈ ಹಣ್ಣು ಸಾಮಾನ್ಯ ಪರಿಸರದಲ್ಲೂ ಬೆಳೆಯುತ್ತದೆ. ಅಲ್ಲದೆ ಇದರ ರುಚಿಯು ಸೊಗಸು. ಆರೋಗ್ಯಕಾರಿ ಸೀಬೆ ಕಾಯಿ ಸೌಂದರ್ಯವೂ ಹೆಚ್ಚಿಸುತ್ತೆ.....

Guava enriches skin glow

 'ಬಡವರ ಸೇಬು' ಎಂದೇ ಕರೆಯುವ ಸೀಬೆಕಾಯಿ ಈಗ ಬಡವರಿಗೆ ಸಿಗುವಷ್ಟು ಅಗ್ಗವಲ್ಲ. ಆದರೆ, ಮಧುಮೇಹಿಗಳಿಗೂ ಒಳ್ಳೆ ಆಹಾರವಾಗಿರುವ ಇದರ ಸೇವನೆಯಿಂದ ಸೌಂದರ್ಯ ವೃದ್ಧಿಸುತ್ತೆ. ಏಕೆ ಇದು ಆರೋಗ್ಯಕ್ಕೆ ಬೇಕು?

  • ಕೆಂಪು ಸೀಬೆಹಣ್ಣಿನ ತಿರುಳು ತೆಗೆದು, ಮ್ಯಾಶ್ ಮಾಡಿ ಅದಕ್ಕೆ ಮೊಟ್ಟೆಯ ಹಳದಿ ಭಾಗ ಸೇರಿಸಿ ಮುಖಕ್ಕೆ ಹಚ್ಚಿ. 20 ನಿಮಿಷದ ನಂತರ ಇದನ್ನು ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಮಾಡಿದರೆ ಡೆಡ್ ಸ್ಕಿನ್ ನಿವಾರಣೆಯಾಗಿ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ. 
  • ಸೀಬೆ ಹಣ್ಣಿನಲ್ಲಿ ಲೈಕೊಪೀನ್ ಅಂಶವಿದೆ. ಇದು ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. 
  • ಚರ್ಮ ಸುಕ್ಕುಗಟ್ಟುವುದನ್ನು ಇದು ಮರೆಮಾಚುತ್ತದೆ. ಹಣ್ಣನ್ನು ಮುಖಕ್ಕೆ ಹಚ್ಚಿದರೆ  ಸುಕ್ಕಾಗುವುದು, ಗೆರೆಗಳು ಕಾಣಿಸಿಕೊಳ್ಳುವಂಥ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. 
  • ಪೇರಲೆಯಲ್ಲಿ ವಿಟಮಿನ್, ಮಿನರಲ್ಸ್ ಮತ್ತು ನ್ಯೂಟ್ರಿಯೆಂಟ್ಸ್ ಅಧಿಕವಾಗಿದ್ದು, ಸ್ಕಿನ್ ಟೋನರ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಮುಖದಲ್ಲಿ  ಮೊಡವೆ, ಕಲೆ ಎಲ್ಲವೂ ನಿವಾರಣೆಯಾಗುತ್ತವೆ. 
  • ಒಂದು ವೇಳೆ ಮುಖದಲ್ಲಿ ಕಪ್ಪು ಕಲೆ ಅಥವಾ ಮೊಡವೆ ಕಾಣಿಸಿಕೊಂಡರೆ ಸೀಬೆ ಎಲೆಗಳನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ . ಇದನ್ನು ಪ್ರತಿದಿನ ಮಾಡಿದರೆ ಕಲೆ ನಿವಾರಣೆಯಾಗುತ್ತದೆ. 
  • ಸ್ಕಿನ್ ಆರೋಗ್ಯಯುತವಾಗಿರಲು ನೀರು ಅತ್ಯಗತ್ಯ. ಸೀಬೆ ತಿಂದರೆ ದೇಹಕ್ಕೆ ಅಗತ್ಯ ನೀರಿನಂಶ ಸಿಗುತ್ತದೆ. ಇದರಿಂದ ತ್ವಚೆ ಒಣಗುತ್ತದೆ ಕಾಪಾಡುತ್ತದೆ.
  • ಸೀಬೆ ಎಲೆಗಳನ್ನು ಪೇಸ್ಟ್ ಮಾಡಿ ಕೂದಲಿಗೆ ಹಚ್ಚುವುದರಿಂದ  ಕೂದಲು ಉದುರುವುದು ನಿವಾರಣೆಯಾಗುತ್ತದೆ. 
Follow Us:
Download App:
  • android
  • ios