ನಮ್ಮ ದೇಶದಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಡ್ಯಾನ್ಸ್ ಕಂಡುಬರದಿರಲು ಸಾಧ್ಯವೇ ಇಲ್ಲ. ಡ್ಯಾನ್ಸ್ ಮದುವೆ ಸಮಾರಂಭದ ಒಂದು ಭಾಗವೆಂಬಂತಾಗಿದೆ. ಇನ್ನು ಈ ವೇಳೆ ಡ್ಯಾನ್ಸ್ ಮಾಡುವ ಅವಕಾಶ ಸಾಮಾನ್ಯವಾಗಿ ವದು ವರರ ಗೆಳೆಯ/ ಗೆಳತಿಯರ ಪಾಲಾಗುತ್ತದೆ. ಹೀಗಿರುವಾಗ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವರನ ಗೆಳೆಯರು ವೇದಿಕೆಯಲ್ಲೇ ಡ್ಯಾನ್ಸ್ ಮಾಡಲಾರಂಭಿಸಿದ್ದಾರೆ. ಇದನ್ನು ಕಂಡು ತನ್ನನ್ನು ತಾನು ತಡೆಯದಾದ ವರ, ಪತ್ನಿಯನ್ನು ಬಿಟ್ಟು ಗೆಳೆಯರೊಂದಿಗೆ ಕುಣಿಯಲಾರಂಭಿಸಿದ್ದಾನೆ.

ನವದೆಹಲಿ(ಮಾ.01): ನಮ್ಮ ದೇಶದಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಡ್ಯಾನ್ಸ್ ಕಂಡುಬರದಿರಲು ಸಾಧ್ಯವೇ ಇಲ್ಲ. ಡ್ಯಾನ್ಸ್ ಮದುವೆ ಸಮಾರಂಭದ ಒಂದು ಭಾಗವೆಂಬಂತಾಗಿದೆ. ಇನ್ನು ಈ ವೇಳೆ ಡ್ಯಾನ್ಸ್ ಮಾಡುವ ಅವಕಾಶ ಸಾಮಾನ್ಯವಾಗಿ ವದು ವರರ ಗೆಳೆಯ/ ಗೆಳತಿಯರ ಪಾಲಾಗುತ್ತದೆ. ಹೀಗಿರುವಾಗ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲಾತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವರನ ಗೆಳೆಯರು ವೇದಿಕೆಯಲ್ಲೇ ಡ್ಯಾನ್ಸ್ ಮಾಡಲಾರಂಭಿಸಿದ್ದಾರೆ. ಇದನ್ನು ಕಂಡು ತನ್ನನ್ನು ತಾನು ತಡೆಯದಾದ ವರ, ಪತ್ನಿಯನ್ನು ಬಿಟ್ಟು ಗೆಳೆಯರೊಂದಿಗೆ ಕುಣಿಯಲಾರಂಭಿಸಿದ್ದಾನೆ.

2017ರ ಫೆಬ್ರವರಿ 26ರಂದು 'Back Benchers' ಹೆಸರಿನ ಫೇಸ್'ಬುಕ್ ಪೇಜ್ ಒಂದರಲ್ಲಿ ಶೇರ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 60 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಅಲ್ಲದೇ 45 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಇನ್ನು ಈ ವಿಡಿಯೋಗೆ 'ಒಂದು ವೇಳೆ ನಿಮ್ಮ ಗೆಳೆಯರು ನಿಮ್ಮ ಮದುವೆಯಲ್ಲಿ ಹೀಗೆ ಕುಣಿಯದಿದ್ದರೆ ಅವರು ನಿಮ್ಮ ಗೆಳೆಯರೇ ಅಲ್ಲ' ಎಂಬ ಶೀರ್ಷಿಕೆಯನ್ನೂ ನೀಡಲಾಗಿದೆ.

ಪತ್ನಿಯನ್ನು ಬಿಟ್ಟು ಗೆಳೆಯರೊಂದಿಗೆ ಕುಣಿಯುವ ಪತಿರಾಯ, ಸ್ವಲ್ಪ ಸಮಯದ ಬಳಿಕ ಮತ್ತೆ ವಧುವಿನ ಬಳಿ ಹೋಗಿ ನಿಲ್ಲುತ್ತಾನೆ. ಆಧರೆ ಗೆಳೆಯರು ಮಾತ್ರ ವೇದಿಕೆ ಬಿಡದೇ ಕುಣಿಯುವುದರಲ್ಲಿ ಮಗ್ನರಾಗಿರುತ್ತಾರೆ.