ಇನ್ನೇನು ಬೇಸಿಗೆ ಕಾಲ ಆರಂಭವಾಗಿದೆ. ಬಿಸಿ ಪಾನೀಯಗಳನ್ನು ಬಿಟ್ಟು ತಣ್ಣನೆಯ ಪಾನಿಯಗಳತ್ತ ಮನಸ್ಸು ವಾಲಿದೆ. ಬೇಸಿಗೆಯಲ್ಲಿ ಎಷ್ಟು ದ್ರವಾಹಾರ ಸೇವನೆ ಮಾಡಿದರೂ ಕೂಡ ಮನಸ್ಸು ಪ್ರಫುಲ್ಲವಾಗುವುದಿಲ್ಲ. ಅದರಂತೆ ನಿಮಗೆ ಈ ಬೇಸಿಗೆಯಲ್ಲಿ ತಣ್ಣಗೆ ಹಾಗೂ ಹೆಲ್ತಿಯಾಗಿ ಕುಡಿಯುವ ಪಾನೀಯವೊಂದನ್ನು ತಯಾರು ಮಾಡುವುದನ್ನು ನಾವಿಂದು ನಿಮಗೆ ತಿಳಿಸುತ್ತಿದ್ದೇವೆ.

ಹೆಲ್ದಿ ದ್ರಾಕ್ಷಿ – ಖರ್ಜೂರ ಸಿರಪ್ ಜ್ಯೂಸ್ ಮಾಡುವುದು ಹೇಗೆ..?

ಇನ್ನೇನು ಬೇಸಿಗೆ ಕಾಲ ಆರಂಭವಾಗಿದೆ. ಬಿಸಿ ಪಾನೀಯಗಳನ್ನು ಬಿಟ್ಟು ತಣ್ಣನೆಯ ಪಾನಿಯಗಳತ್ತ ಮನಸ್ಸು ವಾಲಿದೆ. ಬೇಸಿಗೆಯಲ್ಲಿ ಎಷ್ಟು ದ್ರವಾಹಾರ ಸೇವನೆ ಮಾಡಿದರೂ ಕೂಡ ಮನಸ್ಸು ಪ್ರಫುಲ್ಲವಾಗುವುದಿಲ್ಲ. ಅದರಂತೆ ನಿಮಗೆ ಈ ಬೇಸಿಗೆಯಲ್ಲಿ ತಣ್ಣಗೆ ಹಾಗೂ ಹೆಲ್ತಿಯಾಗಿ ಕುಡಿಯುವ ಪಾನೀಯವೊಂದನ್ನು ತಯಾರು ಮಾಡುವುದನ್ನು ನಾವಿಂದು ನಿಮಗೆ ತಿಳಿಸುತ್ತಿದ್ದೇವೆ.

ದ್ರಾಕ್ಷಿ ಹಾಗೂ ಖರ್ಜೂರದ ಸಿರಪ್ ಜ್ಯೂಸ್ ತಯಾರಿಸುವುದು ಹೇಗೆ..?

*ಬೀಜವಿಲ್ಲದ ಹಸಿರು ದ್ರಾಕ್ಷಿ

*ಖರ್ಜೂರ ಅಥವಾ ಬೆಲ್ಲ

*ಒಂದು ಚಿಟಿಕೆ ಉಪ್ಪು

*ನೀರು

ಮಾಡುವ ವಿಧಾನ

ದ್ರಾಕ್ಷಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಉಪ್ಪು ನೀರಿನಲ್ಲಿ ಹಾಕಿ ಇನ್ನೊಂದು ಬಾರಿ ತೊಳೆಯಿರಿ.

ನಂತರ ದ್ರಾಕ್ಷಿಯನ್ನು ಮಿಕ್ಸಿ ಮಾಡಿಕೊಳ್ಳಿ

ಅದಕ್ಕೆ ಒಂದು ಚಿಟಿಕೆಯಷ್ಟು ಉಪ್ಪನ್ನು ಸೇರಿಸಿ

ಅದಕ್ಕೆ ನೀರನ್ನು ಸೇರಿಸಿ

ನಿಮಗೆ ಬೇಕಾದ ಹದದಲ್ಲಿ ಜ್ಯೂಸ್ ದಪ್ಪನಾಗಿರಲಿ

ನಿಮಗೆ ಅಗತ್ಯವಿರುವಷ್ಟು ಖರ್ಜೂರದ ಸಿರಪ್ ಅಥವಾ ಬೆಲ್ಲವನ್ನು ಸೇರಿಸಿ

ಈಗ ದ್ರಾಕ್ಷಿ ಜ್ಯೂಸ್ ಕುಡಿಯಲು ಸಿದ್ಧವಾಗುತ್ತದೆ

ಫೋಟೋ ಮತ್ತು ರೆಸಿಪಿ ಕ್ರೆಡಿಟ್: ಶಿಲ್ಪಾ ಸುನೀಲ್ ಫೇಸ್‌ಬುಕ್ ಪೋಸ್ಟ್