ಕಾಫಿ ಪ್ರಿಯರೇ ನಿಮಗಿಲ್ಲಿದೆ ಗುಡ್ ನ್ಯೂಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 15, Jul 2018, 10:59 AM IST
Good news for coffee lovers
Highlights

ಕಾಫಿ ಪ್ರಿಯರಿಗೊಂದು ಸಿಹಿಸುದ್ದಿ. ಕಾಫಿ ಕುಡಿಯುವುದರಿಂದ ಹೆಚ್ಚುಕಾಲ ಜೀವಿಸಬಹುದಂತೆ. ಹೀಗೆಂದು ಸಮೀಕ್ಷೆಯೊಂದು ಹೇಳಿದೆ.

ಬೆಂಗಳೂರು :  ಕಾಫಿ ಪ್ರಿಯರಿಗೊಂದು ಸಿಹಿಸುದ್ದಿ. ಕಾಫಿ ಕುಡಿಯುವುದರಿಂದ ಹೆಚ್ಚುಕಾಲ ಜೀವಿಸಬಹುದಂತೆ. ಹೀಗೆಂದು ಸಮೀಕ್ಷೆಯೊಂದು ಹೇಳಿದೆ. ಲಕ್ಷಾಂತರ ಬ್ರಿಟಿಷ್ ಯುವಕರನ್ನು ಸಮೀಕ್ಷೆಗೊಳಪಡಿಸಿದಾಗ ಕಾಫಿ ಕುಡಿಯದವರಿಗಿಂತ, ಕಾಫಿ ಕುಡಿಯುವವರು ದೀರ್ಘಾಯು ಷಿಗಳೆಂಬುದು ಸಾಬೀತಾಗಿದೆ. ಹಾಗೆಯೇ ಈ ದೀರ್ಘಾಯುಷ್ಯವು ಕಾಫಿಯನ್ನು ಎಷ್ಟು ಪ್ರಮಾಣದಲ್ಲಿ ಸೇವಿಸುತ್ತಾರೆ ಹಾಗೂ ಅವರ ಅನುವಂಶೀಯತೆಯನ್ನು ಅವಲಂಬಿಸಿರು ತ್ತದೆ ಎಂದೂ ಕೂಡ ಹೇಳಲಾಗಿದೆ. 

ನ್ಯಾಷನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಷನ್ ಬ್ರಿಟನ್‌ನ ಬಯೋಬ್ಯಾಂಕ್‌ನಿಂದ ಸಮೀ ಕ್ಷೆಯಲ್ಲಿ ಭಾಗವಹಿಸಲು ಇಚ್ಛಿಸುವ ವ್ಯಕ್ತಿಗಳ ರಕ್ತದ  ಮಾದರಿಯನ್ನು ಪಡೆದು ಸಮೀಕ್ಷೆ ಕೈಗೊಂಡಿದ್ದು, ಅದನ್ನು ಅಮೆರಿಕಾದ ‘ಜೆಎಎಂಎ ಇಂಟರ್ ನಲ್ ಮೆಡಿಸಿನ್’ ಜರ್ನಲ್ ಪ್ರಕಟಮಾಡಿದೆ. ಸುಮಾರು 5 ಲಕ್ಷ ವ್ಯಕ್ತಿಗಳಿಂದ ರಕ್ತದ ಮಾದರಿ ಪಡೆದು ಈ ಸಮೀಕ್ಷೆ ಕೈಗೊಳ್ಳಲಾಗಿದೆ. 

ಒಟ್ಟಾರೆ ಸಮೀಕ್ಷೆಯಲ್ಲಿ ಕಾಫಿ ಕುಡಿಯು ವವರು ಶೇ.10 - 15 ರಷ್ಟು ಹೆಚ್ಚು ಕಾಲ ಜೀವಿಸುತ್ತಾರೆ ಹಾಗೂ ಆರೋಗ್ಯವಂತರಾಗಿರುತ್ತಾರೆ ಎಂದಿದೆ. ಕಳೆದ ವರ್ಷ ಯು. ಕೆ ವಿಶ್ವವಿದ್ಯಾಲಯವೊಂದು ನಡೆಸಿದ ಸಮೀಕ್ಷೆಯಲ್ಲಿ ಯಾರು ದಿನವೊಂದಕ್ಕೆ ಕನಿಷ್ಠ 3 - 4 ಕಪ್ ಕಾಫಿ ಕುಡಿಯು ತ್ತಾರೋ ಅವರು ಅಕಾಲಿಕ ಮರಣ ಹೊಂದುವುದು ಕಡಿಮೆ ಎಂದು ಸಾಬೀತಾಗಿತ್ತು. ಹಾಗೆಂದು ಹೆಚ್ಚು ಪ್ರಮಾಣದ ಸೇವನೆ ಕೂಡ ಆರೋಗ್ಯಕರವಲ್ಲ ಎಚ್ಚರ.

loader