ಪ್ರೀತಿ ಹೀಗೂ ಇರುತ್ತಾ?

Good Love Story
Highlights

ಒಬ್ಬ ಅಂಧ ಹುಡುಗಿಗೆ ಆಕೆಯ ಬಗ್ಗೆಯೇ ಹೇವರಿಕೆ. ತನಗೆ ಹೊರಜಗತ್ತನ್ನು  ನೋಡಲಾಗುತ್ತಿಲ್ಲವಲ್ಲ ಅಂತ ಹಳಹಳಿಕೆ. ಜಗತ್ತಿನಲ್ಲಿ ಅವಳನ್ನು ಬಹಳ ಇಷ್ಟಪಡುತ್ತಿದ್ದ ವ್ಯಕ್ತಿ ಎಂದರೆ ಅವಳ ಬಾಯ್‌ಫ್ರೆಂಡ್. ಅವಳಿಗಾಗಿ ಆತ ಏನು ಮಾಡಲೂ ಸಿದ್ಧನಿದ್ದ. ನನ್ನ ಕಣ್ಣುಗಳಿಂದ ಈ ಜಗತ್ತನ್ನು ನೋಡುವವರೆಗೆ ನಾನು  ಮದುವೆಯಾಗಲಾರೆ ಅನ್ನುತ್ತಿದ್ದಳು.

ಒಮ್ಮೆ ಯಾರೋ ಆಕೆಗೆ ಕಣ್ಣು ದಾನ ಮಾಡಿದರು. ಈಗ ಅವಳು ಎಲ್ಲವನ್ನೂ ಸ್ಪಷ್ಟವಾಗಿ ನೋಡಬಲ್ಲಳು, ತನ್ನ ಬಾಯ್‌ಫ್ರೆಂಡ್‌ಅನ್ನೂ. ಆತ ಅಂದ,‘ಈಗ ನೀನು ನಿನ್ನ ಕಣ್ಣಿನಿಂದಲೇ ಜಗತ್ತನ್ನು ನೋಡಬಲ್ಲೆ. ಇನ್ನಾದರೂ ನನ್ನ ಮದುವೆಯಾಗುವೆಯಾ?’ ತನ್ನ ಬಾಯ್‌ಫ್ರೆಂಡ್‌ನತ್ತ ತಿರುಗಿ ನೋಡಿದ ಆ ಹುಡುಗಿ ಶಾಕ್ ಆದಳು. ಆತನೂ ಅಂಧನಾಗಿದ್ದ.

ಅವಳು ಆತನನ್ನು ಮದುವೆಯಾಗಲು ನಿರಾಕರಿಸಿದಳು. 
ಒಂದು ಚಿಕ್ಕ ನೋಟ್ ಬರೆದಿಟ್ಟು ಆತ ಕಂಬನಿಯೊಂದಿಗೆ ಅವಳನ್ನು ತೊರೆದು ಹೋದ. ಅದರಲ್ಲಿ ಹೀಗೆ ಬರೆದಿತ್ತು, ‘ನನ್ನ ಕಣ್ಣುಗಳನ್ನು ಜೋಪಾನವಾಗಿ ನೋಡಿಕೋ ಗೆಳತಿ’ 

loader