ಇಲ್ಮಾ ಗೋರ್ ಎಂಬ ಕಲಾವಿದ ಸುಮಾರು ಒಂದು ಲಕ್ಷ ಮೌಲ್ಯದ 24 ವ್ಯಾನಿಟಿ ಬ್ಯಾಗ್‌ಗಳನ್ನು ಬಳಸಿ ಟಾಯ್ಲೆಟ್ ತಯಾರಿಸಿದ್ದಾನೆ

ಚಿನ್ನದ ಟಾಯ್ಲೆಟ್ ತಯಾರಿಸಿದ್ದನ್ನು ನೋಡಿದ್ದೀರಿ. ಆದರೆ, ಇದೀಗ ಕಲಾವಿದನೊಬ್ಬ ವ್ಯಾನಿಟಿ ಬ್ಯಾಗ್‌ಗಳ ತಯಾರಿಕೆ ಯಲ್ಲಿ ಪ್ರಸಿದ್ಧವಾಗಿರುವ ಲೂಯಿ ವಿಟಾನ್ ಬ್ಯಾಗ್‌ನಿಂದ ಟಾಯ್ಲೆಟ್ ಸಿದ್ಧಪಡಿಸಿದ್ದಾನೆ. ಮನೆಯಲ್ಲಿ ಐಷಾರಾಮಿ ಟಾಯ್ಲೆಟ್ ಇರಬೇಕು ಎಂದು ಬಯಸುವವರು ಇದನ್ನು ಖರೀದಿಸಬಹುದು. ಆದರೆ, ಇದರ ಬೆಲೆ ಬೆಲೆ 65 ಲಕ್ಷ ರು! ಇಲ್ಮಾ ಗೋರ್ ಎಂಬ ಕಲಾವಿದ ಸುಮಾರು ಒಂದು ಲಕ್ಷ ಮೌಲ್ಯದ 24 ವ್ಯಾನಿಟಿ ಬ್ಯಾಗ್‌ಗಳನ್ನು ಬಳಸಿ ಟಾಯ್ಲೆಟ್ ತಯಾರಿಸಿದ್ದಾನೆ.