ಸುಪ್ರೀಂಕೋರ್ಟ್ ಬಾತ್ ರೂಮ್‌ಗಳನ್ನು ಲಿಂಗ ತಟಸ್ಥವಾಗಿ ಮಾರ್ಪಡಿಸಲು ಸಲಹೆ
ಸುಪ್ರೀಂ ಕೋರ್ಟ್ ಬಾತ್ ರೂಮುಗಳನ್ನು ಲಿಂಗ ತಟಸ್ಥವನ್ನಾಗಿ ರೂಪಿಸಬೇಕು ಎನ್ನುವ ಮನವಿಯೊಂದು ನ್ಯಾಯಾಧೀಶೆ ಹಿಮಾ ಕೊಹ್ಲಿ ಅವರಿಗೆ ಬಂದಿದೆ. ತೃತೀಯ ಲಿಂಗಿಗಳ ಅನುಕೂಲಕ್ಕೆ ಇದು ಅಗತ್ಯ ಎಂದು ಲಾಯರ್ ಒಬ್ಬರು ಪ್ರತಿಪಾದಿಸಿದ್ದಾರೆ. ಹಾಗೆಯೇ, ಸುಪ್ರೀಂ ಕೋರ್ಟ್ ಸಮಿತಿಯೊಂದಕ್ಕೆ ತೃತೀಯ ಲಿಂಗಿಗಳನ್ನು ಸೇರ್ಪಡೆ ಮಾಡಿಕೊಳ್ಳಬೇಕೆಂದೂ ಮನವಿ ಮಾಡಲಾಗಿದೆ.
ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳು ಸಂಭವಿಸುತ್ತಿವೆ. ಮೊದಲು ಪುರುಷ ಮತ್ತು ಸ್ತ್ರೀ ಎರಡೇ ಲಿಂಗಗಳೆಂದು ಭಾವಿಸಲಾಗುತ್ತಿತ್ತು. ಇದೀಗ, ಲಿಂಗ ಪರಿವರ್ತನೆ ಮಾಡಿಸಿಕೊಂಡ ತೃತೀಯ ಲಿಂಗಿಗಳೂ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಅಷ್ಟಕ್ಕೂ ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಸಮಾನ ಸೌಲಭ್ಯ, ಗೌರವ ನೀಡಬೇಕು ಎನ್ನುವ ಕೂಗು ಇಂದು-ನಿನ್ನಯದಲ್ಲ. ಇತ್ತೀಚೆಗೆ ಈ ದನಿ ದೊಡ್ಡದಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶೆ ಹಿಮಾ ಕೊಹ್ಲಿ ಅವರಿಗೆ ಇತ್ತೀಚೆಗೆ ಒಬ್ಬ ಲಾಯರ್ ಪತ್ರ ಬರೆದಿದ್ದಾರೆ. ಅದರಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಿರುವುದು ವಿಶೇಷ. ಸುಪ್ರೀಂ ಕೋರ್ಟಿನ ಜೆಂಡರ್ ಸ್ಯಾಟಿಸ್ ಫ್ಯಾಕ್ಷನ್ ಮತ್ತು ಆಂತರಿಕ ದೂರುಗಳ ಸಮಿತಿ ಅಧ್ಯಕ್ಷರಾಗಿರುವ ಹಿಮಾ ಕೊಹ್ಲಿ ಅವರಿಗೆ ಪತ್ರದ ಸಾರಾಂಶ ಕುತೂಹಲಭರಿತವೂ ಆಗಿದೆ.
ಲಾಯರ್ ರೋಹಿನ್ ಭಟ್ ಎನ್ನುವವರು ಈ ಪತ್ರ ಬರೆದಿದ್ದು, ಈ ಸಮಿತಿಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವಂತೆ ಕೋರಿದ್ದಾರೆ. ಸಮಿತಿಯಲ್ಲಿ ತೃತೀಯ ಲಿಂಗಿಗಳಿಗೂ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಸುಪ್ರೀಂಕೋರ್ಟಿನ ಈ ಸಮಿತಿಯಲ್ಲಿ ೧೧ ಸದಸ್ಯರಿದ್ದು, ಲಿಂಗ ಬದಲಾವಣೆ ಮಾಡಿಕೊಂಡಿರುವವರಿಗೆ ಪ್ರಾತಿನಿಧ್ಯ ಇನ್ನೂ ದೊರಕಿಲ್ಲ ಎಂದು ಹೇಳಿದ್ದಾರೆ.
ಕೇರಳದ ಮೊಟ್ಟಮೊದಲ ತೃತೀಯ ಲಿಂಗಿ ವಕೀಲೆ ಎನಿಸಿದ ಪದ್ಮಲಕ್ಷ್ಮೀ!
ಲಿಂಗ ತಟಸ್ಥ (Gender Neutral) ಬಾತ್ ರೂಮ್ (Bathroom)
ಸಮಿತಿಯಲ್ಲಿ (Committee) ಸ್ಥಾನ ನೀಡುವುದು ಮಾತ್ರವಲ್ಲದೆ, ಸುಪ್ರೀಂ ಕೋರ್ಟಿನ (Supreme Court) ಕೆಲವು ಮೂಲಭೂತ ವ್ಯವಸ್ಥೆಯಲ್ಲೂ (Infrastructure) ಬದಲಾವಣೆ ತರಬೇಕಾಗಿದೆ ಎಂದು ಗಮನ ಸೆಳೆದಿದ್ದಾರೆ. ಇಲ್ಲಿನ ಬಾತ್ ರೂಮುಗಳನ್ನು ಲಿಂಗ ತಟಸ್ಥ ಬಾತ್ ರೂಮುಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಪ್ರಸ್ತುತ ಇರುವ ಬಾತ್ ರೂಮುಗಳು ಒಂದೋ ಸ್ತ್ರೀಯರಿಗೆ, ಮತ್ತೊಂದು ಪುರುಷರಿಗೆ ಎಂದಿರುತ್ತದೆಯಲ್ಲವೇ? ಆದರೆ, ಬಾತ್ ರೂಮುಗಳನ್ನು ಲಿಂಗ ತಟಸ್ಥವನ್ನಾಗಿ ರೂಪಿಸುವ ಮೂಲಕ ತೃತೀಯ ಲಿಂಗಿಗಳಿಗೂ (Transgenders) ಮುಜುಗರವಿಲ್ಲದೆ ಪ್ರವೇಶಿಸುವ ಅವಕಾಶ ದೊರೆಯಲಿದೆ ಎನ್ನುವುದು ಅವರ ವಿಚಾರ.
ಬಾರ್ ಕೌನ್ಸಿಲ್ (Bar Council) ಎಲ್ಲರನ್ನೂ ಒಳಗೊಳ್ಳುವ ಅಗತ್ಯ
ಸುಪ್ರೀಂ ಕೋರ್ಟಿಗೆ ಲಿಂಗ ಬದಲಾವಣೆ ಮಾಡಿಕೊಂಡ ಲಾಯರ್ ಗಳು ಕ್ರಮೇಣ ಆಗಮಿಸುತ್ತಿದ್ದಾರೆ. ಈ ಕುರಿತು ರೋಹಿನ್ ಭಟ್ (Rohin Bhat) ಗಮನ ಸೆಳೆದಿದ್ದು, “ಕಳೆದ ವಾರ ಕೇರಳ (Kerala) ರಾಜ್ಯ ಬಾರ್ ಕೌನ್ಸಿಲ್ ಗೆ ತೃತೀಯ ಲಿಂಗಿಯೊಬ್ಬರು ಲಾಯರ್ (Laywer) ಆಗಿ ನೋಂದಾಯಿತರಾಗಿದ್ದಾರೆ. ಹೀಗೆಯೇ, ಮುಂದಿನ ದಿನಗಳಲ್ಲಿ ಇಂತಹ ಲಾಯರ್ ಗಳು ಬಾರ್ ಕೌನ್ಸಿಲ್ ಗೆ ಸೇರ್ಪಡೆಯಾಗಲಿದ್ದಾರೆ. ಇವರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾಗಿದೆ. ಭವಿಷ್ಯದಲ್ಲಿ ನಿಜಕ್ಕೂ ಎಲ್ಲರನ್ನೂ ಒಳಗೊಳ್ಳುವ ಬಾರ್ ಕೌನ್ಸಿಲ್ ನಿರ್ಮಾಣವಾಗಲು ಸುಪ್ರೀಂ ಕೋರ್ಟ್ ಸಾಂಸ್ಥಿಕ ಮತ್ತು ಪ್ರಾದೇಶಿಕ ಅಭಿವೃದ್ಧಿಗಾಗಿ, ಸ್ತ್ರೀ ದ್ವೇಷವನ್ನು ಪ್ರತಿರೋಧಿಸಬೇಕಾಗಿದೆ. ಸಮಾಜದ ವಿವಿಧ ವಿಭಾಗಗಳಾದ ಜಾತಿವಾದ, ಸಾಂಸ್ಕೃತಿಕ ಕೋಮುವಾದ, ವರ್ಣಭೇದಗಳನ್ನು ನಿಯಂತ್ರಿಸಲು ಮುಂದಾಗಬೇಕಿದೆʼ ದೀರ್ಘವಾದ ಪತ್ರವನ್ನೇ ಬರೆದಿದ್ದಾರೆ.
ಈ ವಯಸ್ಸಲ್ಲಿ ನಿಮ್ಮ ಸಾಧನೆಗೆ ಹೆಮ್ಮೆ ಆಗುತ್ತೆ; ಕಾನೂನು ಪದವಿ ಪಡೆದ ತಾಯಿಗೆ ವೈಷ್ಣವಿ ಗೌಡ ಮೆಚ್ಚುಗೆ
ಹೆಚ್ಚುವರಿ ಕಾಲಂ ಸೇರ್ಪಡೆಗೆ ಮನವಿ
ಕಳೆದ ನವೆಂಬರ್ ನಲ್ಲಿ ಭಟ್ ಅವರು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಪತ್ರ ಬರೆದು ಸುಪ್ರೀಂಕೋರ್ಟಿನ ಅರ್ಜಿಯಲ್ಲಿ ಬದಲಾವಣೆ ತರಬೇಕೆಂದು ವಿನಂತಿ ಮಾಡಿದ್ದರು. ಅದರಲ್ಲಿರುವ ಲಾಯರ್ ಗಳ ಸರ್ವನಾಮ ತಿಳಿಸುವ ಕಾಲಂಗೆ ಹೆಚ್ಚುವರಿ ಕಾಲಂ ಸೇರ್ಪಡೆ ಮಾಡಬೇಕೆಂದು ಕೋರಿದ್ದರು.