ಡೀಫ್ ಪೇಕ್‌ ಟು ಸುಹಾಗ್ ರಾತ್ ಪಾನ್‌ವರೆಗೆ: ವರ್ಷಾಂತ್ಯದಲ್ಲಿ ಸಂಚಲನ ಸೃಷ್ಟಿಸಿದ ಕೆಲ ಸುದ್ದಿಗಳ ಹಿನ್ನೋಟ

ಈ ವರ್ಷಾಂತ್ಯದಲ್ಲಿ ಆರೋಗ್ಯ, ಜೀವನಶೈಲಿ, ಪ್ರಯಾಣ, ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಕೆಲ ಮಹತ್ವದ ವಿಚಾರಗಳ ಇಣುಕು ನೋಟ ಇಲ್ಲಿದೆ. 

From Deepfake to Suhag Rath Paan Here's a sneak peek of that created buzz in the health, lifestyle, travel, and education sectors this year end 2023 akb

23ನೇ ಪ್ರಯತ್ನದಲ್ಲಿ ಎಂಎಸ್ಸಿ ಗಣಿತ ಪರೀಕ್ಷೆ ಪಾಸ್ ಮಾಡಿದ ಸೆಕ್ಯುರಿಟಿ ಗಾರ್ಡ್

ಮಧ್ಯಪ್ರದೇಶ (Madhyapradesh) ದ ಜಬಲ್‌ಪುರದ ಭದ್ರತಾ ಸಿಬ್ಬಂದಿ ರಾಜ್‌ಕರನ್ ಬರುವಾ ತಮ್ಮ 23ನೇ ಪ್ರಯತ್ನದಲ್ಲಿ ತಮ್ಮ 53ನೇ ವಯಸ್ಸಿನಲ್ಲಿ  ಗಣಿತ (Mathematics)ದಲ್ಲಿ ಎಂಎಸ್ಸಿ (MSc) ಪರೀಕ್ಷೆ ಪಾಸು ಮಾಡಿ ಅನೇಕರಿಗೆ ಮಾದರಿಯಾಗಿದ್ದಾರೆ. 

ರಾಮ ಭಾರತದಿಂದ ಲಂಕೆಗೆ ಹೋದ ಮಾರ್ಗದಲ್ಲೇ ಹಡಗು ಸೇವೆ 
ಭಾರತದ ತಮಿಳುನಾಡು ನಗರದಿಂದ ಶ್ರೀಲಂಕಾಕ್ಕೆ ಹಡಗು ಸೇವೆಯನ್ನು ಈ ವರ್ಷ ಆರಂಭಿಸಲಾಗಿದೆ. ಆಕ್ಟೋಬರ್‌ನಲ್ಲಿ ಈ ಸೇವೆ ಆರಂಭವಾಗಿದ್ದು, ತಮಿಳುನಾಡಿನ ನಾಗಪಟ್ಟಿಣಂ ಮತ್ತು ಶ್ರೀಲಂಕಾದ ಕಂಕೆಸಂತುರೈ ನಡುವೆ ಫೇರಿ ರೈಡ್ ನಡೆಯಲಿದೆ.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ತುಮಕೂರು ಬಳಿ ನಿರ್ಮಾಣ
ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿನ ಟ್ರಾಫಿಕ್ ಹೊರೆ ತಗ್ಗಿಸಲು ತುಮಕೂರು ರಸ್ತೆಯಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ತುಮಕೂರು- ಚಿತ್ರದುರ್ಗ ನಡುವಿನ ಮಾರ್ಗದಲ್ಲಿ ಸ್ಥಳ ಗುರುತಿಸಲಾದ ಸುದ್ದಿಯಿಂದ ರಾಜ್ಯದ ವಿಮಾನ ಪ್ರಯಾಣಿಕರು ಸಂತಸಗೊಂಡಿದ್ದಾರೆ.

 7 ಅಡಿ 9 ಇಂಚು ಕೂದಲು ಬಿಟ್ಟು ಗಿನ್ನೆಸ್ ದಾಖಲೆ ಪಡೆದ ಯುಪಿ ಮಹಿಳೆ

ಭಾರತೀಯ ಮಹಿಳೆಯೊಬ್ಬರು ತಮ್ಮ ಅಸಾಧಾರಣ ಉದ್ದ ಮತ್ತು ಸೊಂಪಾದ ಕೂದಲಿನೊಂದಿಗೆ ಸುದ್ದಿ ಮಾಡುತ್ತಿದ್ದಾರೆ. 46 ವರ್ಷದ ಉತ್ತರ ಪ್ರದೇಶ ಮೂಲದ ಸ್ಮಿತಾ ಶ್ರೀವಾಸ್ತವ್ ಜೀವಂತ ವ್ಯಕ್ತಿ ಹೊಂದಿರುವ ಉದ್ದನೆಯ ಕೂದಲಿಗಾಗಿ ಗಿನ್ನೆಸ್ ವಿಶ್ವ ದಾಖಲೆಯ ಪ್ರಶಸ್ತಿಯ ಪಡೆದಿದ್ದಾರೆ.

ಡೀಫ್‌ ಫೇಕ್‌ ಆಯ್ತು, ಈಗ ಕ್ಲಿಯರ್‌ ಫೇಕ್‌ ಕಾಟ
ಡೀಪ್‌ ಫೇಕ್‌ ತಂತ್ರಜ್ಞಾನದಿಂದಾಗುವ ಅನಾಹುತಗಳು ಕಣ್ಣ ಮುಂದಿವೆ. ಚಲನಚಿತ್ರರಂಗದ ಹಲವು ತಾರೆಯರು ಇದರಿಂದ ಸಾಕಷ್ಟು ಕಿರುಕುಳ ಅನುಭವಿಸಿದ್ದಾರೆ. ಇದರಜೊತೆಗೆ ಈಗ ಕ್ಲಿಯರ್‌ ಫೇಕ್‌ ಎನ್ನುವ ಮಾಲ್ವೇರ್‌ ವಿಂಡೋಸ್‌ ಬಳಕೆದಾರರನ್ನು ತಲುಪಿವೆ. ಈ ಬಗ್ಗೆ ಲ್ಯಾಪ್‌ಟಾಪ್‌ ಬಳಕೆದಾರರು ಎಚ್ಚರವಿರಬೇಕಿದೆ.

ಸಸ್ಯಾಹಾರ ಸೇವಿಸುವವರಲ್ಲಿ ಭಾರತಕ್ಕೆ ಮೊದಲ ಸ್ಥಾನ !
ಬ್ರಿಟಿಷ್ ಮೆಡಿಕಲ್ ಜರ್ನಲ್ ವಿಶ್ವದಲ್ಲಿ ಅತಿ ಹೆಚ್ಚು ಸಸ್ಯಾಹಾರ ಸೇವಿಸುವ 6 ಅಗ್ರ ದೇಶಗಳನ್ನು ಪಟ್ಟಿ ಮಾಡಿದೆ.ಭಾರತದ ಅನೇಕ ಕಡೆಗಳಲ್ಲಿ ಹೆಚ್ಚಿನ ಜನರು ಸಸ್ಯಾಹಾರಿಗಳೇ ಆಗಿದ್ದಾರೆ. ಇಲ್ಲಿ ಪ್ರತಿಶತ 38 ರಷ್ಟು ಮಂದಿ ಸಸ್ಯಾಹಾರಿ ಆಹಾರವನ್ನೇ ತಿನ್ನುತ್ತಾರೆ. ಭಾರತ ನಂತರದ ಸ್ಥಾನ ಇಸ್ರೇಲ್‌ಗಿದೆ. 

ಅಮೆರಿಕದಲ್ಲೂ ಚೀನಾ ಮಾದರಿಯಂತೆ ಮಕ್ಕಳಲ್ಲಿ ನ್ಯುಮೋನಿಯಾ 

ಕೋವಿಡ್‌ನಿಂದ ವರ್ಷಾನುಗಟ್ಟಲೆ ಜನರು ಹೈರಾಣಾದ ನಂತರ ಚೀನಾದಲ್ಲಿ ಈಗ ಮತ್ತೊಂದು ವೈರಸ್ ಕಾಣಿಸಿಕೊಂಡಿದೆ. ಎಳೆಯ ವಯಸ್ಸಿನ ಮಕ್ಕಳಲ್ಲಿ ನ್ಯುಮೋನಿಯಾ ಮಾದರಿಯ ನಿಗೂಢ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸುತ್ತಿದೆ. ಸದ್ಯ ಅಮೇರಿಕಾದಲ್ಲೂ ಈ ಸಾಂಕ್ರಾಮಿಕದ ಭೀತಿ ಎದುರಾಗಿದೆ.

ಪ್ರೀತಿಗೂ ಬಂತು ವಿಮೆ
ಆರೋಗ್ಯ, ಆಸ್ತಿ, ಕಾರು, ಪ್ರಯಾಣದ ವಿಮೆ ಬಗ್ಗೆ ನೀವು ಕೇಳಿರ್ತೀರಿ. ಅನೇಕರು ಈ ವಿಮೆಗಳನ್ನು ಮಾಡಿಸಿಕೊಂಡಿರ್ತೀರಿ ಕೂಡ. ಆದ್ರೆ ಚೀನಾದ ವ್ಯಕ್ತಿಯೊಬ್ಬ ಸಂಬಂಧಕ್ಕೆ ವಿಮೆ ಮಾಡಿಸಿಕೊಂಡು ಅದನ್ನು ಕ್ಲೇಮ್ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. 

ಮಾರುಕಟ್ಟೆಗೆ ಬಂದಿದೆ ಮನುಷ್ಯರ ಕಾಲಿನಂತೆ ಕಾಣುವ ಶೂ

ಫ್ರೆಂಚ್ (French) ಐಷಾರಾಮಿ ಬ್ರ್ಯಾಂಡ್ ಲೂಯಿಸ್ ವಿಟಾನ್ ವಿಚಿತ್ರ ಫ್ಯಾಷನ್ ನೊಂದಿಗೆ ಬಂದಿದೆ. ಅದು ಮಹಿಳೆಯರ ಕಾಲಿನಂತೆ ಕಾಣುವ ಬಿಳಿ ಬಣ್ಣದ ಸಾಕ್ಸ್ ಹಾಗೂ ಕಪ್ಪು ಸ್ಟಿಲೆಟ್ಟೊದ ಶೂಗಳನ್ನು ಪರಿಚಯಿಸಿದೆ. ಇದರ ಬೆಲೆ ಸುಮಾರು 2,500 ಡಾಲರ್ ಅಂದ್ರೆ 2 ಲಕ್ಷ ರೂಪಾಯಿ

ಗುಜರಾತಲ್ಲಿ 6 ತಿಂಗಳಲ್ಲಿ ಹೃದಯಾಘಾತಕ್ಕೆ 1052 ಬಲಿ
ಗುಜರಾತ್‌ ರಾಜ್ಯದಲ್ಲಿ ಕಳೆದ 6 ತಿಂಗಳಿನಲ್ಲಿ ಹೃದಯಾಘಾತಕ್ಕೆ 1,052 ಮಂದಿ ಬಲಿಯಾಗಿದ್ದಾರೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಅಲ್ಲದೇ ಮೃತಪಟ್ಟವರಲ್ಲಿ ಶೇ.80ರಷ್ಟು ಮಂದಿ 11ರಿಂದ 25 ವರ್ಷದ ವಯೋಮಾನದವರು ಎಂದು ಸಚಿವ ಕುಬೇರ್‌ ದಿನೋದರ್‌ ಹೇಳಿದ್ದಾರೆ.

ಮಕ್ಕಳಲ್ಲಿ ದಿಢೀರ್‌ ನ್ಯುಮೋನಿಯಾಕ್ಕೆ ಪರಿಚಿತ ವೈರಸ್‌ ಕಾರಣ ಎಂದ ಚೀನಾ
ಚೀನಾದಲ್ಲಿ ಇತ್ತೀಚೆಗೆ ಮಕ್ಕಳಲ್ಲಿ ವ್ಯಾಪಕವಾಗಿ ನ್ಯುಮೋನಿಯಾ ರೀತಿಯ ಉಸಿರಾಟ ಖಾಯಿಲೆಗಳು ಹರಡುತ್ತಿವೆ. ಇದಕ್ಕೆ ಗೊತ್ತಿರುವ ರೋಗಕಾರಕಗಳೇ ಕಾರಣವಾಗಿದ್ದು, ಅದು ಪ್ರಸರಣ ಸೋಂಕು ಅಲ್ಲ ಎಂದು ಚೀನಿ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅಧಿಕಾರಿ ಮಿ ಫೆಂಗ್‌ ಸ್ಪಷ್ಟಪಡಿಸಿದ್ದಾರೆ.

ಅತ್ತೆ ಮೇಲೆ ರೇಪ್ ಕೇಸ್ ದಾಖಲಿಸಿದ ಸೊಸೆ: ವಿಚಾರಣೆಗೆ ಸುಪ್ರೀಂ ಸಮ್ಮತಿ
ಅತ್ಯಾಚಾರ ಪ್ರಕರಣಗಳಲ್ಲಿ ಮಹಿಳೆಯರು ಸಂತ್ರಸ್ತರಾಗುವುದು ಸಾಮಾನ್ಯ. ಆದರೆ  ಪಂಜಾಬ್‌ನಲ್ಲಿ ಮಹಿಳೆಯೊಬ್ಬರ ಮೇಲೆಯೇ  ಈ ವರ್ಷ ಸೊಸೆಯೇ ಅತ್ಯಾಚಾರ ಪ್ರಕರಣ ದಾಖಲಿಸಿದ್ದ ಸುದ್ದಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. 

ಏಷ್ಯಾದ ಅತ್ಯಂತ ದುಬಾರಿ ನಗರಗಳ ಪಟ್ಟಿ ಬಿಡುಗಡೆ
ವಿಶ್ವದ ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಸಿಂಗಾಪುರವು ಕಳೆದ ಹನ್ನೊಂದು ವರ್ಷಗಳಲ್ಲಿ ಒಂಬತ್ತನೇ ಬಾರಿಗೆ ವಿಶ್ವದ ಅತ್ಯಂತ ದುಬಾರಿ ನಗರವಾಗಿ ಗುರುತಿಸಿಕೊಂಡಿದೆ. ಅಮೆರಿಕದ ನ್ಯೂಯಾರ್ಕ್ ಈ ವರ್ಷ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.  ಅಂತೆಯೇ ಏಷ್ಯಾದ ಎರಡನೇ ನಗರ ಹಾಂಗ್ ಕಾಂಗ್ ಸಹ ಅಗ್ರ ಐದರಲ್ಲಿ ಸ್ಥಾನ ಪಡೆದಿದೆ. ಲಾಸ್ ಏಂಜಲೀಸ್ (ಆರನೇ ಸ್ಥಾನ) ಮತ್ತು ಪ್ಯಾರಿಸ್ ಆರನೇ ಸ್ಥಾನದಲ್ಲಿದೆ. 

70ರ ಇಳಿ ವಯಸಲ್ಲಿ ಅವಳಿಗೆ ಜನ್ಮವಿತ್ತ ಉಗಾಂಡಾದ ಮಹಿಳೆ
ಉಗಾಂಡಾದ 70 ವರ್ಷದ ವೃದ್ಧೆಯೊಬ್ಬರು ಸಂತಾನೋತ್ಪತ್ತಿ ಚಿಕಿತ್ಸೆ ಪಡೆದ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. 70ರ ಇಳಿ ವಯಸ್ಸಿನಲ್ಲಿ ತಾಯಿಯಾಗಿರುವ ಸಫೀನಾ ನಮುಕ್ವಾಯಾ ಸದ್ಯ ವಿಶ್ವದ ಹಿರಿಯ ತಾಯಂದಿರಲ್ಲಿ ಒಬ್ಬರಾಗಿದ್ದಾರೆ.  

ಬೆಂಗಳೂರಿನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್‌ ಹೊಟೇಲ್ ಬಂದ್

ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ನ್ಯೂ ಕೃಷ್ಣ ಭವನವು ಬೆಂಗಳೂರಿಗರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಆದರೆ ಈ ಹೆಸರಾಂತ ಹೊಟೇಲ್‌ ನ್ಯೂ ಕೃಷ್ಣ ಭವನ ಹೊಟೇಲ್ ಮುಚ್ಚಲ್ಪಟ್ಟಿದ್ದು, ಆಹಾರಪ್ರಿಯರಿಗೆ ನಿರಾಸೆ ಮೂಡಿಸಿದೆ.

ಗಂಡ ಬರದಿದ್ದರೆ ಅಷ್ಟೇ, ಅಮ್ಮ-ಮಕ್ಕಳ ಹೊಸ ಟ್ರಾವೆಲ್ ಈಗ ಟ್ರೆಂಡ್!
ಪುರುಷರಿಗೆ ಎಲ್ಲ ಸಂದರ್ಭದಲ್ಲೂ ಮಕ್ಕಳು, ಪತ್ನಿ ಜೊತೆ ಪ್ರವಾಸಕ್ಕೆ ಬರೋದು ಸಾಧ್ಯವಾಗೋದಿಲ್ಲ. ಪತಿ ಜೊತೆಗೆ ಬರಲ್ಲ, ಮಕ್ಕಳನ್ನು ಸಂಭಾಳಿಸೋಕೆ ಆಗಲ್ಲ ಎನ್ನುವ ಕಾರಣಕ್ಕೆ ಅನೇಕ ಮಹಿಳೆಯರು ಆಸಕ್ತಿ ಇದ್ರೂ ಪ್ರವಾಸದ ಆಲೋಚನೆ ಬಿಡ್ತಾರೆ. ಆದ್ರೆ ಈಗ ಕಾಲ ಸ್ವಲ್ಪ ಬದಲಾಗಿದೆ. ಮಕ್ಕಳ ಜೊತೆ ಪ್ರವಾಸಕ್ಕೆ ಹೋಗುವ ಅಮ್ಮಂದಿರ ಟ್ರೆಂಡ್ ಶುರುವಾಗಿದೆ. ಇದಕ್ಕಾಗಿತೇ 
ಡಾ. ನಿಕಿತಾ ಮಾಥುರ್ ಮತ್ತು ಡಾ. ಸಾಕ್ಷಿ ಗುಲಾಟಿ  ಅವರು ಬ್ಯಾಕ್ ಪ್ಯಾಕ್ ವಿತ್ ಮಾಮ್ (BWM) ಮತ್ತು ಟ್ರಾವೆಲ್ ವಿತ್ ಕಿಡ್ಸ್ (TWK) ಹೆಸರಿನ ಎರಡು ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. 

ವಿಶ್ವದ ಅತಿ ಎತ್ತರದಿಂದ ಬಂಗೀ ಜಂಪ್ ಮಾಡಿ ಜೀವ ತೆತ್ತ ಸಾಹಸಿಗ!
ಚೀನಾದ ಮಕಾವು ಟವರ್ ನಲ್ಲಿ ಬಂಗೀ ಜಂಪ್ ಮಾಡಿ ಜಪಾನ್ (Japan) ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಮಕಾವು ಗೋಪುರದ ಎತ್ತರ 764 ಅಡಿ. 56 ವರ್ಷದ ವ್ಯಕ್ತಿ  764 ಅಡಿ ಎತ್ತರದಿಂದ ಜಿಗಿದಿದ್ದಾರೆ. ಈ ಸಾಹಸ ಮಾಡುವ ವೇಳೆ ವ್ಯಕ್ತಿಗೆ ಯಾವುದೇ ಸಮಸ್ಯೆ ಆಗ್ಲಿಲ್ಲ. ಬಂಗೀ ಜಂಪ್ ಮುಗಿಸಿ ಬಂದ್ಮೇಲೆ ಅವರಿಗೆ ಉಸಿರಾಟದ ತೊಂದರೆ ಶುರುವಾಗಿ ಸಾವನ್ನಪ್ಪಿದ್ದಾರೆ. 

ಚೀನಾ ನ್ಯೂಮೋನಿಯಾ ಸೋಂಕು ಭಾರತದಲ್ಲೆ ಪತ್ತೆ ವರದಿ ಆತಂಕ, ಸ್ಪಷ್ಟನೆ ನೀಡಿದ ಕೇಂದ್ರ!
ಚೀನಾದಲ್ಲಿ ಕಾಣಿಸಿಕೊಂಡ ನ್ಯೂಮೋನಿಯಾ ರೀತಿಯ ಸೋಂಕು ಬಳಿಕ ಅಮೆರಿಕದಲ್ಲೂ ಕಾಣಿಸಿಕೊಂಡಿದೆ. ಇದೀಗ ಈ ವೈರಸ್ ಭಾರತಕ್ಕೆ ಕಾಲಿಟ್ಟಿದೆ ಅನ್ನೋ ವರದಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿತ್ತು. 

ಊಟಕ್ಕೆ ಮೊದಲು ರಫ್ ಅಂತ ಬಾರಿಸ್ತಿದ್ದ ಹೊಟೇಲ್‌

ಹೊಟೇಲ್‌ಗಳಿಗೆ ಬಹುತೇಕರು ಭೋಜನ ಸೇವನೆಗೆ ಹೋಗುತ್ತಾರೆ. ಆದರೆ ಈ Shachihoka-ya ಹೊಟೇಲ್‌ಗೆ ಎಲ್ಲರೂ ಸುಂದರ ಹುಡುಗಿಯರ ಕೈನಿಂದ ಏಟು ತಿನ್ನುವುದಕ್ಕಾಗಿಯೇ ಹೋಗುತ್ತಿದ್ದರು. ಆದರೆ ಈ ವರ್ಷದ ಅಂತ್ಯಕ್ಕೆ ಆ ಹೊಟೇಲ್ ಅನ್ನು ಮುಚ್ಚಿಸಲಾಗಿದೆ ಎಂಬ ಸುದ್ದಿ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿತ್ತು. 

ಚರ್ಚಲ್ಲಿ ಪಾದ್ರಿಯಾಗಲು ಮಾಡೆಲಿಂಗ್ ತೊರೆದ ಇಟಲಿ ಮಾಡೆಲ್

ವೃತ್ತಿಯಲ್ಲಿ ರೂಪದರ್ಶಿಯಾಗಿರುವ ಎಡೋರ್ಡೊ ಸ್ಯಾಂಟಿನ್ ಎಂಬ ಇಟಲಿಯ ಅತ್ಯಂತ ಹ್ಯಾಂಡ್ ಸಮ್ ಹುಡುಗ ತಮ್ಮ ಮಾಡೆಲಿಂಗ್ ಕ್ಷೇತ್ರ ಬಿಟ್ಟು ಪಾದ್ರಿಯಾಗಲು ಸಜ್ಜಾಗುವ ಮೂಲಕ ಈ ವರ್ಷ ಸುದ್ದಿಯಲ್ಲಿದ್ದಾರೆ.

ಅತೀ ಹೆಚ್ಚು ಅಶ್ಲೀಲ ವಿಡಿಯೋ ನೋಡುವ ದೇಶದ ಪಟ್ಟಿ ಬಹಿರಂಗ
ಯಾವ ದೇಶದಲ್ಲಿ ಅತೀ ಹೆಚ್ಚು ಪೋರ್ನ್ ವಿಡಿಯೋ ನೋಡುತ್ತಾರೆ ಎಂಬ ಕುರಿತ ಅಧ್ಯಯನ ವರದಿ ಬಹಿರಂಗವಾಗಿದೆ. 2023ರಲ್ಲಿ ಅತೀ ಹೆಚ್ಚು ಅಶ್ಲೀಲ ಚಿತ್ರ ನೋಡಿ ಆನಂದಿಸಿದ ದೇಶದ ಪಟ್ಟಿಯಲ್ಲಿ ಭಾರತಕ್ಕೆ 3ನೇ ಸ್ಥಾನ ಸಿಕ್ಕಿದೆ.  ಹಾಗೆಯೇ 2ನೇ ಸ್ಥಾನ ಫಿಲಿಪೈನ್ಸ್ ಹೊತ್ತುಕೊಂಡಿದೆ. 3ನೇ ಸ್ಥಾನದಲ್ಲಿ ಪೋಲೆಂಡ್ ಇದೆ.

ಸ್ಮಾರ್ಟ್‌ಫೋನ್‌ ದೂರವಾದ್ರೆ ಶೇ. 91 ಮಕ್ಕಳಿಗೆ ಕಾಡುತ್ತೆ ಆತಂಕ!

ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯಿಂದ ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯವನ್ನು ಹೇಗೆ ಅಡ್ಡಿಪಡಿಸುತ್ತದೆ ಎಂಬುದರ ಮೇಲೆ ಸಮೀಕ್ಷೆಯೊಂದರ ಅಧ್ಯಯನ ಹೊರಬಿದ್ದಿದೆ.. ಸೈಬರ್‌ಮೀಡಿಯಾ ರಿಸರ್ಚ್ (ಸಿಎಂಆರ್) ನಡೆಸಿದ ಸಮೀಕ್ಷೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯಿಂದ ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯಕ್ಕೆ ಅಡ್ಡಿಯಾಗುತ್ತಿದೆ ಎಂಬ ಅಂಶವಿದೆ. 

ಮಹಿಳೆ ಕಣ್ಣಿನಿಂದ ಬರೋಬ್ಬರಿ 60 ಜೀವಂತ ಹುಳು ಹೊರ ತೆಗೆದ ವೈದ್ಯರು!

ಚೀನಾದಲ್ಲಿ ಇತ್ತೀಚಿಗೆ ಮಹಿಳೆಯೊಬ್ಬಳ ಕಣ್ಣುಗಳೊಳಗೆ ಜೀವಂತ ಹುಳುಗಳಿರೋದು ಪತ್ತೆಯಾಯಿತು. ವೈದ್ಯರೊಬ್ಬರು ಆಪರೇಷನ್‌ ನಡೆಸಿ ಮಹಿಳೆಯೊಬ್ಬರ ಕಣ್ಣುಗಳಿಂದ 60ಕ್ಕೂ ಹೆಚ್ಚು ಜೀವಂತ ಹುಳುಗಳನ್ನು ಹೊರತೆಗೆದಿದ್ದು, ಇದು ಅರೋಗ್ಯ ಕ್ಷೇತ್ರವನ್ನು ಬೆಚ್ಚಿ ಬೀಳಿಸಿದೆ.

'ಸುಹಾಗ್ ರಾತ್ ಸ್ಪೆಷಲ್ ಪಾನ್' ಬೆಲೆ ₹1100; ಇದು ಅಂತಿಂಥ ಪಾನ್ ಅಲ್ಲ!

ಸುಹಾಗ್ ರಾತ್‌ನ ಸ್ಪೆಷಲ್ ಪಾನೊಂದು ಈ ದರ ಈ ವರ್ಷಾಂತ್ಯಕ್ಕೆ ಇಂಟರ್ನೆಟ್‌ನಲ್ಲಿ ಹೆಚ್ಚು ಸಂಚಲನ ಸೃಷ್ಟಿಸಿತ್ತು. ಬನಾರಸ್‌ನಲ್ಲಿರುವ ಅಂಗಡಿಯೊಂದು ತಯಾರಿಸುವ ಈ ಪಾನ್‌ನ ದರ 1100 ರೂ. ಬನಾರಸ್‌ನ ನೇತಾಜಿ ಪಾನ್ ಭಂಡಾರ್ ಇದನ್ನು ವಿಶೇಷ ರಾತ್ರಿಗಾಗಿಯೇ ತಯಾರಿಸಿದೆ. 

Latest Videos
Follow Us:
Download App:
  • android
  • ios