ಗಿರವಿ ಇಟ್ಟಿದ್ದ ಚಿನ್ನದ ಹಾರವನ್ನು ಕಳೆದುಕೊಳ್ಳದಂತೆ ಉಳಿಸಲು ಸಹಾಯ ಮಾಡಿದ ಗೆಳತಿ. ಶಾಂತಿನಿಕೇತನ ವೃದ್ಧಾಶ್ರಮದ ಕಾಳಿಯಮ್ಮ ಮತ್ತು ಸರಸ್ವತಿಯಮ್ಮ ನಡುವಿನ ಸ್ನೇಹದ ಹೃದಯಸ್ಪರ್ಶಿ ಕಥೆ ಇಲ್ಲಿದೆ.

ಪಾಲಕ್ಕಾಡ್: ವೆಲ್ಲಿನೇಜಿ ಮೂಲದ ಕಾಳಿಯಮ್ಮ ಎಂಬುವರು ಕಳೆದು ಹೋಗಲಿದ್ದ ಚಿನ್ನದ ಸರವನ್ನು ಆಕೆಯ ಸಹ ನಿವಾಸಿ ಸರಸ್ವತಿಯಮ್ಮ ಅವರು ಪಿಂಚಣಿ ಹಣದೊಂದಿಗೆ ಹಿಂದಿರುಗಿಸಿದ್ದಾರೆ. ಪಾಲಕ್ಕಾಡ್ ಚುನ್ನಂಪುತಾರ ಶಾಂತಿನಿಕೇತನ ವೃದ್ಧಾಶ್ರಮದ ಆ ಸುವರ್ಣ ಕಥೆಯನ್ನು ನೀವು ನೋಡಬಹುದು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಳಿಯಮ್ಮ ಚಹಾ ಅಂಗಡಿಯಲ್ಲಿ ಕೆಲಸ ಮಾಡುವಾಗ ಸಂಪಾದಿಸಿದ ಹಣದಿಂದ ಚಿನ್ನದ ಹಾರವನ್ನು ಖರೀದಿಸಿದ್ದಳು. ಆಕೆ ಅದನ್ನು ಆಸೆಯಿಂದ ಖರೀದಿಸಿದ್ದಳು. ಔಷಧಿ ಖರೀದಿಸಲು ಹಣ ಖಾಲಿಯಾದಾಗ, ಅನಿವಾರ್ಯವಾಗಿ ಆಸೆಯಿಂದ ಖರೀದಿಸಿದ ಚಿನ್ನದ ಸರ ಒತ್ತೆ ಇಡಬೇಕಾಯಿತು. ಅವಳನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ, ಅವಳು ಇನ್ನೂ ಅನಾರೋಗ್ಯದಿಂದ ವೃದ್ಧಾಶ್ರಮದಲ್ಲಿ ನೆಲೆಸಿದಳು.

ಒಂದು ವಾರದ ಹಿಂದೆ ಕಾಳಿಯಮ್ಮಗೆ ಬ್ಯಾಂಕಿನಿಂದ ಪತ್ರ ಬಂತು. ಬಡ್ಡಿಯೊಂದಿಗೆ ಹಣ ಪಾವತಿಸಲು ಮತ್ತು ಅವರು ಒತ್ತೆ ಇಟ್ಟಿದ್ದ ಚಿನ್ನದ ಸರ ಹಿಂಪಡೆಯಲು ಗಡುವು ನೀಡಿದ ಪತ್ರ ಅದು. ಗಡುವು ನೀಡಿದ ದಿನಾಂಕದೊಳಗೆ ಚಿನ್ನದ ಸರ ಮರುಪಡೆಯಬೇಕು ಇಲ್ಲದಿದ್ದರೆ ನಿಮಗೆ ಮತ್ತೆ ಚಿನ್ನದ ಸರ ಸಿಗುವುದಿಲ್ಲ ಎಂಬ ಪತ್ರವದು. ಇದರಿಂದ ಕಾಳಿಯಮ್ಮ ಚಿಂತೆಗೀಡಾದರು. ಬಿಡಿಸಿಕೊಳ್ಳೋಣವೆಂದರೆ ಸಾಕಾಗುಷ್ಟು ಹಣವಿಲ್ಲ. ಆಸೆಯಿಂದ ಖರೀದಿಸಿದ ಚಿನ್ನದ ಸರ ಕಳೆದುಕೊಳ್ಳಲು ಇಷ್ಟವಿಲ್ಲ. ಹೀಗಿರುವಾಗ ಕಾಳಿಯಮ್ಮ ತಮ್ಮೊಂದಿಗೆ ವಾಸಿಸುತ್ತಿದ್ದ ಸರಸ್ವತಿಯಮ್ಮ ಅವರೊಂದಿಗೆ ಸಮಸ್ಯೆಯನ್ನು ಹಂಚಿಕೊಳ್ತಾಳೆ. ಆಗ ತನ್ನ ಸ್ನೇಹಿತೆಯ ಪ್ರಾಮಾಣಿಕತೆಯನ್ನು ನೋಡಿ, ಸರಸ್ವತಿಯಮ್ಮ ಬೇರೆ ಏನೂ ಯೋಚಿಸದೇ ಪಿಂಚಣಿಯಿಂದ ಬಂದ ಹಣವನ್ನು ಕಾಳಿಯಮ್ಮನ ಕೈಗೆ ನೀಡಿದಳು, ಅಷ್ಟೊಂದು ಹಣವನ್ನು ನೀಡುವಾಗ ಯಾವುದೇ ಹಿಂಜರಿಕೆ, ಮುಂದಾಲೋಚನೆ, ವಾಪಸ್ ಕೊಡ್ತಾಳ ಇಲ್ಲವಾ ಎಂದು ಕೂಡ ಯೋಚಿಸಲಿಲ್ಲ.

ಗೆಳತಿ ಸರಸ್ವತಿಯಮ್ಮ ನೀಡಿದ ಹಣದಿಂದ ಕಾಳಿಯಮ್ಮ ತನ್ನ ಇಷ್ಟದ ಚಿನ್ನದ ಸಾರವನ್ನು ಪಡೆದು ಅದೆಷ್ಟು ಸಂತೋಷ ಪಟ್ಟಳು ಎಂದರೆ ಆ ಸಂತೋಷದ ಕ್ಷಣಕ್ಕೆ ಪಾರವೇ ಇರಲಿಲ್ಲ. ಗೆಳತಿಗೆ ಚಿನ್ನದ ಸರ ಸಿಕ್ಕಿ ಖುಷಿಯಲ್ಲಿ ಸರಸ್ವತಿಯಮ್ಮ ಕೂಡ ಸಂತೋಷಗೊಂಡಳು. ಕಾಳಿಯೂ ಸಹ ಮುಗುಳ್ನಕ್ಕಳು ಎಲ್ಲವನ್ನೂ ಹಣದಿಂದ ನೋಡುವ ಇಂದಿನ ಕಾಲದಲ್ಲಿ ಇವರಿಬ್ಬರ ಸ್ನೇಹ ಹಣಕ್ಕಿಂತ ಮಿಗಿಲು, ಚಿನ್ನದಂತೆ ಹೊಳೆಯುತ್ತದೆಯಲ್ಲವೇ ಇವರ ಸ್ನೇಹ?