Asianet Suvarna News Asianet Suvarna News

ಸೀಮಂತವೋ ಬೆಲ್ಲಾಗೆ ಸೀಮಂತ: ಬೀದಿ ನಾಯಿಗೆ ಸೀಮಂತ ಮಾಡಿದ ಗೆಳೆಯರ ಬಳಗ: ವೀಡಿಯೋ

ಗೆಳೆಯರ ತಂಡವೊಂದು ಬೀದಿ ನಾಯಿಗೆ ಸೀಮಂತ ಮಾಡಿದ್ದು, ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಗೆಳೆಯರ ಈ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

friends team did baby shower to street dog bella wholesome video goes viral akb
Author
First Published Jun 30, 2023, 2:59 PM IST

ಬೀದಿನಾಯಿಗಳನ್ನು ಕಂಡರೆ ಎಲ್ಲರೂ ದೂರ ಓಡಿಸುವುದೇ ಹೆಚ್ಚು, ಒಂದು ಕಲ್ಲು ಹೊಡೆದು ಅವುಗಳ ಕಾಲು ಊನ ಮಾಡುತ್ತಾರೆ ಅಥವಾ ಇನ್ನೇನಾದರೂ ಕಿರುಕುಳ ನೀಡುತ್ತಾರೆ. ಪ್ರಾಣಿ ಪ್ರೀತಿಯನ್ನು ಮೆರೆಯುವವರು ಸಹ ನಮ್ಮ ಇಂಡಿಯನ್ ಬ್ರೀಡ್ ಶ್ವಾನವನ್ನು ಸಾಕುವುದು ಕಡಿಮೆ. ಅವುಗಳೇನಿದ್ದರೂ ಹಳ್ಳಿಗಳ ಮನೆಗಳಲ್ಲಿ ಪ್ರೀತಿ ಗಿಟ್ಟಿಸುತ್ತವೆ ಬಿಟ್ಟರೆ ಮಹಾನಗರಗಳಲ್ಲಿ ಅವುಗಳನ್ನು ಸಾಕುವವರು ತೀರಾ ಕಡಿಮೆ. ಆದರೆ ಗೆಳೆಯರ ತಂಡವೊಂದು ಇಂತಹ ಬೀದಿ ನಾಯಿಗೆ ಸೀಮಂತ ಮಾಡಿದ್ದು, ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಗೆಳೆಯರ ಈ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ವೀಡಿಯೋವನ್ನು ಎ ಭರತ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಬೀದಿ ನಾಯಿಗಳ ಬಗ್ಗೆ ದ್ವೇಷ, ಅಸಹ್ಯ ಮತ್ತು ತಿರಸ್ಕಾರತುಂಬಿರುವ ಜಗತ್ತಿನಲ್ಲಿ, ಇಲ್ಲಿ ನಾವು ನಮ್ಮ ಮಗು ಬೆಲ್ಲಾಗೆ ಸೀಮಂತ ಮಾಡುತ್ತಿದ್ದೇವೆ. ಅವಳು ಸುರಕ್ಷಿತವಾಗಿ ಮಕ್ಕಳಿಗೆ ಜನ್ಮ ನೀಡುತ್ತಾಳೆ  ಹಾಗೂ ನಾವು ಅವಳ ಆರೋಗ್ಯಕರ ಮತ್ತು ಉತ್ಸಾಹಭರಿತ ಸಣ್ಣ ಮಕ್ಕಳೊಂದಿಗೆ ಆಡುವ ನಿರೀಕ್ಷೆಯಲ್ಲಿದ್ದೇವೆ. ಈಕೆಯ ಮರಿಗಳಿಗೆ ವ್ಯಾಕ್ಸಿನ್ ಹಾಕಿಸಲಾಗುವುದು ಹಾಗೂ ದತ್ತು ಪಡೆಯುವವರಿಗೆ ನೀಡಲಾಗುವುದು. ಜೊತೆಗೆ ವೀಡಿಯೋದಲ್ಲಿ ಆಹಾರ ಕದಿಯುತ್ತಿರುವವ ನಮ್ಮದೇ ಹುಡುಗ ರಾಕಿ ಬೆಲ್ಲಾಳ ಬೆಸ್ಟ್ ಫ್ರೆಂಡ್ ಎಂದು ಅವರು ಕೊನೆಗೆ ತಮಾಷೆಯಾಗಿ ಬರೆದು ಲವ ಇಮೋಜಿ ಹಾಕಿದ್ದಾರೆ. 

ಬೀದಿನಾಯಿ ಆರೈಕೆ ಮಾಡುತ್ತಿದ್ದ ಶ್ವಾನ ಪ್ರೇಮಿ ರೇಬಿಸ್‌ ಕಾಯಿಲೆಗೆ ಬಲಿ

ಇನ್ನು ವೈರಲ್ ಆಗಿರುವ ವೀಡಿಯೋದಲ್ಲಿ ಹುಡುಗ ಹುಡುಗಿಯರಿರುವ ಗೆಳೆಯರ ಬಳಗ ನಾಯಿಗೆ ಹೂವಿನ ಮಾಲೆಯನ್ನು ಹಾಕಿ ಅರಶಿಣ ಕುಂಕುಮ ಹಾಕಿ ಹಳದಿ ಬಣ್ಣದ ಶಾಲನ್ನು ಹೊದಿಸಿ ಅದರಿಷ್ಟದ ಆಹಾರ ನೀಡುತ್ತಾರೆ. ನಂತರ ಅದರೊಂದಿಗೆ ನಿಂತು ಗೆಳೆಯರು ಫೋಟೋ ತೆಗೆಸಿಕೊಂಡಿದ್ದಾರೆ. ವೀಡಿಯೋ ನೋಡಿದ ಅನೇಕರು ಇದೊಂದು ಒಳ್ಳೆಯ ಕಾರ್ಯ ಎಂದು ಶ್ಲಾಘಿಸಿದ್ದಾರೆ. ತಾಯಿ ಮಕ್ಕಳಿಗೆ ಪ್ರೀತಿಯ ಶುಭಾಶಯಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ವೀ ಲವ್ ಯೂ ಬೆಲ್ಲಾ ಎಂದು ಪ್ರತಿಕ್ರಿಯಿಸಿದ್ದಾರೆ. ನೀವೆಲ್ಲಾ ಸ್ನೇಹಿತರ ಬಳಗ ಸೇರಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ನಿಮ್ಮ ಈ ಶ್ರೇಷ್ಟತೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಂತಹ ಸುಂದರ ದೃಶ್ಯ ನೀವೆಲ್ಲರೂ ಒಳ್ಳೆಯ ವ್ಯಕ್ತಿಗಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮನೆಯಲ್ಲಿದ್ದ ಚಪ್ಪಲಿ ಕಚ್ಚಿದ 4 ಬೀದಿ ನಾಯಿಗೆ ಸಂತಾನಹರಣ ಶಿಕ್ಷೆ ನೀಡಿದ ಮಾಜಿ ಮೇಯರ್!

ಒಟ್ಟಿನಲ್ಲಿ ಬೀದಿನಾಯಿಗೆ ಸೀಮಂತ ಮಾಡಿದ ವೀಡಿಯೋ ಎಲ್ಲರ ಮೆಚ್ಚುಗೆ ಗಳಿಸಿದ್ದು, ಗೆಳೆಯರ ಕೆಲಸಕ್ಕೆ ಶಭಾಷ್ ಎಂದಿದ್ದಾರೆ. 

 

Follow Us:
Download App:
  • android
  • ios