ನೀವು ವರ್ಕೌಟ್ ಮಾಡುವ ಮುನ್ನ ಸೇವಿಸಲೇಬೇಕಾದ ಆಹಾರಗಳಿವು

life | Saturday, March 31st, 2018
Suvarna Web Desk
Highlights

ನೀವು ವರ್ಕೌಟ್ ಮಾಡುವ ಮುನ್ನ ಇಂತಹ ಆಹಾರಗಳನ್ನು ಸೇವನೆ ಮಾಡಿದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಲಭ್ಯವಾಗುತ್ತದೆ.

ನೀವು ವರ್ಕೌಟ್ ಮಾಡುವ ಮುನ್ನ ಇಂತಹ ಆಹಾರಗಳನ್ನು ಸೇವನೆ ಮಾಡಿದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಲಭ್ಯವಾಗುತ್ತದೆ.

ಆಗ ವರ್ಕೌಟ್ ಮಾಡುವುದರಿಂದ ಆಗುವ ಶಕ್ತಿಯ ನಷ್ಟವು ಅದಕ್ಕೂ ಮೊದಲೇ ಸೇವಿಸುವ  ಆಹಾರದಿಂದಾಗಿ ತಪ್ಪುತ್ತದೆ.

ನೀವು ವರ್ಕೌಟ್ ಮಾಡುವ ಮುನ್ನ ಸೇವಿಸಲೇಬೇಕಾದ ಆಹಾರಗಳು ಯಾವವು ಗೊತ್ತೇ..?

ಬಾಳೆ ಹಣ್ಣು

ಕಾರ್ಬೋಹೈಡ್ರೇಟ್ ಹೊಂದಿದ ಅತ್ಯುತ್ತಮ ಆಹಾರ ಬಾಳೆಹಣ್ಣು. ಇದರ ಸೇವನೆಯಿಂದ ಶಕ್ತಿ ವೃದ್ಧಿಯಾಗುತ್ತದೆ.

ಬೇಯಿಸಿದ ಮೊಟ್ಟೆಯ ಬಿಳಿ ಭಾಗ

ಬೇಯಿಸಿದ ಮೊಟ್ಟೆಯ ಬಿಳಿ ಭಾಗದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಪ್ರೋಟೀನ್ ಅಡಕವಾಗಿದ್ದು, ಇದು ಕೂಡ ಹೆಚ್ಚಿನ ಪ್ರಮಾಣದಲ್ಲಿ ದೇಹದಲ್ಲಿ ಶಕ್ತಿ ಸಂಚಯನವಾಗುವಂತೆ ಮಾಡುತ್ತದೆ.

ಓಟ್ ಮೀಟ್

ರಕ್ತದಲ್ಲಿ ಸಕ್ಕರೆ ಅಂಶವನ್ನು ಸರಿಯಾದ ಪ್ರಮಾಣದಲ್ಲಿ ಇಡುತ್ತದೆ.

ಡ್ರೈ ಫ್ರೂಟ್

ಡ್ರೈ ಫ್ರೂಟ್’ಗಳ ಸೇವನೆ  ದೇಹಕ್ಕೆ ಅಗತ್ಯ ಶಕ್ತಿಯನ್ನು ಪೂರೈಕೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಚಿಯಾ ಸೀಡ್

ತಂಪಿನ ಬೀಜಗಳು ದೇಹಕ್ಕೆ ಅಗತ್ಯ ಪ್ರಮಾಣದಲ್ಲಿ ಶಕ್ತಿ ದೊರೆಯುತ್ತದೆ ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಪ್ರಮಾಣ ಅತ್ಯಧಿಕ ಪ್ರಮಾಣದಲ್ಲಿ ದೊರೆಯುತ್ತದೆ . ವರ್ಕೌಟ್’ಗಿಂತ 1 ರಿಂದ 2 ಗಂಟೆ ಮೊದಲು ಇವನ್ನು ಸೇವನೆ ಮಾಡಬೇಕು.

Comments 0
Add Comment

    Related Posts