Asianet Suvarna News Asianet Suvarna News

ಬೆಂಗಳೂರಿಗೆ ಬಂದಿದೆ ಥ್ರಿಲ್ಲಿಂಗ್ ತೇಲುವ ರೆಸ್ಟೋರೆಂಟ್

ವೆರೈಟಿ ಜಾಗದಲ್ಲಿ ಡಿನ್ನರ್ ಡೇಟ್ ಹೋಗಬೇಕು ಎಂದು ಬಯಸುವರಿಗೆ ಇಲ್ಲಿದೆ ಫ್ಲೈ ಡೈನಿಂಗ್. ಆಕಾಶದಲ್ಲಿ ಕುಳಿತುಕೊಂಡು ಎಲ್ಲೋ ಲೈಟ್ ಹುಳದಂತೆ ಕಾಣುವ ಬಿಲ್ಡಿಂಗ್ ಗಳನ್ನು ನೋಡಿಕೊಂಡು ತಿನ್ನೋ ಮಜಾನೆ ಬೇರೆ

Fly dining restaurant in Bangalore
Author
Bengaluru, First Published Oct 21, 2018, 2:50 PM IST
  • Facebook
  • Twitter
  • Whatsapp

ಸಿಲಿಕಾನ್ ಸಿಟಿಯಲ್ಲಿ ಕಟ್ಟಡಗಳ ಮಧ್ಯೆ ಇದ್ಯಾವುದು ಆಕಾಶದಲ್ಲಿ ಕುಳಿತು ಟೇಬಲ್ ಮೇಲೆ ತಿನ್ನುವುದು ಎಂದು ಯೋಚನೆ ಮಾಡುತ್ತಿದ್ದರೆ ಇಲ್ಲಿದೆ ಆ ಸೂಪರ್ ರೆಸ್ಟೋರೆಂಟ್. ಮಾನ್ಯತ ಟೆಕ್ ಪಾರ್ಕ್ ಬಳಿಯ ನಾಗವಾರಕ್ಕೆ ಹೋದ್ರೆ ಅಲ್ಲಿ ಸಿಗುತ್ತದೆ.  

ನೆಲದಿಂದ 50 ಅಡಿ ಎತ್ತರದಲ್ಲಿದ್ದು  ಒಂದು ಸಲಕ್ಕೆ 22 ಮಂದಿ ಕೂರಬಹುದು. ಇದು 360 ಡಿಗ್ರಿಯಲ್ಲಿ ತಿರುಗುತ್ತಿದ್ದು ಭದ್ರತೆಯ ದೃಷ್ಟಿಯಿಂದ  16 ಮೆಟಲ್ ಹಗ್ಗಗಳಿಂದ ಬಿಗಿಗೊಳಿಸಲಾಗಿದೆ. 4 ಸಿಬ್ಬಂದಿ ಎಲ್ಲಾ ಮೂಲೆಯಲ್ಲೂ ನಿಂತಿರುತ್ತಾರೆ. 

ಇದರಲ್ಲಿ ಗರ್ಭಿಣಿಯರು ಮತ್ತು 13 ವರ್ಷಕ್ಕಿಂತಲೂ ಒಳಗಿನ ಮಕ್ಕಳಿಗೆ ಪ್ರವೇಶವಿಲ್ಲ. ಒಬ್ಬ ವ್ಯಕ್ತಿಯ ತೂಕ 150 ಕೆ.ಜಿ ಒಳಗಿರಬೇಕು. ಫೋನ್ ಹೊರತುಪಡಿಸಿ ಯಾವುದೆ ರೀತಿಯ  ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. 

ಇದರ ಬೆಲೆ : 
ಸಂಜೆ 5 ಗಂಟೆಗೆ ಮೊನ್ ಟೈಲ್ ಸೆಷನ್ ಗೆ ರೂ.3999 (ಒಬ್ಬರಿಗೆ)
ರಾತ್ರಿ ಡೈನಿಂಗ್ 7 ಗಂಟೆ ನಂತರದ ಸೆಷನ್ ರೂ. 6999 (ಒಬ್ಬರಿಗೆ)

Follow Us:
Download App:
  • android
  • ios