ಸಂಬಂಧಗಳು ಮಧುರವಾಗಿರಲು ಅಲ್ಲಿ ಪ್ರೀತಿ ತುಂಬಿರಬೇಕು. ಸಂಗಾತಿ ಜೊತೆ ಹೇಗೆ ಇರುತ್ತೀರಿ  ಎಂಬುದರ ಮೇಲೆ ಪ್ರೀತಿ ಸ್ಟ್ರಾಂಗ್ ಆಗುತ್ತದೆ. ಆದರೆ ಕೇವಲ ಐಲವ್‌ಯು ಎಂದು ಹೇಳುವುದರಿಂದ ಪ್ರೀತಿ ಹೆಚ್ಚುವುದಿಲ್ಲ. ಬದಲಾಗಿ ಕೆಲವೊಂದು ಸಣ್ಣ ಸಣ್ಣ ವಿಷಯಗಳೂ ರೊಮ್ಯಾಂಟಿಕ್ ಫೀಲ್ ಆಗುವಂಥ ಮಾತುಗಳನ್ನು ಆಡುವುದುಅನಿವಾರ್ಯ. ಅದಕ್ಕೇನು ಮಾಡಬೇಕು. ಇಲ್ಲಿವೆ ಟಿಪ್ಸ್....

- ಮನಸ್ಸಿನಲ್ಲಿ ಇರೋ ಪ್ರೀತಿಯನ್ನು ಸಂಗಾತಿ ಮುಂದೆ ಅಭಿವ್ಯಕ್ತಪಡಿಸಿ. ಅದು ನಾಟಕೀಯವಾಗರಬಾರದು. ನೈಜತೆ ಮರೆಯಾಗದಿರಲಿ.
- ಸಂಸಾರದ ಖುಷಿಗೆ ಮನೆಯೊಡತಿಯೇ ಕಾರಣವೆಂದು ಆಗಾಗ ಹೇಳುತ್ತಿರಿ. ಆಗ ಹೆಂಡತಿಯ ಖುಷಿ ಹೆಚ್ಚುತ್ತೆ. ನಿಮ್ಮ ಮೇಲಿನ ಗೌರವವೂ ಹೆಚ್ಚುತ್ತೆ. ಗಂಡನ ಮೇಲಿನ ಪ್ರೀತಿಯನ್ನು ಮನಸಾರೆ ಹೆಣ್ಣೂ ಎಕ್ಸ್‌ಪ್ರೆಸ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಭಾರತೀಯರೂ ಸೆಕ್ಸ್ ದೃಶ್ಯಗಳನ್ನು ನೋಡುವುದರಲ್ಲಿ ಮುಂದು

- ಶಾರೀರಿಕ ಸಂಬಂಧವೂ ಮುಖ್ಯ. ಆದರೆ, ಸಂಗಾತಿಯನ್ನು ಸರಸಕ್ಕೆ ಎಳೆಯುವಾಗ ರಫ್ ಆ್ಯಂಡ್ ಟಫ್ ಆಗಿರಬೇಡಿ. ಪ್ರೀತಿ ಉಕ್ಕಿ ಹರಿಯಲಿ.
-ದಾಂಪತ್ಯದಲ್ಲಿ ಪಾರದರ್ಶಕತೆ ಮುಖ್ಯ. ಮನದಲ್ಲೊಂದು, ಹೊರವೊಂದಿದ್ದರೆ ಯಾವತ್ತೂ ಉದ್ಧಾರ ಆಗೋಲ್ಲ. ನೈಜ ಪ್ರೀತಿ ಮನಸ್ಸಿನಲ್ಲಿರಲಿ. ಆ ಪ್ರೀತಿ ಆಗಾಗ ಹೊರಹೊಮ್ಮಲಿ.
- ತಮ್ಮ ಪಾರ್ಟ್ನರ್ ನಮಗೆ ಬೆಸ್ಟ್ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ದಾಂಪತ್ಯದಲ್ಲಿ ಯಾವುದೂ ಪರ್ಫೆಕ್ಟ್ ಆಗಿರೋಲ್ಲ. ಆದರೆ, ಪರ್ಫೆಕ್ಟ್ ಮಾಡಿಕೊಳ್ಳಬಹುದು. ಅದಕ್ಕೆ ಇಬ್ಬರೂ ಮನಸ್ಸು ಮಾಡಬೇಕು ಅಷ್ಟೇ. 

ಇದನ್ನೂ ಓದಿ: ಗರ್ಭ ನಿರೋಧಕ ಮಾತ್ರೆ ಕೆಲವೊಮ್ಮೆ ತರುತ್ತೆ ಕುತ್ತು

ಬಾಂಧವ್ಯ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ