Asianet Suvarna News Asianet Suvarna News

ಕತ್ರಿನಾ ಕೈಫ್ ಫಿಟ್ನೆಸ್ ಹಿಂದಿನ ಸೂತ್ರಗಳು

ವಯಸ್ಸು 34, ಒಂದು ಪ್ರಾಯದ ನಂತರ ದೇಹ ಅಡ್ಡಡ್ಡ ಬೆಳೆ​ಯು​ತ್ತದೆ ಎಂದು ಪ್ರತಿ​ಪಾ​ದಿ​ಸು​ವ​ವ​ರಿಗೆ ಈ ಹುಡುಗಿ ಸವಾಲು. ಕತ್ರಿನಾ ಕೈಫ್‌ ಎಂಬ ಬಾಲಿ​ವುಡ್‌ ಬೆಡಗಿ 34ರಲ್ಲೂ ಹದಿ​ಹ​ರೆ​ಯದ ಮೈಕಟ್ಟು ಹೊಂದಲು ಕಾರಣ ಆಕೆ ಫಾಲೋ ಮಾಡು​ವುದು ಫಿಟ್‌​ನೆಸ್‌ ರೆಜಿಮ್‌.

fitness secrets of katrina kaif
  • Facebook
  • Twitter
  • Whatsapp

ವಯಸ್ಸು 34, ಒಂದು ಪ್ರಾಯದ ನಂತರ ದೇಹ ಅಡ್ಡಡ್ಡ ಬೆಳೆ​ಯು​ತ್ತದೆ ಎಂದು ಪ್ರತಿ​ಪಾ​ದಿ​ಸು​ವ​ವ​ರಿಗೆ ಈ ಹುಡುಗಿ ಸವಾಲು. ಕತ್ರಿನಾ ಕೈಫ್‌ ಎಂಬ ಬಾಲಿ​ವುಡ್‌ ಬೆಡಗಿ 34ರಲ್ಲೂ ಹದಿ​ಹ​ರೆ​ಯದ ಮೈಕಟ್ಟು ಹೊಂದಲು ಕಾರಣ ಆಕೆ ಫಾಲೋ ಮಾಡು​ವುದು ಫಿಟ್‌​ನೆಸ್‌ ರೆಜಿಮ್‌. ಬೆಣ್ಣೆ​ಯಂತೆ ನುಣು​ಪಾದ ಹೊಳೆ​ಯುವ ಚರ್ಮ, ಆರೋ​ಗ್ಯ​ದಿಂದ ಮಿನು​ಗುವ ಮೈಕಾಂತಿಯ ಹಿಂದಿ​ರೋದು ಆಕೆ ಮಾಡೋ ವ್ಯಾಯಾಮ ಹಾಗೂ ತಿನ್ನೋ ಆಹಾ​ರ.

ಕತ್ರಿನಾ ಕೈಫ್‌ ಹೊಟ್ಟೆ​ ಪಾಡು
* ಬೆಳಗ್ಗೆ ಓಟ್'ಮೀಲ್, ಸೆರೆಲ್ಸ್, ಮೊಟ್ಟೆಯ ಬಿಳಿಭಾಗ ಹಾಗೂ 1 ಗ್ಲಾಸ್ ದಾಳಿಂಬೆ ಜ್ಯೂಸ್
* ಮಧ್ಯಾಹ್ನ ಬಾಯಿಲ್ಡ್ ರೈಸ್, ತರಕಾರಿ, ಮೊಳಕೆ ಕಾಳಿನ ಸಲಾಡ್
* ಸಂಜೆ ಬ್ರಂಚ್ ಮತ್ತು ಶೇಂಗಾ, ಹಣ್ಣು, ಸ್ನ್ಯಾಕ್ಸ್
* ಎಣ್ಣೆ ತಿಂಡಿ, ಜಂಕ್ ಫುಡ್'ಗಳಿಂದ ದೂರ, ಕಡಿಮೆ ಕಾರ್ಬೊಹೈಡ್ರೇಟ್ ಇರೋ ಆಹಾರಕ್ಕೆ ಹೆಚ್ಚು ಒತ್ತು.

ಫಿಟ್ನೆಸ್'ಗೇನು ಮಾಡ್ತಾರೆ?
* ಬ್ಯುಸಿ ಶೆಡ್ಯೂಲ್ ನಡುವೆ ಪ್ರತಿದಿನ ಜಿಮ್'ಗೆ ಹೋಗೋದಕ್ಕಾಗಲ್ಲ. ಕನಿಷ್ಠ ಅಂದರೂ ವಾರದಲ್ಲಿ ಮೂರು ದಿನ ವರ್ಕೌಟ್ ಮಾಡಿ ಬೆವರು ಹರಿಸ್ತಾರೆ.
* ಪ್ರತೀ ದಿನ ಓಡ್ತಾರೆ, ಸೈಕ್ಲಿಂಗ್ ಮಾಡ್ತಾರೆ
* ಬೆಳಗಿನ ಜಾಗಿಂಗ್ ತಪ್ಪಿಸಲ್ಲ.
* ಸ್ವಿಮ್ಮಿಂಗ್ ಅಂದ್ರೆ ಪ್ರಾಣ, ಜಿಮ್'ಗೆ ಹೋಗೋದಕ್ಕೆ ಬೋರ್ ಆದಾಗ್ಲೆಲ್ಲ ಈಜಾಡೋದಕ್ಕೆ ಹೋಗ್ತಾರೆ.
* ಯಾವತ್ತೂ ಯೋಗ ತಪ್ಪಿಸಲ್ಲ

ಕತ್ರಿನಾ ಅಳತೆ:
ಎತ್ತರ: 5 ಅಡಿ 8 ಇಂಚು
ತೂಕ: 56 ಕೆಜಿ
ಸುತ್ತಳತೆ: 34-26-34

epaper.kannadaprabha.in

Follow Us:
Download App:
  • android
  • ios