ಈಜೋದ್ರಿಂದ ಫಿಟ್‌ನೆಸ್ ಮೆಂಟೇನ್ ಮಾಡೋದು ಈಸಿಯಂತೆ!

Fitness secret of Mandira Bedi
Highlights

ನಟಿ , ವಸ್ತ್ರ ವಿನ್ಯಾಸಗಾತಿ  ಮತ್ತು ನಿರೂಪಕಿಯಾಗಿರುವ ಮಂದಿರಾ ಬೇಡಿ, ಕ್ರಿಕೆಟ್ ಕಾಮೆಂಟರಿಯಿಂದಲೂ ಫೇಮಸ್.  1999ರಲ್ಲಿ ಸಿನಿಮಾ ನಿರ್ದೇಶಕ ರಾಜ್ ಕುಶಾಲ್‌ರನ್ನು ಮದುವೆಯಾಗಿ, ಗಂಡು ಮಗುವಿನ ತಾಯಿಯಾದ ಗುಂಡಗಾಗಿಲ್ಲ. ಬಿಕನಿಯಲ್ಲಿರೋ ಫೋಟೋ ಅಪ್‌ಲೋಡ್ ಮಾಡಿದಾಗಲೆಲ್ಲ, ಮಗುವಿನ ತಾಯಿ ಎನ್ನುವುದು ಗೊತ್ತಾಗದಷ್ಟು ಸ್ಲಿಮ್ ಆಗಿರೋದು ಗೊತ್ತಾಗುತ್ತೆ. ಹಾಗಂತ ಬ್ಯುಟಿಫುಲ್ ಫಿಸಿಕ್ ಮೆಂಟೇನ್ ಮಾಡ್ಲಿಕ್ಕೆ ಮಂದಿರಾ ಪಡ್ತಿರೋ ಪಾಡು ಅಷ್ಟಿಷ್ಟಲ್ಲ.

- ಗಂಡು ಮಗನಿಗೆ ತಾಯಿಯಾಗಿರುವ ತನ್ನ ದೇಹದ ಕಾಳಜಿಯನ್ನು ಮಾತ್ರ ಮಂದಿರಾ ಕಡಿಮೆ ಮಾಡಿಕೊಂಡಿಲ್ಲ. ಬಿಡುವಿರದ ದುಡಿತದಲ್ಲಿಯೂ ದೇಹವನ್ನು ಫಿಟ್ ಆಗಿಡುವಂತ ವ್ಯಾಯಾಮ ತಪ್ಪಿಸೋಲ್ಲ ಮಂದಿರಾ.

-ದೂರದರ್ಶನದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುವಾಗಲೇ ದೇಹ ಪ್ರೀತಿ ಬೆಳೆಯಿಸಿಕೊಂಡ ಮಂದಿರಾ, ಆಗಿಂದಲೇ ದೇಹವನ್ನು ಫಿಟ್ ಆಗಿಡಲು ಕಸರತ್ತು ಆರಂಭಿಸಿದರು.

- ಟೈಮಿದ್ದರೆ 1.20 ನಿಮಿಷ, ಇಲ್ಲವಾದಲ್ಲಿ 50 ನಿಮಿಷ ತಪ್ಪದೇ ವ್ಯಾಯಾಮ ಮಾಡ್ತಾರೆ.

- ಈಜು ನೆಚ್ಚಿನ ಹವ್ಯಾಸ. ಸಮಯ ಸಿಕ್ಕಾಗ ಈಜುವುದನ್ನು ತಪ್ಪಿಸೋಲ್ಲ. ಇದೇ ಇವರ ಫಿಟ್‌ನೆಸ್‌ನ ಬೆಸ್ಟ್ ಮಂತ್ರ.

- ವಾರದಲ್ಲಿ 5 ದಿನ ವ್ಯಾಯಾಮ ಮಾಡಿ 22 ಕೆಜೆ ತೂಕ ಕಡಿಮೆ ಮಾಡಿಕೊಂಡಿದ್ದಾರೆ.

;

- ಆಹಾರ ಸೇವನೆಯಲ್ಲೂ ಮಂದಿರಾ ಸಿಕ್ಕಾಪಟ್ಟೆ ಸ್ಟ್ರಿಕ್ಟ್. ಪ್ರತಿದಿನ ಬೆಳಗ್ಗೆ ವ್ಯಾಯಾಮಕ್ಕೂ ಮುನ್ನ ಕೋಲ್ಡ್ ಕಾಫಿ, ಬಾಳೆಹಣ್ಣು ಸೇವಿಸುತ್ತಾರೆ. ಮಧ್ಯಾಹ್ನ ರೋಟಿ-ದಾಲ್ ಮತ್ತು ಸಬ್ಜೀ, ರಾತ್ರಿ ಕಡಿಮೆ ಊಟ ಮಾಡಿ ಬಳ್ಳಿಯಂತೆ ಬಳುಕುತ್ತಿದ್ದಾರೆ. 

- 'ಮೊಟ್ಟೆ ಸೇವಿಸುತ್ತೇನೆ, ಆದರೆ, ಸಸ್ಯಾಹಾರಿ' ಎನ್ನೋದು ಮಂದಿರಾ ಉವಾಚ.

- ಶೇ.70 ಡಯಟ್ ಮತ್ತೆ ಶೇ.30 ವ್ಯಾಯಾಮ ಮಾಡಿ, ವಾರಕ್ಕೆ 1 ಕೆಜಿ ಕಡಿಮೆ ಮಾಡಿಕೊಳ್ಳುವ ಗುರಿ ಇಟ್ಟಕೊಂಡರೆ ಬೆಸ್ಟ್ ಎನ್ನೋದು ಡುಮ್ ಡುಮ್‌ಗಿರೋರಿಗೆ ಮಂದಿರಾ ನೀಡೋ ಸಿಂಪಲ್ ಟಿಪ್ಸ್.

loader