ಬಾಲಿವುಡ್ ಬೆಡಗಿ ಬಿಪಾಶಾ ಬಸು ತಮ್ಮ ಸೆಕ್ಸೀ ಲುಕ್‌ನಿಂದಲೇ ಅಭಿಮಾನಿಗಳ ಹೃದಯ ಗೆದ್ದವರು. ಅವರ ಫಿಸಿಕ್ ಮೆಂಟೇನ್ ಮಾಡಲೂ ಸಿಕ್ಕಾಪಟ್ಟೆ ಕಷ್ಟಪಡುತ್ತಾರೆ. ಮಾದಕ ಸೌಂದರ್ಯ ಕಾಪಾಡಲು ಅವರು ಹೇಗೆ ಏನು ಮಾಡುತ್ತಾರೆ ಗೊತ್ತಾ?

ಬಿಪಾಶ ಬಸು ಎಂಬ ಮಾದಕ ಚೆಲುವೆ ದಾಂಪತ್ಯಕ್ಕಡಿಯಿಟ್ಟ ಮೇಲೆ ಆರಾಮಾಗಿ ಫ್ಯಾಮಿಲಿ ಲೈಫ್ ಎನ್‌ಜಾಯ್ ಮಾಡ್ತಿದ್ದಾರೆ. ಆದರೆ, ಈ ಬೆಡಗಿ ಫಿಟ್‌ನೆಸ್‌ ಅನ್ನು ಮರೆತಿಲ್ಲ, ಮಾತ್ರವಲ್ಲ, ಗಂಡನ ಜೊತೆಗೇ ವರ್ಕೌಟ್ ಮಾಡ್ತಿದ್ದಾರೆ. ಆ ಫೊಟೋಗಳನ್ನೂ ಬಿಪಾಶ ಇನ್ ಸ್ಟೆಗ್ರಾಂನಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. 

ಆಕೆ ಪತಿ ಕರಣ್ ಗ್ರೋವರ್ ಯೋಗದ ಭಂಗಿಯಲ್ಲಿ ಬಿಪಾಶ ಅವರನ್ನು ಕೈ ಮತ್ತು ಕಾಲುಗಳಿಂದ ಎತ್ತಿಹಿಡಿದಿರುವ ಪೋಸ್ ಸಖತ್ ರೊಮ್ಯಾಂಟಿಕ್ ಆಗಿದೆ. ಬೆಳ್ಳಂಬೆಳಗ್ಗೆ 6 ಎಗ್‌ವೈಟ್ ತಿನ್ನೋ ಈ ಚೆಲುವೆಗೆ ಹೆವ್ವೀ ಬ್ರೇಕ್‌ಫಾಸ್ಟ್ ಕ್ರೇಜ್ ಅಂತೆ. ಆದರೆ ಊಟ ಬಹಳ ಸಿಂಪಲ್. ಚಪಾತಿ, ದಾಲ್ ಮತ್ತು ತರಕಾರಿ ಯಷ್ಟೇ. ಸಂಜೆ ಡೈಜೆಸ್ಟಿವ್ ಬಿಸ್ಕೆಟ್ಸ್ ತಿಂದರೆ ರಾತ್ರಿ ಗ್ರಿಲ್ಡ್ ಚಿಕನ್, ತರಕಾರಿ ತಿನ್ತಾರಂತೆ. 

ಯೋಗ, ಟ್ರೆಡ್ ಮಿಲ್, ಸೈಕ್ಲಿಂಗ್ ಮಾಡೋ ಬಿಪಾಶ 40ರ ಆಸುಪಾಸಿನಲ್ಲಿದ್ದರೂ ದೇಹ ಮಾತ್ರ 25ರ ಹರೆಯದಂತಿದೆಯಂತೆ.