ಮಂಗಳೂರು(ಜ. 08)  ಸೋಶಿಯಲ್ ಮೀಡಿಯಾನೇ ಹಾಗೆ. ಯಾವ ದಿನ ಯಾವುದು ವೈರಲ್ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವಾಗ ಹೇಳಿದ "ಹೌದು ಹುಲಿಯಾ" ಎಂಬ ಡೈಲಾಗ್ ಊರೆಲ್ಲ ವೈರಲ್ ಆಯ್ತು. ಮಾಜಿ ಸಿಎಂ ಕುಮಾರಸ್ವಾಮಿ ಅಂದೆಂದೋ ಕಾರ್ಯಕ್ರಮದಲ್ಲಿ ಹೇಳಿದ್ದ "ನಿಖಿಲ್ ಎಲ್ಲಿದ್ದೀಯಪ್ಪಾ" ಸೋಶಿಯಲ್ ಮೀಡಿಯಾವನ್ನು ಆವರಿಸಿಕೊಂಡಿತ್ತು.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬ್ಯಾನರ್ ಒಂದು ವೈರಲ್ ಆಗುತ್ತಿದೆ. ಮೊದಲಿಗೆ ಇದು ಫೇಕ್ ಎಂದು ಭಾವಿಸಿದರೂ ಅಸಲಿಯದ್ದೋ ಗೊತ್ತಿಲ್ಲ.. ಆದರೆ ವೈರಲ್ ಆಗುತ್ತಿರುವ ಆ ಬ್ಯಾನರ್ ನಲ್ಲಿ ಅಂಥಾದ್ದೇನಿದೆ?

ಇದೊಂದು ತರಹದ ಮುಜಯಗರದ ಹೊರತಾದ ಬ್ಯಾನರ್. ಸ್ನೇಹಿತರ ಭರ್ಜರಿ ಹಾರೈಕೆ. ಗೆದ್ದು  ಬಾ ಗೆಳೆಯ ಎಂಬ ಶುಭ ಸಂದೇಶ!  ಇದು ಮಂಗಳೂರಿನ ಬಜ್ಜೋಡಿಯಿಂದ ಹೊರಟ ಸುದ್ದಿ.

ತೀರಕ್ಕೆ ಬಂದು ಬಿತ್ತು ಪುರುಷರ ಶಿಶ್ನದಂತೆ ಕಾಣುವ  'ಪೆನಿಸ್ ಫಿಶ್' ಏನ್ ಕತೆ?

"ನಮ್ಮ ಮುರ್ಗದ ಗೆಳೆಯರಸಿಕ ವರ್ಣನ್ ಡಿಸೋಜಾ (ಬಜ್ಜೋಡಿ) ಇವರ ಮದುವೆ ನಂತರದ ಪ್ರಪ್ರಥಮ ಆಟ ಮೊದಲ ರಾತ್ರಿಯ ಸಂಭ್ರಮ ದಿನಾಂಕ 4 ಜನವರಿ, ಸ್ಥಳ: ಸೋಪನ್ ಬಜ್ಜೋಡಿ ಮನೆಯಲ್ಲಿ, ಸಮಯ ರಾತ್ರಿ: 12 ಗಂಟೆಯಿಂದ ಮುಂಜಾನೆ ತ್ರಾಣ ಇರುವ ತನಕ.. ಎದ್ದು ಬಿದ್ದು ಹೋರಾಡಿ ಗೆದ್ದು ಬಾ ಗೆಳೆಯ! ನಿಮ್ಮ ಪ್ರಥಮ ರಾತ್ರಿಗೆ ಶುಭಕೋರುವವರು ಪಂಪ್ ವೆಲ್ ಪ್ಲೈಓವರ್ದ ಅಂಚಿ ಮತ್ತು ಇಂಚಿ ಗೆಳೆಯರು, All the best for your 1st game" 

ಬ್ಯಾನರ್ ನಲ್ಲಿ ಬರೆದಿದ್ದನ್ನು ಯಥಾವತ್ತಾಗಿ ಇಲ್ಲಿ ಬರೆದಿದ್ದದೇವೆ. ಮದುವೆ ದಿನ ಮದುಮಗನಿಗೆ ಸ್ನೇಹಿತರು ರಾತ್ರಿ ಕೋಣೆ ಒಳಗೆ ಕಾಲಿಡುವುದಕ್ಕೆ ಮುನ್ನ ಹಣಕ್ಕಾಗಿ, ಪಾರ್ಟಿಗಾಗಿ ಬೇಡಿಕೆ ಇಡುವುದನ್ನು ನೋಡಿದ್ದೇವೆ. ಕೇಳಿದ್ದೇವೆ. ಆದರೆ ಇಲ್ಲಿನ ಗೆಳೆಯರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಒಟ್ಟಿನಲ್ಲಿ ಟ್ರೋಲ್ ಪೇಜ್ ಗಳ ಕೈಗೂ ಈ ಬ್ಯಾನರ್ ಸಿಕ್ಕಿದೆ.