ಸಕಾಲಕ್ಕೂ ಸೂಟ್ ಆಗುತ್ತೆ ಫ್ಲೋರಲ್ ಪ್ರಿಂಟ್; ನೀವೂ ಟ್ರೈ ಮಾಡಿ

First Published 7, Nov 2018, 10:52 AM IST
Fashion Floral print dress suit for all occasions
Highlights

ಫ್ಲೋರಲ್ ಪ್ರಿಂಟ್ ಡ್ರೆಸ್ ಈಗ ಟ್ರೆಂಡ್. ಎಲ್ಲಾ ಕಾಲಕ್ಕೂ, ಎಲ್ಲಾ ಸಂದರ್ಭದಲ್ಲಿ ಇದು ಮ್ಯಾಚ್ ಆಗುತ್ತೆ. ಇನ್ನೇಕೆ ತಡ, ನಿಮ್ಮ ವಾರ್ಡ್ ರೋಬ್‌ಗೆ ಸೇರಿಸಿಕೊಳ್ಳಿ. 

ಬೆಂಗಳೂರು (ನ. 07):  ಎಲ್ಲ ಹುಡುಗಿಯರ ವಾಲ್‌ಡ್ರೋಬ್‌ನಲ್ಲೇ ಇರಲೇಬೇಕಾದ ಫ್ಯಾಬ್ರಿಕ್ ಡ್ರೆಸ್‌ನಲ್ಲಿ ಫ್ಲೋರಲ್ ಪ್ರಿಂಟ್ ಸಹ ಒಂದು. ಎಲ್ಲ ಹುಡುಗಿಯರ ಅಚ್ಚುಮೆಚ್ಚಿನ ಪ್ರಿಂಟ್ ಕೂಡಾ ಹೌದು.  

ಏನೀದರ ವಿಶೇಷತೆ?

ಫ್ಲೋರಲ್ ಪ್ರಿಂಟ್ ಕೇವಲ ಬೇಸಿಗೆ ಕಾಲಕ್ಕೆ ಮಾತ್ರ ಅಲ್ಲಾ, ಎಲ್ಲಾ ಕಾಲಕ್ಕೂ ಸೂಕ್ತವಾಗುವ ಡ್ರೆಸ್ ಪ್ರಿಂಟ್ ಆಗಿದೆ. ಮಾನ್ಸೂನ್ ಸಮಯದಲ್ಲಿ ವಾರ್ಡ್ ರೋಬ್ ನಲ್ಲಿ ಬೇರೆ ಬೇರೆ ರೀತಿಯ ಸುಂದರವಾದ ಫ್ಲೋರಲ್ ಪ್ರಿಂಟ್ ಇರಬೇಕು. ಫ್ಲೋರಲ್ ಪ್ರಿಂಟ್ ಇರುವ ಮಲ್ ಮಲ್, ಕಾಟನ್ ಮತ್ತು ಲೆನಿನ್ ಫ್ಯಾಬ್ರಿಕ್ ಡ್ರೆಸ್ ಗಳು ಸ್ಟೈಲಿಶ್ ಆಗಿರುತ್ತವೆ, ಜೊತೆಗೆ ಆರಾಮದಾಯಕವು ಆಗಿರುತ್ತದೆ. 

ಏನೇನು ಇದ್ದರೆ ಬೆಸ್ಟ್?

ಮ್ಯಾಕ್ಸಿ ಡ್ರೆಸ್: ಮ್ಯಾಕ್ಸಿ ಡ್ರೆಸ್ ಖರೀದಿಸಲು ಹೋಗುವಿರಾದರೆ ಸಣ್ಣ ಸಣ್ಣ ಫ್ಲೋರಲ್ ಪ್ರಿಂಟ್ ಇರುವ ಮ್ಯಾಕ್ಸಿ ಡ್ರೆಸ್ ಸಿಗುತ್ತವೆ. ಸದಾ ಕಾಲಕ್ಕೂ ಟ್ರೆಂಡ್‌ನಲ್ಲಿರೋ ಈ ಡ್ರೆಸ್ ನಿಮ್ಮಲ್ಲಿ ಇರಲಿ.

ಲೆಹಂಗಾ: ಫ್ಲೋರಲ್ ಪ್ರಿಂಟ್ ಲೆಹಂಗಾವನ್ನು ಮದುವೆಯಲ್ಲಿ ಧರಿಸೋದು ಬೆಸ್ಟ್ ಐಡಿಯಾ. ಯಾಕೆಂದರೆ ಇದು ಬೆಸ್ಟ್ ಲುಕ್ ನೀಡುತ್ತದೆ. ಫ್ಲೋರಲ್ ಪ್ರಿಂಟ್ ಲೆಹಂಗಾ ಪ್ರತಿಯೊಬ್ಬರನ್ನು ಆಕರ್ಷಿಸೋದರಲ್ಲಿ ಸಂಶಯವಿಲ್ಲ. 

ಕ್ಯಾಶುವಲ್ ವೇರ್: ಪಾರ್ಟಿ ಡ್ರೆಸ್ ಅಲ್ಲದೆ, ಬೀಚ್ ವೇರ್ ಮತ್ತು ಕ್ಯಾಶುಯಲ್ ವೇರ್ ಆಗಿ ಕೂಡ ಫ್ಲೋರಲ್ ಪ್ರಿಂಟ್ ಸುಂದರವಾಗಿ ಕಾಣಿಸುತ್ತದೆ. 

ಕುರ್ತಾ: ಈ ಕುರ್ತಾ ಬೇಸಿಗೆ ಕಾಲದಲ್ಲಿ ಧರಿಸಿದರೆ ತಾಜಾ ಲುಕ್ ನೀಡುತ್ತದೆ. ಜೊತೆಗೆ ಈ ಫ್ಲೋರಲ್ ಪ್ರಿಂಟ್ ಕಾಲೇಜು ಅಥವಾ ಆಫೀಸ್ ಎರಡಕ್ಕೂ ಸೂಟ್ ಆಗುತ್ತದೆ. 

ಫ್ಲೋರಲ್ ಪ್ರಿಂಟ್ ಬ್ಲೇಝರ್ : ಸಮ್ಮರ್ ಸೀಸನ್‌ನಲ್ಲಿ ಫ್ಲೋರಲ್ ಪ್ರಿಂಟ್ ಬ್ಲೇಝರ್ ಸ್ಟೈಲಿಶ್ ಲುಕ್ ನೀಡುತ್ತದೆ. ಇದರ ಜೊತೆಗೆ ಫ್ಲೋರಲ್ ಜಂಪ್ ಸೂಟ್ ರಾಕಿಂಗ್ ಲುಕ್ ನೀಡುತ್ತದೆ.

loader