36ನೇ ವರ್ಷದಲ್ಲೇ ಬ್ಯೂಟಿ ಇನ್‌ಫ್ಲುಯೆನ್ಸರ್ Farah El Kadhi ಹೃದಯಾಘಾತದಿಂದ ಸಾವು!
farah el kadhi died ಅವರ ಸೋಶಿಯಲ್ ಮೀಡಿಯಾ ಬಯೋ ಪ್ರಕಾರ, ಫರಾಹ್ ಎಲ್ ಕಧಿ ಖಾಸಗಿ ಸಂಸ್ಥೆಯೊಂದರಲ್ಲಿ ಆರ್ಟಿಟೆಕ್ಟ್ ಮತ್ತು ಫ್ಯಾಷನ್ ಬ್ರ್ಯಾಂಡ್ ಬಾಜಾರ್ ಬೈ ಫಾಪ್ ಮಾಲೀಕರಾಗಿದ್ದರು.
ನವದೆಹಲಿ (ಜೂ.21): ಟುನೇಷಿಯಾ ದೇಶದ ಬ್ಯೂಟಿ ಇನ್‌ಫ್ಲುಯೆನ್ಸರ್ 36 ವರ್ಷದ ಫರಾಹ್ ಎಲ್ ಕಧಿ, ಮಾಲ್ಟಾ ದೇಶದಲ್ಲಿ ಯಾಚ್‌ನಲ್ಲಿ ವಿಹಾರದಲ್ಲಿರುವಾಗಲೇ ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ಟೈಮ್ಸ್ ಆಫ್ ಮಾಲ್ಟಾ ವರದಿ ಮಾಡಿದೆ. ಅವರನ್ನು ತಕ್ಷಣವೇ ಮೇಟರ್ ಡೀ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸೋಮವಾರ ಅವರು ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಯುರೋಪಿಯನ್ ದೇಶದಲ್ಲಿ ವಿಹಾರದಲ್ಲಿದ್ದ ಈಕೆ, ತಮ್ಮ ಇನ್ಸ್‌ಟಾಗ್ರಾಮ್ ಸ್ಟೋರಿ ಮತ್ತು ಪೋಸ್ಟ್‌ಗಳ ಮೂಲಕ ವಿವಿಧ ಕಂಪನಿಗಳು ಹಾಗೂ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುತ್ತಿದ್ದರು. ಆದರೆ, ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಾಗ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿಯೇ ಅವರು ಸಾವು ಕಂಡಿದ್ದಾರೆ ಎಂದು ಘೋಷಣೆ ಮಾಡಲಾಗಿದೆ. ಆಕೆಯ ಹಠಾತ್ ಸಾವು ಆಕೆಯ ಅಭಿಮಾನಿಗಳು ಹಾಗೂ ಆನ್‌ಲೈನ್ ಸಮುದಾಯದ ಆಘಾತಕ್ಕೆ ಕಾರಣವಾಗಿದೆ.
ಫರಾಹ್ ಎಲ್ ಕಧಿ ಅವರಿಗೆ ಇನ್ಸ್‌ಟಾಗ್ರಾಮ್‌ನಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚಿನ ಫಾಲೋವರ್ಸ್‌ಗಳಿದ್ದಾರೆ. ಅವರ ಸೋಶಿಯಲ್ ಮೀಡಿಯಾ ಬಯೋ ಪ್ರಕಾರ, ಫರಾಹ್ ಎಲ್ ಕಧಿ ಖಾಸಗಿ ಸಂಸ್ಥೆಯೊಂದರಲ್ಲಿ ಆರ್ಟಿಟೆಕ್ಟ್ ಮತ್ತು ಫ್ಯಾಷನ್ ಬ್ರ್ಯಾಂಡ್ ಬಾಜಾರ್ ಬೈ ಫಾಪ್ ಮಾಲೀಕರಾಗಿದ್ದರು. ತಮ್ಮನ್ನು ತಾವು ಟ್ರಾವೆಲ್ ಅಡಿಕ್ಟ್ ಎಂದು ಬರೆದಿರುವ ಆಕೆ, ಬಾತ್‌ರೂಮ್ ಸಿಂಗರ್ ಕೂಡ ಹೌದು ಎಂದಿದ್ದಾರೆ. ಜೂನ್ 7 ರಂದು ಗ್ರೀಸ್ನ ಮೈಖೂನ್ಸ್‌ನ ರೆಸ್ಟೋರೆಂಟ್‌ನಲ್ಲಿ ಮಾಡಿರುವ ಪೋಸ್ಟ್ ಅವರ ಕೊನೆಯ ಪೋಸ್ಟ್ ಆಗಿದೆ.
ಸೋಶಿಯಲ್ ಮೀಡಿಯಾ ಸ್ಟಾರ್‌ಅನ್ನು ಆಸ್ಪತ್ರೆಗೆ ದಾಖಲಿಸಿದಾಗ ಯಾವುದೇ ಗಾಯಗಳು ಆಕೆಯ ಮೈಮೇಲೆ ಇದ್ದಿರಲಿಲ್ಲ ಎಂದು ಟೈಮ್ಸ್ ಆಫ್ ಮಾಲ್ಟಾ ವರದಿ ಮಾಡಿದೆ. ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕವೇ ಸೂಕ್ತ ಕಾರಣ ತಿಳಿಯಲಿದೆ ಎನ್ನಲಾಗಿದೆ.
ನನ್ನ ಬಾಡಿಯಲ್ಲಿ ಬೇರೆ ಯಾವ ಪಾರ್ಟ್ ಕೂಡ ಇಲ್ವಾ? ಬರೀ ಸೊಂಟಾನೇ ತೋರಿಸ್ತೀರಲ್ಲ: ಸಿಟ್ಟಾಗಿದ್ರಂತೆ ಇಲಿಯಾನ!
ಕಧಿ ಅವರ ಆಪ್ತ ಸ್ನೇಹಿತೆಯಾಗಿರುವ ಸೌಲೈಮಾ ಹ್ನೇನಿಯಾ ಸಾವನ್ನು ಖಚಿತಪಡಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಈ ವಿಚಾರವನ್ನು ಬರೆದುಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಅವರ ಇನ್ಸ್‌ಟಾಗ್ರಾಮ್‌ನ ಕೊನೆಯ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಹೆಚ್ಚಿನವರು ಇದನ್ನು ನಂಬಲು ಸಾಧ್ಯವೇ ಇಲ್ಲ. ನಾನು ಶಾಕ್‌ನಲ್ಲಿದ್ದೇನೆ. ಬೇಬ್ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ. ನಿಮ್ಮನ್ನು ನಾವು ಯಾವತ್ತೂ ಮರೆಯೋದಿಲ್ಲ ಡಾರ್ಲಿಂಗ್ ಎಂದು ಬರೆದಿದ್ದಾರೆ. ನೀವು ನಮಗೆ ಇನ್ಸ್‌ಟಾಗ್ರಾಮ್‌ನಿಂದಲೇ ಪರಿಚಯ. ಆದರೆ, ಈಗ ನೀವು ಇಲ್ಲ ಎಂದು ಕೇಳಿ ನಿಕ್ಕೂ ಆಘಾತವಾಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.
ಇಲಿಯಾನಾ ಮಗನಿಗೆ ಕೋಯಾ ಫೀನಿಕ್ಸ್ ಎಂದು ಹೆಸರಿಟ್ಟಿದ್ದೇಕೆ?