Asianet Suvarna News Asianet Suvarna News

ಸಾವಿರ ಕೋಟಿ ರೂಪಾಯಿ ಬೆಲೆ ಬಾಳುವ ಅಡುಗೆ ಭಟ್ರು ಇವರು!

ನಾಲ್ಕು ಕೋಣೆಗೆ ಸೀಮಿತವಾಗಿದ್ದ ‘ಅಡುಗೆ’ ಪರಿಧಿಯನ್ನು ವಿಶ್ವದಗಲ ಹರಡಿಸಿ ಕೋಟಿ ಎಣಿಸಿದ ಚಾಣಾಕ್ಷ. ಆರಂಭದಲ್ಲಿ ಹೊಟೇಲ್‌ಗಳಲ್ಲಿ ಶೆಫ್ ಆಗಿ ದುಡಿಯುತ್ತಿದ್ದ ಸಂಜೀವ್ ಈಗ ಫುಡ್ ಫುಡ್ ಚಾನೆಲ್ ನಡೆಸುತ್ತಿದ್ದಾರೆ. ವಂಡರ್ ಶೆಫ್ ಅನ್ನುವ ಗೃಹೋಪಯೋಗಿ ವಸ್ತುಗಳ ಕಂಪೆನಿ ಇದೆ. 17 ವರ್ಷಗಳ ಕಾಲ ‘ಖಾನಾ ಖಜಾನ’ ಕಾರ್ಯಕ್ರಮ ನಡೆಸಿ ವಿಶ್ವಾದ್ಯಂತ ೫೦ ಲಕ್ಷಕ್ಕೂ ಅಧಿಕ ಪೇಕ್ಷಕರನ್ನು ಸೆಳೆದವರು, 150 ಕ್ಕೂ ಅಧಿಕ ಬೆಸ್ಟ್ ಸೆಲ್ಲರ್ ಅಡುಗೆ ಪುಸ್ತಕ ಬರೆದವರು.

Famous Chef Sanjeev Kapoor

ಮೂರು ದಶಕಗಳ ಹಿಂದಿನ ಘಟನೆ. ಬ್ಯಾಂಕ್ ಉದ್ಯೋಗಿಯಾಗಿದ್ದ ಅಪ್ಪನ ಮುಂದೆ ನಿಂತಿದ್ದ ಪಿಯುಸಿ ಮುಗಿಸಿದ್ದ ಮಗ, ತಾನು ಹೊಟೇಲ್ ಮ್ಯಾನೇಜ್‌ಮೆಂಜ್ ಡಿಪ್ಲೊಮಾಗೆ ಸೇರ‌್ಕೊಳ್ತೀನಿ ಅಂದಾಗ, ಅಪ್ಪ ಅರ್ಥವಾಗದ ಕಾರಣಕ್ಕೋ, ಗೊಂದಲದಲ್ಲೋ, ಬೇಸರದಲ್ಲೋ ತಲೆ ಕೊಡವಿದ್ದರು. ಹೊಟೇಲ್  ಮ್ಯಾನೇಜ್‌ಮೆಂಟ್ ಬಗ್ಗೆ ಆಗ ಕಾಲಕ್ಕೆ ಹೆಚ್ಚು ತಿಳಿದವರಿರಲಿಲ್ಲ. ಆದರೆ ಈ ಹುಡುಗ ತನ್ನಿಚ್ಛೆಯಂತೆ ಹೊಟೇಲ್ ಮ್ಯಾನೇಜ್‌ಮೆಂಟ್‌ಗೇ ಸೇರಿಕೊಂಡ.

ವಂಡರ್ ಶೆಫ್ ಸಂಜೀವ್ ಕಪೂರ್!  

ಇವನಂತೆ ಹೊಟೇಲ್ ಮ್ಯಾನೇಜ್‌ಮೆಂಟ್‌ಗೆ ಸೇರಿಕೊಂಡ ಎಲ್ಲರೂ ಇವನಂತಾಗಲು ಸಾಧ್ಯವಿಲ್ಲ. ಏಕೆಂದರೆ ತನ್ನ ಅಡುಗೆ ಅಭಿರುಚಿಯಿಂದಲೇ  ಈತ ಕಟ್ಟಿದ್ದು ಬರೋಬ್ಬರಿ ಸಾವಿರ ಕೋಟಿಗಳ ಸಾಮ್ರಾಜ್ಯವನ್ನು! ವಂಡರ್ ಶೆಫ್ ಸಂಜೀವ್ ಕಪೂರ್!  ನಾಲ್ಕು ಕೋಣೆಗೆ ಸೀಮಿತವಾಗಿದ್ದ ‘ಅಡುಗೆ’ ಪರಿಧಿಯನ್ನು ವಿಶ್ವದಗಲ ಹರಡಿಸಿ ಕೋಟಿ ಎಣಿಸಿದ ಚಾಣಾಕ್ಷ. ಆರಂಭದಲ್ಲಿ ಹೊಟೇಲ್‌ಗಳಲ್ಲಿ ಶೆಫ್ ಆಗಿ ದುಡಿಯುತ್ತಿದ್ದ ಸಂಜೀವ್ ಈಗ ಫುಡ್ ಫುಡ್ ಚಾನೆಲ್ ನಡೆಸುತ್ತಿದ್ದಾರೆ. ವಂಡರ್ ಶೆಫ್ ಅನ್ನುವ ಗೃಹೋಪಯೋಗಿ ವಸ್ತುಗಳ ಕಂಪೆನಿ ಇದೆ. 17 ವರ್ಷಗಳ ಕಾಲ ‘ಖಾನಾ ಖಜಾನ’ ಕಾರ್ಯಕ್ರಮ ನಡೆಸಿ ವಿಶ್ವಾದ್ಯಂತ 50 ಲಕ್ಷಕ್ಕೂ ಅಧಿಕ ಪೇಕ್ಷಕರನ್ನು ಸೆಳೆದವರು, 150 ಕ್ಕೂ ಅಧಿಕ ಬೆಸ್ಟ್ ಸೆಲ್ಲರ್ ಅಡುಗೆ ಪುಸ್ತಕ ಬರೆದವರು.

ದೇಶಾದ್ಯಂತದ ಇವರ ಮಾಲೀಕತ್ವದ 70 ಕ್ಕೂ ಅಧಿಕ ರೆಸ್ಟೊರೆಂಟ್‌ಗಳಿವೆ. ಸಂಜೀವ್ ಕಪೂರ್ ಈಗ ಎಣಿಸುತ್ತಿರುವ ಕೋಟಿಗಳಲ್ಲಿ ಬಹುಪಾಲು ಅಂದರೆ 225 ಕೋಟಿ ರು.ಗಳಷ್ಟು ಆದಾಯ ಬರುತ್ತಿರುವುದು ‘ವಂಡರ್ ಶೆಫ್’ ಎಂಬ ಗೃಹೋಪಯೋಗಿ ವಸ್ತುಗಳ ಕಂಪೆನಿಯಿಂದ. ಇದು ಸಂಜೀವ್ ಕಪೂರ್ ಮತ್ತು ಸೊಡೆಕ್ಸೋ ಇಂಡಿಯಾದ ಸಿಇಓ ಆಗಿದ್ದ ರವಿ ಸಕ್ಸೆನಾ ಪಾಲುದಾರಿಕೆಯಲ್ಲಿರುವ ಕಂಪೆನಿ.

ಟಾರ್ಗೆಟ್ ತಲೆಬಿಸಿ, ಆರಂಭಿಕ ದಿನಗಳ ಕಷ್ಟ

ವಂಡರ್‌ಶೆಫ್‌ನ ಆರಂಭಿಕ ದಿನಗಳು. ಶುರುವಿಗೆ ಎದುರಿಗಿದ್ದ ಟಾರ್ಗೆಟ್ ಮೂರು ಸೆಟ್ ನಾನ್‌ಸ್ಟಿಕ್ ಪ್ಯಾನ್ ಸೇಲ್ ಮಾಡಿ 8,000 ರು. ತರಬೇಕು. ಮುಂದಿನ ಹಂತ ಇಟಲಿಯಿಂದ ಆಮದು ಮಾಡಿಕೊಳ್ಳಲಾದ 2,500 ಪ್ಯಾನ್‌ಗಳನ್ನು ಮಾರಾಟ ಮಾಡಿ 25,000 ಹಣ ಹೊಂಚುವುದು. ‘ಅಲ್ಲಿಯವರೆಗೆ ಅಡುಗೆ ಮಾಡಿಕೊಂಡು ಹಾಯಾಗಿದ್ದವನಿಗೆ  ಮಾರ್ಕೆಟಿಂಗ್ ರಿಯಾಲಿಟಿಯನ್ನು ಅರ್ಥ ಮಾಡಿಸಿದ್ದು ನಾವು ಆರಂಭಿಸಿದ್ದ ವಂಡರ್‌ಶೆಫ್ ಎಂಬ ಗೃಹೋಪಯೋಗಿ ಉತ್ಪನ್ನಗಳ ಕಂಪೆನಿ. ಏನೇನು ಸರ್ಕಸ್ ಮಾಡಿದರೂ ಪ್ರಾಡಕ್ಟ್ ಆಮೆಗತಿಯಲ್ಲಿ ಸೇಲಾಗ್ತಿದ್ರೆ ಟೆನ್ಶನ್ ಎಷ್ಟಿರಬೇಡ’ ಎಂದು ನಗುತ್ತಾರೆ ಸಂಜೀವ್.

ಮಾಲ್‌ಗಳು, ಔಟ್‌ಲೆಟ್‌ಗಳು, ಬಿಗ್ ಬಜಾರ್‌ಗಳಲ್ಲಿ ತಮ್ಮ ಕಂಪೆನಿಯಿಂದ ತಯಾರಾದ ವಸ್ತುಗಳನ್ನಿಟ್ಟು ಪ್ರಚಾರ ಮತ್ತು ಮಾರಾಟ ಮಾಡುವುದು, ಮನೆ ಮನೆಗೆ ಸೇಲ್ ಜೊತೆಗೆ ಗುಣಮಟ್ಟದ ಜಾಹೀರಾತುಗಳನ್ನೂ ನೀಡುವುದು.. ಹೀಗೆ ಪ್ರಮೋಶನ್, ಮಾರಾಟಕ್ಕೆ ಎಲ್ಲೆಲ್ಲಿ ಅವಕಾಶವಿದೆಯೋ ಅಲ್ಲೆಲ್ಲ ಶಕ್ತಿ ಮೀರಿ ಪ್ರಯತ್ನಿಸಲಾಯಿತು. ಸಂಜೀವ್ ಕಪೂರ್ ಅವರದೇ  ‘ಫುಡ್ ಫುಡ್’ ಚಾನೆಲ್ ಮೂಲಕವೂ ಹೆಚ್ಚಿನ ಪ್ರಚಾರ ದೊರಕಿತು. ಈ ತಂತ್ರ ಆಮೆಗತಿಯಲ್ಲಿದ್ದ ಕಂಪೆನಿಯ ವೇಗ ಹೆಚ್ಚಿಸಿತು. ಕಂಪೆನಿ ಆರಂಭಿಸಿದ 1000 ದಿನಗಳಲ್ಲೇ 50 ಕೋಟಿಗಳ ರೆವೆನ್ಯೂ ಬಂತು. ಕಾಪ್ವೆಟ್ ಎಂಬ ಹೂಡಿಕೆದಾರ ಸಂಸ್ಥೆ 30 ಕೋಟಿ ರು. ಬಂಡವಾಳವನ್ನು ಈ ಕಂಪೆನಿಯಲ್ಲಿ ಹೂಡಿಕೆ ಮಾಡಿತು. ದೇಶಾದ್ಯಂತ ಸಾವಿರಾರು ಔಟ್‌ಲೆಟ್‌ಗಳು ಆರಂಭವಾದವು. 5,000 ಕ್ಕೂ ಹೆಚ್ಚು ಔಟ್‌ಲೆಟ್‌ಗಳಲ್ಲಿ ವಂಡರ್‌ಶೆಫ್ ಬ್ರ್ಯಾಂಡ್‌ಗಳು ತಲೆ  ಎತ್ತಿದವು. ಹೀಗೆ ಬೆಳೆಯುತ್ತ ಹೋದ ವಂಡರ್‌ಶೆಫ್ 2017 ರ ಹೊತ್ತಿಗೆ 225 ಕೋಟಿರು.ದಷ್ಟು ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈಗ ವಂಡರ್‌ಶೆಫ್ 400 ಕೋಟಿ ರು.ಗಳಿಗೂ ಅಧಿಕ ಬೆಲೆಬಾಳುತ್ತದೆ.

ಮತ್ತೊಂದು ಬೆಳವಣಿಗೆ

2011 ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಡಿಸ್ಕವರಿ ಚಾನೆಲ್ ‘ಫುಡ್ ಫುಡ್’ನ ಬಹುತೇಕ ಸ್ಟೇಕ್‌ಗಳನ್ನು ಖರೀದಿಸಿತು. ಸಂಜೀವ್ ಕಪೂರ್  ಜನಪ್ರಿಯತೆಯಿಂದ ಅವರಿಗೆ ಹತ್ತಾರು ಆಹಾರ ಪದಾರ್ಥಗಳ ಬ್ರ್ಯಾಂಡ್ ಅಂಬಾಸಿಡರ್ ಆಗುವ ಯೋಗವೂ ಲಭಿಸಿತು. ಈಗ ಇವರ ಅಡುಗೆಯ ಘಮ ವಿಶ್ವಾದ್ಯಂತ ಹಬ್ಬಿದೆ. ಸಾವಿರ ಕೋಟಿ ತಂದಿತ್ತಿದೆ. ಅಂದು ಅಪ್ಪನೆದುರು ತಲೆ ತಗ್ಗಿಸಿ ನಿಂತಿದ್ದ ಹುಡುಗ ಲಕ್ಷಾಂತರ ಪ್ರೇಕ್ಷಕರೆದು ಆತ್ಮವಿಶ್ವಾಸದಿಂದ ಮುಗುಳ್ನಗುತ್ತಿದ್ದಾರೆ.  

Follow Us:
Download App:
  • android
  • ios