Asianet Suvarna News Asianet Suvarna News

ಜುಕರ್ ಬರ್ಗ್ ಫೇಸ್’ಬುಕ್ ಅಕೌಂಟೇ ಫೇಕ್ ಅಂತೇ..!

ಕನ್ನಡ ಪ್ರಭ ಕಾಲ್ಪನಿಕ ಸಂದರ್ಶನ

Fake interview In Kannada Prabha

ಕನ್ನಡ ಪ್ರಭ ಕಾಲ್ಪನಿಕ ಸಂದರ್ಶನ

 

? ಬಕ್ಕಮಾಸ್ತಿ: ನೀವೇನೋ ಡೇಟಾ ಕದೀತೀರಂತಲ್ಲ ಸಾರ್?

ಜುಕರ್‌ಬರ್ಗ್: ಯಾವೂರ್ ಗುರು ನಿಂದು? ಕದಿಯೋದಲ್ಲ ಅದು,

ಸ್ಟೋರ್ ಮಾಡೋದು. ಜನ ಅವರ ಮಾಹಿತೀನಾ ಫೇಸ್‌ಬುಕ್‌ನಲ್ಲಿ

ಹಾಕ್ತಾರೆ. ನಾವು ಅದನ್ನೆಲ್ಲ ಒಂದ್ಕಡೆ ಗುಡ್ಡೆ ಹಾಕಿಟ್ಟಿರ್ತೀವಿ. ಕಸಾನೆಲ್ಲ

ಎಲ್ಲಾದ್ರೂ ಒಂದ್ಕಡೆ ಸ್ಟೋರ್ ಮಾಡ್ಲೇಬೇಕಲ್ವಾ?

 

? ಬಕ್ಕಮಾಸ್ತಿ: ಮತ್ತೆ ಅದನ್ನೇ ಮಾರಾಟ ಮಾಡಿ ದುಡ್ಡು

ಮಾಡ್ಕೋತೀರಂತೆ?

ಜುಕರ್‌ಬರ್ಗ್: ಯಾವನ್ ಗುರು ನಿಂಗೆ ಗಣಿತ ಕಲಿಸಿದ್ದು? ಮಾರಾಟ

ಮಾಡೋದಲ್ಲ ಅದು, ಶೇರ್ ಮಾಡೋದು. ಬೇರೆ ಕಂಪನಿಯವರು

ಯಾರಾದ್ರೂ ಕೇಳಿದ್ರೆ ಅವರ ಜೊತೆ ಶೇರ್ ಮಾಡ್ತೀವಿ ಅಷ್ಟೆ.

 

? ಬಕ್ಕಮಾಸ್ತಿ: ಓಹ್ ಗೊತ್ತಾಯ್ತು. ನಮ್ಮೂರ್ ಕಿರಾಣಿ

ಅಂಗಡೀಲಿ ೩೫ ರುಪಾಯಿ ಕೊಟ್ಟರೆ ಶೆಟ್ರು ಒಂದು ಕೇಜಿ

ಗೋಧಿಹಿಟ್ಟು ಶೇರ್ ಮಾಡ್ತಾರಲ್ಲ, ಹಂಗೆ.

ಜುಕರ್‌ಬರ್ಗ್: ಎಕ್ಸಾಕ್ಟ್ಲಿ. ಸೋ ನೈಸ್ ಆಫ್ ಯು!

 

? ಬಕ್ಕಮಾಸ್ತಿ: ಆದರೂ ನಮಗೆ ಗೊತ್ತಿಲ್ದೆ ಹಿಂಗೆ ನಮ್ಮ ಡೇಟಾ

ಶೇರ್ ಮಾಡೋದು ತಪ್ಪಲ್ವಾ?

ಜುಕರ್‌ಬರ್ಗ್: ನಂದೂ ಜೀವನ ನಡೀಬೇಕಲ್ಲ ಗುರು. ನಂಗೂ ಹೆಂಡ್ತಿ,

ಮಕ್ಕಳು ಇದ್ದಾರೆ. ಹೆಂಡ್ತಿ ಚೀನಾದವಳು ಬೇರೆ. ಬರೀ ಜಗಳ ಮಾಡ್ತಾಳೆ.

ಅವಳನ್ನ ಚೆನ್ನಾಗಿ ನೋಡ್ಕೋಬೇಕಲ್ವಾ. ಅಷ್ಟೋ ಇಷ್ಟೋ ದುಡ್ಡು

ಸಂಪಾದನೆ ಮಾಡೋಕೆ ಇದೆಲ್ಲ ಮಾಡ್ತೀನಿ.

 

? ಬಕ್ಕಮಾಸ್ತಿ: ಅದು ನಿಜ. ನಿಮ್ಮ ಆಸ್ತಿ ಬರೀ 3.5 ಲಕ್ಷ ಕೋಟಿ

ರುಪಾಯಿ ಅಂತ ಫೋರ್ಬ್ಸ್‌ನವರು ಹೇಳ್ತಿದ್ರು. ಜೀವನಕ್ಕೆ

ಸಾಕಾಗುತ್ತಾ?

ಜುಕರ್‌ಬರ್ಗ್: ಸ್ವಲ್ಪ ಕಷ್ಟ. ಅಮೆರಿಕ ದುಬಾರಿ ಅಲ್ವಾ? ಈ ಟ್ರಂಪ್

ಬೇರೆ ಏನೇನೋ ಹೇಳಿ ಆಗಾಗ ಹೆದರಿಕೆ ಹುಟ್ಟಿಸ್ತಿರ್ತಾರೆ. ಹಾಗಾಗಿ

ಕಷ್ಟಕಾಲಕ್ಕೆ ಅಂತ ಸ್ವಲ್ಪನಾದ್ರೂ ಇಟ್ಟಿರಬೇಕಲ್ಲ. ಕಷ್ಟವೋ ಸುಖವೋ,

ಜೀವನ ನಡೀತಿದೆ ಬಿಡಿ.

 

? ಬಕ್ಕಮಾಸ್ತಿ: ಫೇಸ್‌ಬುಕ್ ಸೇಫಲ್ಲ ಅಂತ

ದೊಡ್ಡದೊಡ್ಡೋರೆಲ್ಲ ಇತ್ತೀಚೆಗೆ ಅಕೌಂಟ್ ಡಿಲೀಟ್

ಮಾಡ್ತಾ ಇದ್ದಾರಲ್ಲ, ನಿಮಗೆ ಲಾಸ್ ಆಗಲ್ವಾ?

ಜುಕರ್‌ಬರ್ಗ್: ಮಾಡಲಿ ಬಿಡ್ರೀ. ಅವರು ಅಕೌಂಟ್ ಡಿಲೀಟ್

ಮಾಡಿದ್ರೂ ಅವರ ಡೇಟಾ ನಮ್ಮತ್ರ ಮೊದಲೇ ಸ್ಟೋರ್ ಆಗಿರುತ್ತೆ.

ಅದನ್ನ ಅವರು ಡಿಲೀಟ್ ಮಾಡೋಕಾಗಲ್ಲ. ಇದು ಕರ್ಮ ಇದ್ದಂಗೆ.

 

? ಬಕ್ಕಮಾಸ್ತಿ: ಫೇಸ್‌ಬುಕ್ ಸೃಷ್ಟಿ ಮಾಡಿ ಜನರನ್ನೆಲ್ಲ

ಸೋಮಾರಿ ಮಾಡಿದ ಕುಖ್ಯಾತಿ ನಿಮಗಿದೆ. ಈ ಪಾಪಕ್ಕೆ

ನೀವು ನರಕಕ್ಕೆ ಹೋದ್ರೆ ಏನ್ಮಾಡ್ತೀರಿ?

ಜುಕರ್‌ಬರ್ಗ್: ಅಲ್ಲಿ ಫೇಕ್‌ಬುಕ್ ಅಂತ ಒಂದು ಸೋಷಿಯಲ್

ಮೀಡಿಯಾ ಸೃಷ್ಟಿ ಮಾಡ್ತೀನಿ. ಅದಕ್ಕೆ ಚಿತ್ರಗುಪ್ತನ ಬಳಿ ಇರೋ ನಮ್ಮ

ಪಾಪ ಪುಣ್ಯಗಳ ರೆಕಾರ್ಡ್ಸ್ ಬುಕ್‌ನ ಲಿಂಕ್ ಮಾಡ್ತೀನಿ. ಆಗ ಯಮ

ಮತ್ತು ಚಿತ್ರಗುಪ್ತ ಇಬ್ಬರೂ ಫೇಕ್‌ಬುಕ್‌ನಲ್ಲಿ ಅಕೌಂಟ್ ಓಪನ್

ಮಾಡ್ತಾರೆ. ಒಂದ್ಸಲ ಅವರು ಫೇಕ್‌ಬುಕ್‌ಗೆ ಬಂದ ಮೇಲೆ ಮುಗೀತು.

ಆಮೇಲೆ ಅವರನ್ನೇ ನಂಗೆ ಬೇಕಾದಂತೆ ಆಡಿಸ್ತೀನಿ.. ಹೆಂಗೆ ಐಡಿಯಾ!

 

? ಬಕ್ಕಮಾಸ್ತಿ: ಆಗ ಭೂಲೋಕದಲ್ಲಿರುವ ಫೇಸ್‌ಬುಕ್ ಕತೆ

ಏನು?

ಜುಕರ್‌ಬರ್ಗ್: ಇದು ಆಲ್‌ರೆಡಿ ಫೇಕ್‌ಬುಕ್ಕೇ ಕಣ್ರೀ. ಜನರಿಗೆ

ಡೌಟು ಬರಬಾರದು ಅಂತ ಫೇಸ್‌ಬುಕ್ ಅಂತ ಹೆಸರಿಟ್ಟಿದ್ದೀನಿ.

ಇದು ನಾನಿಲ್ಲದೇ ಇದ್ದರೂ ಹಿಂಗೇ ನಡಕೊಂಡು ಹೋಗುತ್ತೆ.

ಕೆಲಸವಿಲ್ಲದ ಜನ ಭೂಲೋಕದಲ್ಲಿ ಎಲ್ಲಿಯವರೆಗೆ ಇರ್ತಾರೋ

ಅಲ್ಲಿಯವರೆಗೆ ಫೇಸ್‌ಬುಕ್‌ನಿಂದ ಒಂದು ಲೈಕ್ ಕೂಡ

ಕಿತ್ಕೊಳ್ಳೋಕಾಗಲ್ಲ.

 

? ಬಕ್ಕಮಾಸ್ತಿ: ಮತ್ತೆ ಡೇಟಾ ವಿಷಯಕ್ಕೆ ಬರೋಣ. ಫೇಸ್

ಬುಕ್ ಬರೋದಕ್ಕಿಂತ ಮುಂಚೆ ನಮಗೆಲ್ಲ ಹಿಂಗೆ ನಮ್ಮದೂ

ಅಂತ ಒಂದಷ್ಟು ಡೇಟಾ ಇರುತ್ತೆ, ಅದಕ್ಕೆ ಒಳ್ಳೆ ರೇಟ್ ಇದೆ,

ಅದನ್ನ ಯಾರಾದ್ರೂ ಕಳವು ಮಾಡ್ಬಹುದು ಅಂತೆಲ್ಲ ಗೊತ್ತೇ

ಇರಲಿಲ್ವಲ್ಲ ಸಾರ್. ನಿಮಗೆ ಹೆಂಗೆ ಗೊತ್ತಾಯ್ತು?

ಜುಕರ್‌ಬರ್ಗ್: ಇನ್ನೋವೇಶನ್ ಅಂದ್ರೆ ಇದೇ ಗುರು. ಜನಕ್ಕೆ

ಯಾವುದು ಅಗತ್ಯ ಇಲ್ವೋ ಅದನ್ನ ಸುಂದರವಾಗಿ ತೋರಿಸೋದು.

ಅದನ್ನೇ ಫ್ರೀಯಾಗಿ ಕೊಡೋದು. ಅವರು ಅದಕ್ಕೆ ಅಡಿಕ್ಟ್

ಆಗೋಹಾಗೆ ಮಾಡೋದು. ಆಮೇಲೆ ಅವರಿಗೆ ಗೊತ್ತಿಲ್ಲದಹಾಗೆ

ಅವರಿಂದ ಕಿತ್ಕೊಳೋದು. ಇದು ಆಫ್ ದಿ ರೆಕಾರ್ಡ್. ಬರೀಬೇಡಿ

ಮತ್ತೆ.

 

? ಬಕ್ಕಮಾಸ್ತಿ: ಅಂದ್ರೆ ನೀವು ಜನಕ್ಕೆ ಮೋಸ ಮಾಡ್ತಿದ್ದೀರಾ?

ಜುಕರ್‌ಬರ್ಗ್: ಛೆ ಛೆ ಎಲ್ಲಾದ್ರೂ ಉಂಟೇ. ಜನಕ್ಕೆ ಮೋಸ ಮಾಡಿ

ಯಾರಾದ್ರೂ ಉದ್ಧಾರ ಆಗ್ತಾರಾ? ನಂಗೆ ಕಾಲೇಜಲ್ಲಿ ಕೊಟ್ಟಿರೋ

ಕ್ಯಾರೆಕ್ಟರ್ ಸರ್ಟಿಫಿಕೆಟ್‌ನಲ್ಲಿ ವೆರಿ ಗುಡ್ ಅಂತ ಬರೆದಿದ್ದಾರೆ ಗೊತ್ತಾ?

ಮೋಸ ಎಲ್ಲಾ ಮಾಡಲ್ಲ. ಜನ ಫೇಸ್‌ಬುಕ್ ಬಳಕೆ ಮಾಡೋದಕ್ಕೆ

ನಾನೇನಾದ್ರೂ ಚಾರ್ಜ್ ಮಾಡ್ತಿದ್ದೀನಾ? ಫ್ರೀ ಸರ್ವೀಸ್ ಅದು.

ಸಮಾಜ ಸೇವೆ.

 

? ಬಕ್ಕಮಾಸ್ತಿ: ವ್ಹಾ ವ್ಹಾ. ಸಮಾಜ ಸೇವಕ ಮಾರ್ಕ್ ಜುಕರ್

ಬರ್ಗ್ ಅಂತಲೇ ಈ ಸಂದರ್ಶನಕ್ಕೆ ಹೆಡ್‌ಲೈನ್ ಹಾಕೋಣ.

ಅದ್ಸರಿ, ಈ ಫೇಸ್‌ಬುಕ್‌ನಲ್ಲಿ ನಿಮ್ಮದೂ ಅಕೌಂಟು, ಪೇಜು

ಎಲ್ಲಾ ಇದೆಯಲ್ಲ. ಅದರಲ್ಲಿರೋ ಖಾಸಗಿ ಮಾಹಿತಿಯೂ

ನೀವು ಡೇಟಾ ಶೇರ್ ಮಾಡಿದಾಗ ಬೇರೆಯವರ ಕೈಗೆ

ಹೋಗಲ್ವಾ?

ಜುಕರ್‌ಬರ್ಗ್: ಫೇಕ್ ಅಕೌಂಟ್ ಕಣ್ರೀ ಅದು. ನಾನು ಅದರಲ್ಲಿ

ಜೆನ್ಯೂನ್ ಆಗಿ ಏನೂ ಮಾಡಲ್ಲ. ತಲೆ ಇರೋವ್ರ ಯಾರಾದ್ರೂ ಫೇಸ್

ಬುಕ್‌ನಲ್ಲಿ ಒರಿಜಿನಲ್ ಪ್ರೊಫೈಲ್ ಇಟ್ಕೋತಾರಾ? ನೀವೊಳ್ಳೆ!

ಟೈಮಾಯ್ತು, ಹೊರಡಿ ಸಾಕು.

Follow Us:
Download App:
  • android
  • ios