ಮೊಟ್ಟೆಯಲ್ಲಿ ಪ್ರೊಟೀನ್ ಇದೆ. ಬೆಳೆಯುವ ಮಕ್ಕಳಿಗೆ ದಿನಕ್ಕೊಂದು ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಗರ್ಭಿಣಿಯರಿಗೆ, ಬಾಣಂತಿಯರಿಗೆ ಮೊಟ್ಟೆ ತಿನ್ನುವುದು ಬಹಳ ಒಳ್ಳೆಯದು ಹೀಗಾಘಿ ಮೊಟ್ಟೆ ಸೇವಿಸಿ ಎಂದೆಲ್ಲಾ ವೈದ್ಯರು ಹೇಳುತ್ತಾರೆ. ಕೋಳಿ ಮೊಟ್ಟೆಯಲ್ಲಿ ಈ ಎಲ್ಲ ಪೌಷ್ಠಿಕಾಂಶಗಳಿರುವುದೂ ಸುಳ್ಳಲ್ಲ. ಆದರೆ ಇದನ್ನು ಮೀರಿಸಿದ ಸತ್ಯವೊಂದು ಮೊಟ್ಟೆ ಪ್ರಿಯರನ್ನು ಬೆಚ್ಚಿ ಬೀಳಿಸುವುದರಲ್ಲಿ ಅನುಮಾನವಿಲ್ಲ. ಮೊಟ್ಟೆ ಪ್ರಿಯರೇ, ಎಚ್ಚರ! ಆಮ್ಲೆಟ್, ಬೇಯಿಸಿದ ಮೊಟ್ಟೆ ಗುಳುಂ ಮಾಡುವ ಮುನ್ನ ಈ ಸ್ಟೋರಿ ತಪ್ಪದೇ ಓದಿ.

ಮಾರುಕಟ್ಟೆಗೆ ದಾಳಿಯಿಟ್ಟಿವೆ ಚೀನಾದ ನಕಲಿ ಮೊಟ್ಟೆ..!: ಇದು ನಕಲಿ ಮೊಟ್ಟೆಗಳ ಅಸಲಿ ಕಥೆ..!

ಇಂಥಾದ್ದೊಂದು ಸುದ್ದಿ ಕಳೆದ ವರ್ಷದಿಂದ ಹರಿದಾಡ್ತಾನೇ ಇತ್ತು. ಆದರೆ, ಇದೀಗ ಮಾರುಕಟ್ಟೆಗೆ ಬಂದೇ ಬಿಟ್ಟಿದೆ. ಎಲ್ಲಿಂದ ಬಂತು ಅನ್ನೋದು ಸೀಕ್ರೆಟ್ ಏನೂ ಅಲ್ಲ. ಈ ನಕಲಿ ಮೊಟ್ಟೆಗಳು ಬಂದಿರೋದು ಚೀನಾದಿಂದ. ಸದ್ಯ್ಕಕ್ಕೆ ಈ ನಕಲಿ ಮೊಟ್ಟೆಗಳು ಕೇರಳದಲ್ಲಿ, ಆಂಧ್ರಪ್ರದೇಶದಲ್ಲಿ ಮಾರುಕಟ್ಟೆಯಲ್ಲಿ ಸಿಗ್ತಾ ಇವೆ. ಇವನ್ನ ಚೈನೀಸ್ ಮೊಟ್ಟೆ ಅಂತಾನೇ ಕರೀತಾರೆ. ಮೊನ್ನೆ ಮೊನ್ನೆಯಷ್ಟೇ ಕೇರಳದ ಕಣ್ಣೂರು ಜಿಲ್ಲೆಯ ಕರಿವೆಳ್ಳೂರು ಗ್ರಾಮದ ಕುತ್ತೂರು ರಾಮಚಂದ್ರನ್ ಅನ್ನೋ ವ್ಯಕ್ತಿ ಅಂಗಡಿಯಲ್ಲಿ 15 ಮೊಟ್ಟೆ ಖರೀದಿಸಿದ್ದರು. ಹದಿನೈದಕ್ಕೆ ಹದಿನೈದು ಮೊಟ್ಟೆಗಳೂ ಚೈನೀಸ್ ಮೊಟ್ಟೆಗಳು ಅನ್ನೋ ಸತ್ಯ ಆಮೇಲೆ ಗೊತ್ತಾಗಿತ್ತು.

ಅಂದಹಾಗೆ ಈ ಚೈನೀಸ್ ಮೊಟ್ಟೆಗಳ ಬಗ್ಗೆ ವ್ಯಾಪಾರಿಗಳಿಗೆ ಗೊತ್ತಿಲ್ಲ. ಈ ಮೊಟ್ಟೆಗಳು ತಯಾರಾಗೋದು ಚೀನಾದಲ್ಲಿ. ಭಾರತದಲ್ಲಿ ತಮಿಳುನಾಡು, ಆಂಧ್ರಪ್ರದೇಶದಲ್ಲೂ ಇದೆ ಎಂಬ ಮಾಹಿತಿ ಇದೆಯಾದ್ರೂ ಅಧಿಕೃತ ದಾಖಲೆಯಿಲ್ಲ. ಆದರೆ, ಈ ಚೈನೀಸ್ ಮೊಟ್ಟೆಗಳು ಭಾರತಕ್ಕೆ ಬಂದಿರೋದಂತೂ ಸತ್ಯ.

ನಕಲಿ ಮೊಟ್ಟೆಯಲ್ಲಿ ಏನಿರುತ್ತೆ..?

ಲೋಳೆ ರಸ ತಯಾರಿಸಲು  ಸ್ಟಾರ್ಚ್, ರೆಸಿನ್, ಸೋಡಿಯಂ ಅಲಗ್ನಿಗೇಟ್

ಹಳದಿ ಭಾಗ ತಯಾರಿಸಲು ಆರ್ಗನಿಕ್ ಆಸಿಡ್, ಪೊಟಾಷಿಯಂ ಆಲಂ, ಜೆಲಾಟಿನ್, ಕ್ಯಾಲ್ಸಿಯಂ ಕ್ಲೋರೈಡ್, ಬೆನ್ಸೋನಿಕ್ ಌಸಿಡ್

ಮೊಟ್ಟೆಯ ಹೊರಭಾಗಕ್ಕೆ ಕ್ಯಾಲ್ಸಿಯಂ ಕಾರ್ಬೊನೇಟ್, ಜಿಪ್ಸಂ

ಈ ನಕಲಿ ಮೊಟ್ಟೆಯಲ್ಲಿ ಯಾವೆಲ್ಲ ಕೆಮಿಕಲ್ ಇರುತ್ತೆ ಗೊತ್ತಾ..?

ಈ ನಕಲಿ ಮೊಟ್ಟೆಗಳು ರೆಡಿಯಾಗೋಕೆ ಕೋಳಿಗಳೇ ಬೇಕಿಲ್ಲ. ಕೋಳಿಗಳಿಗೆ ಫೀಡ್ ಹಾಕಬೇಕಿಲ್ಲ. ಈ ಮೊಟ್ಟೆಗಳು ಕೋಳಿಗಳ ಹೊಟ್ಟೆಯಿಂದ ಬರುವುದೇ ಇಲ್ಲ. ಈ ಮೊಟ್ಟೆಗಳು ಬರುವುದು ಕಾರ್ಖಾನೆಗಳಿಂದ

ಈ ನಕಲಿ ಮೊಟ್ಟೆ ರೆಡಿ ಮಾಡಿದ ಮೇಲೆ, ಅದು ಅಸಲಿಯಂತೆ ಕಾಣಲು ಅದರ ಮೇಲೆ ಅಸಲಿ ಮೊಟ್ಟೆಗಳ ತ್ಯಾಜ್ಯ, ಕಸ ಇರುತ್ತದೆ. ಈ ಮೊಟ್ಟೆಗಳನ್ನು ಅಚ್ಚುಗಳನ್ನು ಬಳಸಿ ತಯಾರಿಸುತ್ತಾರೆ. ಒಬ್ಬ ವ್ಯಕ್ತಿ ಒಂದು ದಿನಕ್ಕೆ ಒಂದೂವರೆ ಸಾವಿರ ಮೊಟ್ಟೆಗಳನ್ನು ಉತ್ಪಾದಿಸಬಹುದು. ಚೀನಾದಲ್ಲಿ ಈಗ ಇದೇ ದೊಡ್ಡ ಬಿಸಿನೆಸ್ ಆಗಿದೆ.

ನಕಲಿ ಮೊಟ್ಟೆ ಗುರುತಿಸೋದು ಹೇಗೆ..?

ಬಣ್ಣ ನೋಡಿ. ವ್ಯತ್ಯಾಸ ಗೊತ್ತಾಗುತ್ತದೆ: ಅಸಲಿ ಮೊಟ್ಟೆ ಮಾಸಿದ ಬಣ್ಣದಲ್ಲಿದ್ದರೆ, ನಕಲಿ ಮೊಟ್ಟೆ ಸ್ವಲ್ಪ ಹೊಳೆಯುತ್ತಿರುತ್ತದೆ. ಗಟ್ಟಿಯಾಗಿದ್ದರೆ, ಅದು ಅಸಲಿ ಅಲ್ಲ..!: ಅಸಲಿ ಮೊಟ್ಟೆ ಅಷ್ಟು ಗಟ್ಟಿ ಇರುವುದಿಲ್ಲ. ನಕಲಿ ಮೊಟ್ಟೆ ಸ್ವಲ್ಪ ಗಟ್ಟಿಯಿರುತ್ತದೆ. ಅದು ಅನುಭವಿಗಳಿಗಷ್ಟೇ ಗೊತ್ತಾಗುತ್ತದೆ.

ಅಲುಗಾಡಿಸಿ ನೋಡಿ, ಶಬ್ಧ ಕೇಳಿ: ನಕಲಿ ಮೊಟ್ಟೆಯನ್ನು ಅಲುಗಾಡಿಸಿ ನೋಡಿದರೆ, ನೀರು ಕುಲುಕಿದ ಸಣ್ಣ ಶಬ್ಧ ಕೇಳುತ್ತದೆ.

ವಾಸನೆ ನೋಡಿ, ವಾಸನೆ ಇಲ್ಲ ಅಂದ್ರೆ ನಕಲಿ..!: ಅಸಲಿ ಮೊಟ್ಟೆಗೆ ಹಸಿ ಮಾಂಸದ ವಾಸನೆ ಇರುತ್ತದೆ. ನಕಲಿ ಮೊಟ್ಟೆಗೆ ಅದು ಇರಲ್ಲ. ಅವರು ಏನೇ ತ್ಯಾಜ್ಯ ಅಂಟಿಸಿದರೂ ಅಷ್ಟೆ.

ತಟ್ಟಿ ನೋಡಿ, ಸೌಂಡ್​ ವಿಭಿನ್ನವಾಗಿರುತ್ತದೆ: ಆದರೆ, ಇದು ಮೊಟ್ಟೆಯ ಬಗ್ಗೆ ಪೂರ್ಣ ಗೊತ್ತಿರುವವರಿಗಷ್ಟೇ ಗೊತ್ತಾಗುತ್ತದೆ. ಅಸಲಿ ಮೊಟ್ಟೆಗೂ, ನಕಲಿ ಮೊಟ್ಟೆಗೂ ಇದರಲ್ಲಿ ಕಾಣಿಸುವುದು ಸಣ್ಯ ವ್ಯತ್ಯಾಸ ಮಾತ್ರ.

ಒಡೆದು ನೋಡಿ, ಲೋಳೆ ಮತ್ತು ಹಳದಿ ಮಿಕ್ಸ್​ ಆಗುತ್ತದೆ: ಅಸಲಿ ಮೊಟ್ಟೆ ಒಡೆದಾಗ ಲೋಳೆ ಮತ್ತು ಹಳದಿ ತಕ್ಷಣ ಮಿಕ್ಸ್ ಆಗುವುದಿಲ್ಲ. ಆದರೆ..ನಕಲಿ ಮೊಟ್ಟೆ ಒಡೆದಾಗ ಲೋಳೆ ಮತ್ತು ಹಳದಿ ತಕ್ಷಣ ಮಿಕ್ಸ್ ಆಗುತ್ತೆ. ಕಾರಣ, ಎರಡಕ್ಕೂ ಒಂದೇ ಕೆಮಿಕಲ್ ಬಳಸಿರ್ತಾರೆ.

ಈ ಎಲ್ಲಾ ಸಲಹೆಗಳನ್ನು ಪಾಲಿಸಿದರೆ, ನಕಲಿ ಮೊಟ್ಟೆ ತಿನ್ನುವ ಅಪಾಯದಿಂದ ಪಾರಾಗಬಹುದು.