ಮುಖಕ್ಕೆ ಶೇಪ್ ಮತ್ತು ಲುಕ್ ನೀಡುವ ಐಬ್ರೊ ಸರಿ ಇಲ್ಲದಿದ್ದರೆ ಯಾರಿಗೆ ತಾನೆ ಇಷ್ಟ ಹೇಳಿ? ಕೆಲವರಿಗೆ ದೊಡ್ಡದು, ಕೆಲವೊಬ್ಬರಿಗೆ ಸಣ್ಣದಾಗಿ, ಮತ್ತೊಬ್ಬರಿಗೆ ಕೂದಲೇ ಇಲ್ಲದ ಹುಬ್ಬು...ಹೀಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಮಸ್ಯೆ. ಅಯ್ಯೋ ಇದಕ್ಯಾಕೆ ಬೇಜಾರು ಮಾಡಿ ಕೊಳ್ತಿರಿ? ಮಾರುಕಟ್ಟೆಯಲ್ಲಿ ಹೊಸ ಟೆಕ್ನಾಲಜಿ ಬಂದಿದೆ. ಇದರಿಂದ ಹುಬ್ಬಿಲ್ಲದಿದ್ದರೂ ಕೂದಲು ಕಾಣುವಂತೆ ಮಾಡಿ, ಮುಖಕ್ಕೊಂದು ರೂಪ ಕೊಡಲಾಗುತ್ತದೆ.

ಇದನ್ನು ಮೈಕ್ರೋ ಬ್ಲೇಡಿಂಗ್ ಎನ್ನುತ್ತಾರೆ. ಐಬ್ರೋ ವಕ್ರ-ವಕ್ರವಾಗಿ ಪುಕ್ಕದಂತಿದ್ದರೆ ಅಥವಾ ಕೂದಲೇ ಇಲ್ಲದ ಜಾಗದಲ್ಲಿ ಈ ತಂತ್ರ ಅನುಸರಿಸಿದರೆ, ಸರಿಯಾದ ರೀತಿಯಲ್ಲಿ ನಿಲ್ಲುವಂತೆ ಮಾಡಬಹುದು. ಈ ಕಾಸ್ಮೆಟಿಕ್ ಪಿಗ್ಮೆಂಟ್ ಆಗಿದ್ದು, ಯಾವುದೇ ಅಡ್ಡ ಪರಿಣಾಮವೂ ಬೀರುವುದಿಲ್ಲ. ಒಮ್ಮೆ ಮಾಡಿಸಿಕೊಂಡರೆ ಒಂದೂವರೆ ವರ್ಷ ಉಳಿಸಿಕೊಳ್ಳಬಹುದೆನ್ನುತ್ತಾರೆ, ಚರ್ಮ ರೋಗ ತಜ್ಞರು.

ಹುಬ್ಬಿನ ಪ್ರತಿಯೊಂದೂ ಕೂದಲಿಗೆ ಪಿಗ್ಮೆಂಟ್ ಹಾಕುವುದರಿಂದ ಇದನ್ನು ಮಾಡಲು ಸುಮಾರು 2 ಗಂಟೆ ಬೇಕು. ಮುಖದ ಚರ್ಮ ಮತ್ತು ಕೂದಲಿನ ಬಣ್ಣದಂತೆಯೇ ಪಿಗ್ಮೆಂಟ್ ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಸೂಪರ್ ಫೈನ್ ಪೆನ್ ಬಳಸಿ, 12 ರಿಂದ 15 ಮೈಕ್ರೋ ಬ್ಲೇಡ್‌ಗಳಿಗೆ ಪಿಗ್ಮೆಂಟ್ ಸೇರಿಸಿ, ಹುಬ್ಬಿಗೆ ತಾಗಿಸಿದರೆ ಕೂದಲಂತೆಯೇ ಕಾಣಿಸುತ್ತದೆ.

ಬೇಡವೆಂದರೆ ಚರ್ಮರೋಗ ವೈದ್ಯರ ಸಲಹೆ ಪಡೆದು, ತೆಗಿಸಬಹುದು.