2, 4 ಅಡಿ ಜಾಗದಲ್ಲೂ ಕಟ್ಟಡ ಕಟ್ಟೋಕೆ ಸಾಧ್ಯ: ಈ ಇಂಜಿನಿಯರ್‌ ಕೈಚಳಕಕ್ಕೆ ಬೆರಗಾದ್ರು ನೆಟ್ಟಿಗರು!

ಹೇಗಾದರೂ ಸ್ವಂತ ಸೂರು ಬೇಕು ಎಂದು ತೀವ್ರವಾಗಿ ಕನಸು ಕಾಣುವವರೂ ಸಹ ಕೇವಲ 2,4 ಅಡಿಗಳ ಜಾಗದಲ್ಲಿ ಕಟ್ಟಡ ನಿರ್ಮಿಸುವ ಧೈರ್ಯ ಮಾಡುವುದಿಲ್ಲ. ಆದರೆ, ಅಂತಹ ಕಟ್ಟಡಗಳೂ ಇವೆ. ಇದರ ವೀಡಿಯೋ ಇದೀಗ ವೈರಲ್‌ ಆಗಿದೆ. 

Engineer builds building in 2 and 4 foot space video goes viral

ಹೇಗಾದರೂ ಒಂದು ಸ್ವಂತ ಸೂರು ಕಟ್ಟಿಕೊಳ್ಳಬೇಕು ಎನ್ನುವುದು ಎಲ್ಲರ ಕನಸು. ಅದರ ವಿಸ್ತಾರ, ವಿನ್ಯಾಸಗಳು ಅವರವರ ಹಣಕಾಸಿನ ಸ್ಥಿತಿಗತಿಗೆ ತಕ್ಕಂತೆ ಇರುತ್ತವೆ. ಬಡವರು ಕೆಲವೇ ಅಡಿಗಳ ಜಾಗದಲ್ಲಿ ಮನೆ ಕಟ್ಟಿದರೆ, ಉಳ್ಳವರು ನೂರಾರು ಚದರಡಿಗಳ ವಿಸ್ತಾರದಲ್ಲಿ ಭರ್ಜರಿ ಭವನ ನಿರ್ಮಿಸಿಕೊಳ್ಳಬಹುದು. ಒಟ್ಟಾರೆ, ಎಲ್ಲರಿಗೂ ಬೇಕಾಗಿರುವುದು ಸ್ವಂತದ್ದೊಂದು ಸೂರು. ಆದರೆ, ನಗರ ಪ್ರದೇಶಗಳಲ್ಲಿ ಸ್ಥಳದ್ದೇ ದೊಡ್ಡ ಸಮಸ್ಯೆ. ಕೇವಲ 30-40 ಚದರಡಿ ಜಾಗಕ್ಕೇ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಶಹರಗಳಲ್ಲಿ ಕೇಂದ್ರ ಸ್ಥಾನದಿಂದ 20-30 ಮೈಲಿ ದೂರದಲ್ಲೂ ಕನಿಷ್ಠ 50 ಲಕ್ಷಕ್ಕೂ ಮೇಲ್ಪಟ್ಟು ದರವಿರುತ್ತದೆ. ಇದು ಕೇವಲ ಜಾಗಕ್ಕೆ. ಅದರಲ್ಲಿ ಮನೆ ಕಟ್ಟಿಕೊಳ್ಳಬೇಕು ಎಂದರೆ, ಇನ್ನಷ್ಟು ಖರ್ಚು. ಇಷ್ಟೆಲ್ಲ ದುಡ್ಡು ಹೊಂದಿಸಲು ಬಹಳಷ್ಟು ಜನರಿಗೆ ಸಾಧ್ಯವಿಲ್ಲದ ಕಾರಣ ಬಾಡಿಗೆ ಮನೆಯಲ್ಲೇ ಅನಿವಾರ್ಯವಾಗಿ ಇರುತ್ತಾರೆ. ಒಂದೊಮ್ಮೆ, ತಮ್ಮ ಸ್ವಂತದ್ದೆಂದು ಕೆಲವೇ ಅಡಿಗಳ ಜಾಗವಿದ್ದರೂ ಅಲ್ಲೇ ಮನೆ ಕಟ್ಟಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ, ಅಂತರ್ಜಾಲದಲ್ಲಿ ವೈರಲ್‌ ಆಗಿರುವ ಎರಡು ಮನೆಗಳಿವೆ. ಇವುಗಳ ವಿನ್ಯಾಸ ಈಗ ಭಾರೀ ಚರ್ಚೆಯಲ್ಲಿದೆ. ಏಕೆಂದರೆ, ಇವುಗಳನ್ನು ನಿರ್ಮಿಸಿರುವುದು ಕೇವಲ 2 ಮತ್ತು 4 ಅಡಿಗಳ ಜಾಗದಲ್ಲಿ!

ಗಾಬರಿಯಾಗಬೇಡಿ. 2 ಮತ್ತು 4 ಅಡಿಗಳ (Foot) ಜಾಗದಲ್ಲಿ ಮನೆ (Home) ನಿರ್ಮಿಸಲು ಸಾಧ್ಯವೇ ಎನ್ನಬೇಡಿ. ಅದೂ ಸಾಧ್ಯವೆಂದು ಇಂಜಿನಿಯರ್‌ ತೋರಿಸಿಕೊಟ್ಟಿದ್ದಾರೆ. ಈ ಮನೆಯನ್ನು ಕಂಡ ನೆಟ್ಟಿಗರು (Netizens) ಈಗ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇದನ್ನು ನಿರ್ಮಿಸಿದ (Build) ಮಹಾನುಭಾವರು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅತಿ ಕಡಿಮೆ ಜಾಗದಲ್ಲಿ ನಿರ್ಮಾಣವಾದ ಮನೆ ಎನ್ನುವ ಹೆಗ್ಗಳಿಕೆ ಇದಕ್ಕೆ ದಕ್ಕಬಹುದೇನೋ! 

 
 
 
 
 
 
 
 
 
 
 
 
 
 
 

A post shared by Rashid Khan (@rk_khan_facts)


ಈ ವೀಡಿಯೋವನ್ನು (Video) ಆರ್‌ ಕೆ ಖಾನ್‌ ಎನ್ನುವವರು ಪೋಸ್ಟ್‌ ಮಾಡಿದ್ದಾರೆ. ಇವರ ವೀಡಿಯೋದಲ್ಲಿರುವ ಮೊದಲ ಕಟ್ಟಡವನ್ನು (Building) 4 ಅಡಿಗಳಲ್ಲಿ ನಿರ್ಮಿಸಲಾಗಿದೆ. ಎರಡನೇ ಕಟ್ಟಡವನ್ನು 2 ಅಡಿಗಳ ಜಾಗದಲ್ಲಿ ನಿರ್ಮಿಸಲಾಗಿದೆ! 2ನೇ ಬಿಲ್ಡಿಂಗ್‌ ನಲ್ಲಿ ಮೂರು ಅಂತಸ್ತುಗಳೂ ಇವೆ! ಇವುಗಳನ್ನು ನೋಡಿದ ಜನ ಬೆಕ್ಕಸಬೆರಗಾಗುವುದಷ್ಟೇ ಅಲ್ಲ, ಇಂಜಿನಿಯರ್‌ ವಿನ್ಯಾಸಕ್ಕೆ (Design) ತಲೆದೂಗಿದ್ದಾರೆ. ಕೇವಲ 2 ಮತ್ತು 4 ಅಡಿಗಳಿಂದ ಆರಂಭವಾದ ಕಟ್ಟಡ ಒಂದನೇ ಫ್ಲೋರ್‌ (Floor) ನಲ್ಲಿ ಸ್ವಲ್ಪ ವಿಸ್ತಾರಗೊಂಡಿದೆ. ಕೆಳಭಾಗದಲ್ಲಿ ಕೇವಲ ಗೋಡೆಯಿದೆ!

ಹಚ್ಚ ಹಸಿರಿನ ನಡುವೆ ಓಡುವ ವಂದೇ ಭಾರತ್: ಡ್ರೋನ್‌ನಲ್ಲಿ ಸೆರೆಯಾದ ಅದ್ಭುತ ವೀಡಿಯೋ ವೈರಲ್

ಈ ವೈರಲ್‌ ವೀಡಿಯೋದಲ್ಲಿ ಆರ್‌ ಕೆ ಖಾನ್‌ ಈ ಕಟ್ಟಡವನ್ನು ಚಿತ್ರೀಕರಣ ಮಾಡುತ್ತ “ಯಾವ ಇಂಜಿನಿಯರ್‌ (Engineer) ಈ ಮನೆಯನ್ನು ನಿರ್ಮಿಸಿದ್ದಾರೋ ಗೊತ್ತಿಲ್ಲ, ಹೇಗೆ ತಲೆ (Brain) ಖರ್ಚು ಮಾಡಿದ್ದಾರೆ ನೋಡಿ. ಗಲ್ಲಿಯ ಒಳಗೆ ನಾಲ್ಕು ಅಡಿಗಳ ಜಾಗದಲ್ಲಿ ಮೂರು ಮನೆಗಳ ಕಟ್ಟಡವನ್ನು ಕಟ್ಟಿದ್ದಾರೆ. ಇಷ್ಟೇ ಚಿಕ್ಕ ಜಾಗದಲ್ಲಿ ಮೇಲೆ ಹೋಗಲು ಮೆಟ್ಟಿಲುಗಳನ್ನೂ ಮಾಡಿದ್ದಾರೆ, ಅದಕ್ಕೆ ಬಾಗಿಲೂ (Door) ಇದೆʼ ಎಂದು ಹೇಳುತ್ತಾರೆ.

ಕೋಟಿಗೂ ಅಧಿಕ ವೀಕ್ಷಣೆ (Views)
ಹಾಗೆಯೇ ವೀಡಿಯೋದಲ್ಲಿ ಮತ್ತೊಂದು ಕಟ್ಟಡ ಕಂಡುಬರುತ್ತದೆ. ಇದು 2 ಅಡಿಗಳ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ. “ಈ ಕಟ್ಟಡ ನೋಡಿ. ಇದರಲ್ಲಿ ಮೂರು ಮಹಡಿಗಳಿವೆ, ಕೆಲವು ಅಂಗಡಿಗಳೂ ಇವೆ. ಅವುಗಳ ಮೇಲೆ ಎರಡು ಮನೆಗಳನ್ನೂ ಕಟ್ಟಲಾಗಿದೆʼ ಎಂದು ತಿಳಿಸುತ್ತಾರೆ. ಈ ವೀಡಿಯೋ ಈಗ 1.5 ಕೋಟಿಗೂ ಅಧಿಕ ವೀಕ್ಷಣೆಗೆ ಒಳಗಾಗಿದೆ.

YearEnder 2023: ಈ ವರ್ಷ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಐದು ಸುಂದರ ಚಿತ್ರಗಳಿವು!

ಸಾವಿರಾರು ಜನ ಕಾಮೆಂಟ್ಸ್‌ (Comments) ಕೂಡ ಮಾಡಿದ್ದು, ಹಲವರು ಇದರ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅನೇಕರು ಭೂಕಂಪವಾದರೆ (Earthquake) ಕಟ್ಟಡ ಸಂಪೂರ್ಣ ನೆಲಕಚ್ಚುತ್ತದೆ ಎಂದು ಹೇಳಿದ್ದಾರೆ. ಒಬ್ಬರು, ಈ ಇಂಜಿನಿಯರ್‌ ಆನ್‌ ಲೈನ್‌ ಮೂಲಕ ಡಿಗ್ರಿ (Degree) ಪಡೆದುಕೊಂಡಿರಬೇಕು ಎಂದು ಕಾಲೆಳೆದಿದ್ದಾರೆ.  

Latest Videos
Follow Us:
Download App:
  • android
  • ios