ಟ್ಯಾನ್ ಆಗಿದ್ದರೆ ಹೀಗ್ ಮಾಡಿ...
ಸೂರ್ಯನ ಬಿಸಿಲಿಗೆ ತ್ವಚೆ ಕಪ್ಪಾಗೋದು ಕಾಮನ್. ಆದರೆ, ಮನೆಯಲ್ಲಿ ಸಿಗೋ ಮದ್ದಿನಿಂದ ಅವನ್ನು ದೂರ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್.
ಸೂರ್ಯನ ಬಿಸಿಲಿನಿಂದ ಸನ್ ಟ್ಯಾನ್ ಆಗುತ್ತದೆ. ಇದನ್ನು ಫಟಾ ಫಟ್ ಆಗಿ ನಿವಾರಿಸಲು ಇಲ್ಲಿವೆ ಸೂಪರ್ ಟಿಪ್ಸ್. ಇದನ್ನ ಬಳಸಿದರೆ ಕೇವಲ ಹತ್ತು ನಿಮಿಷದಲ್ಲಿ ಸನ್ ಟ್ಯಾನ್ ನಿವಾರಣೆಯಾಗಿ ಸುಂದರವಾದ ತ್ವಚೆ ನಿಮ್ಮದಾಗುತ್ತದೆ.
ಎಳ್ಳು ಮತ್ತು ಆಲಿವ್ ಲೋಷನ್: ಎಳ್ಳೆಣ್ಣೆ ಮತ್ತು ಅದರ ಕಾಲು ಭಾಗದಷ್ಟು ಆಲಿವ್ ಎಣ್ಣೆ ಮತ್ತು ಬಾದಾಮಿ ಎಣ್ಣೆ ಮಿಕ್ಸ್ ಮಾಡಿ ಅದನ್ನು ಮುಖಕ್ಕೆ ಮತ್ತು ಕುತ್ತಿಗೆಗೆ ಹಚ್ಚಬೇಕು. ಇದು ಸ್ಕಿನ್‌ಗೆ ಟಾನಿಕ್‌ನಂತೆ ಕೆಲಸ ಮಾಡುತ್ತದೆ. ಜೊತೆಗೆ ಸ್ಕಿನ್ ಸುಂದರವಾಗುತ್ತದೆ.
ಮುಖದ ಸೌಂದರ್ಯಕ್ಕೆ ಚಾಕೋಲೇಟ್ ಎಂಬ ಮಂತ್ರ!
ರೋಸ್ ವಾಟರ್: 1 ಚಮಚ ಟೊಮೆಟೊ ರಸ ಮತ್ತು 2 ಬಿಂದು ನಿಂಬೆ ರಸದೊಂದಿಗೆ ಒಂದು ಚಮಚ ರೋಸ್ ವಾಟರ್ ಚೆನ್ನಾಗಿ ಮಿಕ್ಸ್ ಮಾಡಿ ದೇಹಕ್ಕೆ ಹಚ್ಚಿ. ಇದರಿಂದ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ.
ಗ್ರೇಪ್ ಸೀಡ್ ಲೋಷನ್: ಅರ್ಧ ಚಮಚ ಬೇಸ್ ಕ್ರೀಮ್ , 1/2 ಕಪ್ ಗ್ರೇಪ್ ಸೀಡ್ ಆಯಿಲ್, ಒಂದು ಚಮಚ ವಿಟಮಿನ್ ಈ ಆಯಿಲ್ ಅನ್ನು ಒಂದು ಬೌಲಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ತುಂಬಾ ದಿನವರೆಗೂ ಇಟ್ಟು ಬಳಸಬಹುದು.
ಪೂಜೆಗೆ ಬಳಸುವ ಕರ್ಪೂರದಿಂದ ಸೌಂದರ್ಯ!
ಮೊಸರು ಮತ್ತು ಸೌತೆ: ಮೊಸರು ಮತ್ತು ಸೌತೆಕಾಯಿ ರಸವನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. ಇದರಿಂದ ಬೇಗನೆ ಸನ್ ಟ್ಯಾನ್ ನಿವಾರಣೆಯಾಗುತ್ತದೆ.
ಬಿಸಿಲಿಗೆ ಹೋಗುವ ಮುನ್ನ ಮುಖ ಮತ್ತು ದೇಹಕ್ಕೆ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿ. ಇದರಿಂದ ಬೇಗನೆ ಸನ್ ಟ್ಯಾನ್ ಆಗೋದಿಲ್ಲ.