ಪೂಜೆಗೆ ಬಳಸುವ ಕರ್ಪೂರದಿಂದ ಸೌಂದರ್ಯ!

ಕರ್ಪೂರವನ್ನು ಬಳಸುವುದು ದೇವರ ಪೂಜೆಗೆ ಮಾತ್ರ ಎಂದು ಕೊಂಡರೆ ತಪ್ಪು. ಇದನ್ನು ಸೌಂದರ್ಯ ಸಮಸ್ಯೆ ನಿವಾರಣೆ ಮಾಡಲು ಬಳಕೆ ಮಾಡುತ್ತಾರೆ. ಹೇಗೆ ನೋಡೋಣ? 

6 benefits of camphor for skin problem

ಹಿಂದೂ ಧರ್ಮದಲ್ಲಿ ಪೂಜೆ ಮತ್ತು ಆರತಿ ಮಾಡುವ ಸಮಯದಲ್ಲಿ ಕರ್ಪೂರವನ್ನು ಬಳಸುತ್ತಾರೆ. ಇದು ಪರಂಪರೆಯಾಗಿದೆ. ಧಾರ್ಮಿಕ ವಿಧಿ ವಿಧಾನಗಳಲ್ಲಿ ಕರ್ಪೂರಕ್ಕೆ ವಿಶೇಷ ಮಹತ್ವವಿದೆ. ಆದರೆ ಇದು ಕೇವಲ ಪೂಜೆ ಮಾತ್ರವಲ್ಲ ಸೌಂದರ್ಯ ಸಮಸ್ಯೆ ನಿವಾರಿಸುತ್ತದೆ. 

ಚರ್ಮದ ಸಮಸ್ಯೆ ನಿವಾರಣೆ: ತ್ವಚೆಗೆ ಸಂಬಂಧಿಸಿದ ಸಮಸ್ಯೆ ನಿವಾರಣೆ ಮಾಡಲು ಕರ್ಪೂರ ಉತ್ತಮ. ತೆಂಗಿನ ಎಣ್ಣೆ ಜೊತೆ ಕರ್ಪೂರದ ಪುಡಿ ಮಿಕ್ಸ್ ಮಾಡಿ ತುರಿಕೆ, ಕಜ್ಜಿ ಮೇಲೆ ಹಚ್ಚಿದರೆ ಅವು ನಿವಾರಣೆಯಾಗುತ್ತವೆ. 

ಮನೆಯ ಶೇ.50ರಷ್ಟು ಧೂಳು ನಮ್ಮ ಮೃತ ಚರ್ಮದ್ದು...!?

ಪಿಂಪಲ್ ನಿವಾರಣೆ: ತೆಂಗಿನ ಎಣ್ಣೆ ಜೊತೆ ಬೆರೆಸಿದ ಕರ್ಪೂರವನ್ನು ಮೊಡವೆ ಮೇಲೆ ಹಚ್ಚಿದರೆ ಅದು ಬೇಗ ನಿವಾರಣೆಯಾಗುತ್ತದೆ. ಜೊತೆಗೆ ಮುಖ ಸುಂದರವಾಗಿ ಕಾಣುತ್ತದೆ. ಕೂದಲಿನ ಆರೋಗ್ಯಕ್ಕೆ: ಸಾಸಿವೆ ಎಣ್ಣೆ ಜೊತೆ ಬೆರೆಸಿದ ಕರ್ಪೂರದ ಎಣ್ಣೆಯನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿದರೆ ಹೇನು, ಕಜ್ಜಿ ಸಮಸ್ಯೆ ನಿವಾರಣೆಯಾಗಿ ಕೂದಲು ಆರೋಗ್ಯಯುತವಾಗುತ್ತದೆ. 

ಸದೃಢ ಕೂದಲು: ಹೌದು ಕರ್ಪೂರದ ಎಣ್ಣೆಯನ್ನು ವಾರದಲ್ಲಿ ಎರಡು ಬಾರಿ ತಲೆಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ, ಸ್ನಾನ ಮಾಡಿದರೆ ಕೂದಲು ಉದರುವ ಸಮಸ್ಯೆ ನಿವಾರಣೆಯಾಗಿ ಕೂದಲು ಬುಡದಿಂದಲೇ ಸ್ಟ್ರಾಂಗ್ ಆಗುತ್ತದೆ. 

ಹೆಲ್ತ್ ಇನ್ಶೂರೆನ್ಸ್ ಕೊಳ್ಳುವ ಮೊದಲು ನೆನಪಿಡಬೇಕಾದ 5 ಅಂಶಗಳು!

ಕಲೆ ನಿವಾರಣೆ: ದೇಹದಲ್ಲಿ ಸುತ್ತ ಗಾಯ ಅಥವಾ ಗಾಯವಾದ ಗುರುತಿದ್ದರೆ ಕರ್ಪೂರವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಎಫೆಕ್ಟ್ ಆದ ಜಾಗಕ್ಕೆ ಹಚ್ಚಿ. ಇದನ್ನು ನಿಯಮಿತವಾಗಿ ಮಾಡುತ್ತಿದ್ದರೆ ಕಲೆ ನಿವಾರಣೆಯಾಗಿ ತ್ವಚೆ ಸುಂದರವಾಗುತ್ತದೆ. 

Latest Videos
Follow Us:
Download App:
  • android
  • ios