ಅಡುಗೆ ರೆಸಿಪಿ: ಅನಾನಸ್ ಪಲ್ಯ
ಅನಾನಸ್ ಕೇಸರಿಬಾತ್, ಹಲ್ವಾ, ಗೊಜ್ಜು ಎಲ್ಲವೂ ರುಚಿ. ಆದರೆ, ಪಲ್ಯ. ವಿಶೇಷ ಸಮಾರಂಭಗಳ ಊಟಕ್ಕೆ ವಿಶೇಷ ಮೆರಗು ನೀಡುವ ಈ ಪಲ್ಯ ಮಾಡೋದು ಹೀಗೆ? ಇಲ್ಲಿದೆ ರೆಸಿಪಿ...
ಯಾವುದೇ ಸಮಾರಂಭ ಅಥವಾ ಹಬ್ಬದಲ್ಲಿ ಸಾಮಾನ್ಯವಾಗಿ ಊಟದ ಎಲೆ ಮೇಲೆ ಕಾಣುವುದು ತರಕಾರಿ ಪಲ್ಯ, ಆದರೆ ವೆರೖಟಿ ರುಚಿ ಬೇಕು ಆದರೆ ತರಕಾರಿ ಬೇಡ ಎನ್ನುವರಿಗೆ ಇಲ್ಲಿದೆ ಅನಾನಸ್ ಪಲ್ಯ ರೆಸಿಪಿ.........
ಬೇಕಾಗುವ ಸಾಮಾಗ್ರಿ:
- 1 ಅನಾನಸ್
- ಅರ್ಧ ಬಟ್ಟಲು ತೆಂಗಿನ ತುರಿ
- ಒಣ ಮೇಣಸಿನಕಾಯಿ
- ಬೆಲ್ಲದ ಪುಡಿ
- ಉದ್ದಿನ ಬೇಳೆ
- ಕಡಲೆ ಬೇಳೆ
- ಎಣ್ಣೆ
- ಸಾಸಿವೆ
- ಕರಿಬೇವು ಸೊಪ್ಪು
- ಉಪ್ಪು
ಮಾಡುವ ವಿಧಾನ:
ಮೊದಲು ಅನಾನಸ್ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಹೆಚ್ಚಿಕೊಳ್ಳಿರಿ. ಈಗ ಒಂದು ಬಾಣಲೆಯನ್ನು ಒಗ್ಗರಣೆ ಹಾಕಿಕೊಂಡು ಆದರೂಳಗೆ ಒಂದು ಎಸಳು ಕರಿಬೇವು ಹಾಕಿರಿ. ಹೆಚ್ಚಿದ ಚೂರುಗಳನ್ನು ಹಾಕಿ ಉಪ್ಪು, ಆರಿಶಿಣ ಮತ್ತು ಬೆಲ್ಲೆ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಮುಚ್ಚಿಡಿ. ತೆಂಗಿನ ತುರಿ, ಮೆಣಸಿನಕಾಯಿ ಹುರಿದುಕೊಂಡು ತರಿ ತರಿಯಾಗಿ ರುಬ್ಬಿರಿ. ಈಗ ಈ ರುಬ್ಬಿದ ಸಾಮಾನುಗಳನ್ನು ಬೆಂದ ಚೂರುಗಳಿಗೆ ಹಾಕಿ ಚೆನ್ನಾಗಿ ಕಲಸಿರಿ. ಈಗ ರುಚಿಕರ ಅನಾನಸ್ ಪಲ್ಯ ಸಿದ್ದ.