ಪುರುಷರಲ್ಲಿ ಕ್ಯಾನ್ಸರ್ ಲಕ್ಷಣಗಳನ್ನು ಆರಂಭದಲ್ಲಿಯೇ ಗುರುತಿಸೋದು ಹೇಗೆ?
ಕ್ಯಾನ್ಸರ್ ಹೆಸರು ಕೇಳಿದರೆ ಎಲ್ಲರಿಗೂ ಭಯವಾಗುತ್ತದೆ. ಅದು ನಮಗೆ ಬರಬಾರದು ಎಂದರೆ ಸ್ಮೋಕಿಂಗ್, ತಂಬಾಕು ಸೇವನೆ, ಆಲ್ಕೋಹಾಲ್ ಚಟಗಳನ್ನು ಬಿಟ್ಟು, ಸೊಪ್ಪು ತರಕಾರಿಗಳ ಡಯಟ್, ವ್ಯಾಯಾಮ ಸೇರಿದಂತೆ ಆರೋಗ್ಯವಂತ ಜೀವನಶೈಲಿ ಅಪ್ಪಿಕೊಳ್ಳಬೇಕು. ಇದರಿಂದ ಬಹುತೇಕ ಸಮಯದಲ್ಲಿ ಕ್ಯಾನ್ಸರ್ ತಡೆಗಟ್ಟಬಹುದು
ಗ್ಲೋಬೋಕ್ಯಾನ್ 2018 ಸಂಶೋಧನೆಯ ಪ್ರಕಾರ ಭಾರತೀಯ ಪುರುಷರು ಎದುರಿಸುವ ಐದು ಸಾಮಾನ್ಯ ಕ್ಯಾನ್ಸರ್ ವಿಧಗಳೆಂದರೆ, ಬಾಯಿಯ ಕ್ಯಾನ್ಸರ್, ಶ್ವಾಸಕೋಶ, ಹೊಟ್ಟೆ, ಅನ್ನನಾಳ ಹಾಗೂ ಕರುಳಿನ ಕ್ಯಾನ್ಸರ್. ಇದರಲ್ಲಿ ಬರಿಯ ಶ್ವಾಸಕೋಶ ಹಾಗೂ ಬಾಯಿಯ ಕ್ಯಾನ್ಸರ್ ಶೇ.25ರಷ್ಟು ಕ್ಯಾನ್ಸರ್ ಸಾವಿಗೆ ಕಾರಣವಾಗುತ್ತದೆ. ಒಂದು ಒಳ್ಳೆಯ ವಿಷಯವೆಂದರೆ, ಬಹುತೇಕ ಕ್ಯಾನ್ಸರ್‌ಗಳನ್ನು ಆರಂಭದಲ್ಲೇ ಗುರುತಿಸಿದರೆ ಗುಣ ಹೊಂದಲು ಅಥವಾ ತಡೆಯಲು ಸಾಧ್ಯವಿದೆ ಎಂಬುದು.
ಸಾಮಾನ್ಯವಾಗಿ ಕ್ಯಾನ್ಸರ್ ಬಂದಾಗ ಆರಂಭದಲ್ಲಿ ಪ್ರಮುಖವಾದ ಯಾವುದೇ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳದೆ ಇರುವುದರಿಂದ ಕಾಯಿಲೆಯು ಕೊನೆಯ ಹಂತದಲ್ಲಿ ಬೆಳಕಿಗೆ ಬರುವುದೇ ಹೆಚ್ಚು. ಈ ಸಂದರ್ಭದಲ್ಲಿ ಚಿಕಿತ್ಸೆ ಕೆಲಸ ಮಾಡದೆ ಸಾವುನೋವುಗಳು ಜಾಸ್ತಿ. ಇದಕ್ಕಿರುವ ಒಂದೇ ಮಾರ್ಗವೆಂದರೆ ಆಗಾಗ ಕಾಯಿಲೆಯ ಪರೀಕ್ಷೆ ಮಾಡಿಸಿಕೊಳ್ಳುವುದು.
40 ವಯಸ್ಸಿನ ಬಳಿಕ ಪುರುಷರು ವರ್ಷಕ್ಕೊಮ್ಮೆ ಅಥವಾ 2 ವರ್ಷಕ್ಕೊಮ್ಮೆ ಈ ಸ್ಕ್ರೀನಿಂಗ್ ಟೆಸ್ಟ್‌ಗಳನ್ನು ಮಾಡಿಸಿಕೊಳ್ಳುತ್ತಿರುವುದು ಒಳಿತು.
ಕ್ಯಾನ್ಸರ್ ಮಣಿಸಿ ಬ್ಯೂಟಿ ಕಿರೀಟ ತೊಟ್ಟ ಸುಂದರಿ!
1. ಶ್ವಾಸಕೋಶದ ಕ್ಯಾನ್ಸರ್ ಸ್ಕ್ರೀನಿಂಗ್
ಜಾಗತಿಕವಾಗಿ ಕ್ಯಾನ್ಸರ್ ಸಂಬಂಧಿ ಸಾವುಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಮುಂಚೂಣಿಯಲ್ಲಿದೆ. ಸಿಗರೇಟು ಚಟ ಹೊಂದಿದ್ದವರು ಹಾಗೂ ಹೊಂದಿರುವವರು ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಾರಾದರೂ, ತಂಬಾಕು ಅಥವಾ ಸಿಗರೇಟು ಸೇವನೆ ಅಭ್ಯಾಸ ಇಲ್ಲದವರೂ ವಾಯುಮಾಲಿನ್ಯ ಸೇರಿದಂತೆ ಇತರೆ ಕಾರಣಗಳಿಂದಾಗಿ ಒಮ್ಮೊಮ್ಮೆ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಬಹುದು. ಇದು ಸಾಮಾನ್ಯವಾಗಿ ಕಡೆಯ ಸ್ಟೇಜ್‌ನಲ್ಲೇ ಬೆಳಕಿಗೆ ಬರುವುದರಿಂದ ಚಿಕಿತ್ಸೆ ಫಲಿಸುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಇದರ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಿಕೊಳ್ಳುತ್ತಿರಬೇಕು. 55ರಿಂದ 5 ವಯೋಮಾನದ ಪುರುಷರು, ಅದರಲ್ಲೂ ಅವರು ಹೆವೀ ಸ್ಮೋಕರ್‌ಗಳಾಗಿದ್ದರೆ ಲಂಗ್ ಕ್ಯಾನ್ಸರ್‌ಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು. ಲೋ ಡೋಸ್ ಸಿಟಿ ಸ್ಕ್ಯಾನ್ ಮೂಲಕ ವರ್ಷಕ್ಕೊಮ್ಮೆ ಇದರ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಮುಖ್ಯ.
2. ಬಾಯಿಯ ಕ್ಯಾನ್ಸರ್ ಸ್ಕ್ರೀನಿಂಗ್
ಓರಲ್ ಕ್ಯಾನ್ಸರ್ ಎಂದರೆ ತುಟಿ, ನಾಲಿಗೆ, ಕೆನ್ನೆಗಳು, ಬಾಯಿಯ ಅಂಗಳ, ವಸಡುಗಳು ಹಾಗೂ ಗಂಟಲನ್ನು ಒಳಗೊಂಡ ಕ್ಯಾನ್ಸರ್. ಪ್ರತಿನಿತ್ಯ ತಂಬಾಕು ಹಾಗೂ ಆಲ್ಕೋಹಾಲ್ ಸೇವಿಸುವವರು ಬಾಯಿಯ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಈ ಭಾಗದಲ್ಲಿ ಸಣ್ಣ ಗಡ್ಡೆಯಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್ ನಂತರ ಬೆಳೆಯುತ್ತಾ, ಹರಡುತ್ತಾ ಹೋಗುತ್ತದೆ. ಹಾಗಾಗಿ, ಈ ಚಟಗಳಿರುವ ಹಾಗೂ ಸಣ್ಣ ಗಡ್ಡೆ ಕಾಣಿಸಿಕೊಂಡವರು ಈ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಿಕೊಳ್ಳಬೇಕು. ತಜ್ಞವೈದ್ಯರಿಗೆ ಸುಮ್ಮನೆ ಕಣ್ಣಲ್ಲೇ ತಪಾಸಣೆ ನಡೆಸಿದರೂ ಈ ಬಗ್ಗೆ ತಿಳಿಯುತ್ತದೆ.
ನಿಜವಾಯ್ತು ಮಕ್ಕಳ ಸ್ಟೋರಿ: ಅತ್ತೆಗಾಗಿ ತಲೆ ಬೋಳಿಸಿಕೊಂಡ ಬೆಂಗಳೂರಿನ ಸೊಸೆ
3. ಪ್ರೊಸ್ಟೇಟ್ ಕ್ಯಾನ್ಸರ್ ಸ್ಕ್ರೀನಿಂಗ್
ಪುರುಷರಲ್ಲಿ ಮೂತ್ರ ನಿಯಂತ್ರಿಸಲು ಸಹಾಯ ಮಾಡುವ, ವೀರ್ಯ ದ್ರವ ಉತ್ಪಾದನೆಗೆ ಕಾರಣವಾಗುವ ಪ್ರೋಸ್ಟೇಟ್ ಗ್ಲ್ಯಾಂಡ್‌ನಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯತೊಡಗಿದರೆ ಅದನ್ನು ಪ್ರೊಸ್ಟೇಟ್ ಕ್ಯಾನ್ಸರ್ ಎನ್ನಲಾಗುತ್ತದೆ. ಈ ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಸರ್ಜರಿ ಹಾಗೂ ರೇಡಿಯೋಥೆರಪಿ ಮೂಲಕ ಗುಣಪಡಿಸಬಹುದು. 50ನೇ ವರ್ಷದಿಂದಲೇ ಇದಕ್ಕಾಗಿ ಸ್ಕ್ರೀನಿಂಗ್ ಟೆಸ್ಟ್ ಆರಂಭಿಸಬೇಕು. ಪ್ರೊಸ್ಟೇಟ್ ಸ್ಪೆಸಿಫಿಕ್ ಆ್ಯಂಟಿಜನ್ ಟೆಸ್ಟ್ (ಪಿಎಸ್ಎ) ಎಂಬ ರಕ್ತಪರೀಕ್ಷೆಯ ಮೂಲಕ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಇದರಲ್ಲಿ ಫಲಿತಾಂಶ ಅಬ್‌ನಾರ್ಮಲ್ ಆಗಿ ಬಂದರೆ ಮತ್ತಷ್ಟು ಸ್ಕ್ಯಾನ್ ಹಾಗೂ ಬಯೋಪ್ಸಿ ಮಾಡಲಾಗುತ್ತದೆ.
Cancer ರೋಗಿಗಿಳಿಗೆ....ಕೆಮೋಯಿಂದ ಕೂದಲುದುರಿದರೆ ಮದ್ದು!
4. ಕರುಳಿನ ಕ್ಯಾನ್ಸರ್
ಆರಂಭದಲ್ಲಿ ಕ್ಯಾನ್ಸರ್ ಅಲ್ಲದೆ ಹಾಗೆಯೇ ಸಣ್ಣ ಗಂಟುಗಳಾಗಿ ಕಾಣಿಸಿಕೊಳ್ಳುವ ಈ ಕರುಳಿನ ಕ್ಯಾನ್ಸರ್, ನಿಧಾನವಾಗಿ ಕ್ಯಾನ್ಸರ್ ಕೋಶಗಳಿಂದ ಆವೃತವಾಗುತ್ತದೆ. 50 ವರ್ಷ ದಾಟಿದ ಪುರುಷರು ವಾರ್ಷಿಕವಾಗಿ 75 ವರ್ಷದವರೆಗೂ ಈ ಪರೀಕ್ಷೆ ಮಾಡಿಸಿಕೊಳ್ಳುತ್ತಲೇ ಇರಬೇಕು. ಈ ಸಂಬಂಧ ಫ್ಯಾಮಿಲಿ ಹಿಸ್ಟರಿ ಇರುವವರು, ಗಂಟುಗಳಾಗಿದ್ದರೆ, ಹಿಂದೆ ಯಾವತ್ತಾದರೂ ರೇಡಿಯೇಶನ್‌ಗೆ ಎಕ್ಸ್‌ಪೋಸ್ ಆಗಿದ್ದರೆ, ಅಥವಾ ಇನ್ಫ್ಲೆಮೇಟರ್ ಬೊವೆಲ್ ಡಿಸೀಸ್ ಇರುವ ಸಣ್ಣ ವಯಸ್ಸಿನ ಪುರುಷರು ಕೂಡಾ ಈ ಟೆಸ್ಟ್ ಮಾಡಿಸಿಕೊಳ್ಳುತ್ತಿರಬೇಕು. ಇದಕ್ಕೆ ಎರಡು ರೀತಿಯ ಸ್ಕ್ರೀನಿಂಗ್ ಟೆಸ್ಟ್‌ಗಳನ್ನು ಮಾಡಲಾಗುತ್ತದೆ. ಒಂದರಲ್ಲಿ ಗಂಟುಗಳು ಹಾಗೂ ಕ್ಯಾನ್ಸರ್ ಎರಡನ್ನೂ ಪರೀಕ್ಷಿಸಿದರೆ, ಮತ್ತೊಂದರಲ್ಲಿ ಕೇವಲ ಕ್ಯಾನ್ಸರ್ ಇದೆಯೇ ಎಂದಷ್ಟೇ ನೋಡಲಾಗುತ್ತದೆ. ಫ್ಲೆಕ್ಸಿಬಲ್ ಸಿಗ್ಮಾಯ್ಡೋಸ್ಕೋಪಿ, ಕೋಲೋನೋಸ್ಕೋಪಿ, ಡಬಲ್ ಕಾಂಟ್ರಾಸ್ಟ್ ಬೇರಿಯಂ ಎನಿಮಾ ಅಥವಾ ಸಿಟಿ ಕೋಲೋನೋಗ್ರಫಿ, ಸ್ಟೂಲ್ ಬ್ಲಡ್ ಟೆಸ್ಟ್, ಸ್ಟೂಲ್ ಡಿಎನ್ಎ ಟೆಸ್ಟಿಂಗ್‌ಗಳ ಮೂಲಕ ಪರೀಕ್ಷಿಸಲಾಗುತ್ತದೆ.