ಒಂದು ಪ್ಲೇಟ್ ನಲ್ಲಿ ಮಿಶ್ರಣವನ್ನು ಹರಡಿ ಬೇಕಾದ ಆಕಾರಕ್ಕೆ ಕತ್ತರಿಸಿದರೆ ಸವಿಸಿವಿಯ ಸಿಹಿಯಾದ ಡ್ರೈ ಫ್ರೂಟ್ಸ್ ಹಲ್ವ ಸವಿಯಲು ಸಿದ್ದ.

ಹಬ್ಬದಲ್ಲಿ ಮಾಡಿದ ಸಿಹಿತಿನಿಸು ಖಾಲಿಯಾಗಿದೆ. ಈಗ ಸಿಹಿತಿನಿಸು ತಿನ್ನುವ ಆಸೆಯಾಗಿದೆ ಏನು ಮಾಡುವುದು ಎಂಬ ಯೋಚನೆಯೇ ಹಾಗಾದರೆ ಇಲ್ಲಿದೆ ನೋಡಿ ಸಿಹಿಸಿಹಿಯಾದ ಡ್ರೈ ಫ್ರೂಟ್ಸ್ ಹಲ್ವ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೇಕಾಗುವ ಸಾಮಗ್ರಿಗಳು: ಬಾದಾಮಿ 1 ಕಪ್, 1/2 ಕಪ್ ಹಾಲು, ಕೇಸರಿ 4 ಎಸಳು, ಗೋಡಂಬಿ 1 ಕಪ್, ಸಕ್ಕರೆ 1 ಕಪ್, 1 ಟೀ ಚಮಚ ತುಪ್ಪ.

ಮಾಡುವ ವಿಧಾನ:

ಒಂದು ಕಪ್ ಬಾದಾಮಿ ಮತ್ತು ಗೋಡಂಬಿಯನ್ನು ಒಂದು ರಾತ್ರಿ ನೆನೆಸಿ, ನಂತರ ಬಾದಾಮಿ ಮೇಲಿನ ಸಿಪ್ಪೆ ತೆಗೆದು ಗೋಡಂಬಿ ಮತ್ತು ಬಾದಾಮಿಯನ್ನು ಪುಡಿ ಮಾಡಿ. ನಂತರ ಒಂದು ಬಾಣಲೆಗೆ ಹಾಲನ್ನು ಹಾಕಿ ಅದಕ್ಕೆ ಗೋಡಂಬಿ ಮತ್ತು ಬಾದಾಮಿಯ ಮಿಶ್ರಣವನ್ನು ಸೇರಿಸಿ. ಚಿನ್ನದ ಕಂದು ಬಣ್ಣ ಬರುವವರೆಗೆ ಅದನ್ನು ಕುದಿಸಿ. ನಂತರ ಅದಕ್ಕೆಸಕ್ಕರೆ ಸೇರಿಸಿ ಮತ್ತೆ ಕುದಿಸಿ. ನಂತರ ಅದಕ್ಕೆ ಕೇಸರಿ ಎಸಳು ಸೇರಿಸಿ. ಮಿಶ್ರಣವು ಸ್ವಲ್ಪ ಗಟ್ಟಿಯಾಗುತ್ತಿರುವಾಗ ಅದಕ್ಕೆ ತುಪ್ಪವನ್ನು ಸೇರಿಸಿ. ಮಿಶ್ರಣ ಬಾಣಲೆಯ ತಳ ಬಿಟ್ಟ ನಂತರ ಒಂದು ಪ್ಲೇಟ್ ನಲ್ಲಿ ಮಿಶ್ರಣವನ್ನು ಹರಡಿ ಬೇಕಾದ ಆಕಾರಕ್ಕೆ ಕತ್ತರಿಸಿದರೆ ಸವಿಸಿವಿಯ ಸಿಹಿಯಾದ ಡ್ರೈ ಫ್ರೂಟ್ಸ್ ಹಲ್ವ ಸವಿಯಲು ಸಿದ್ದ.