27 ಸಾವಿರ ಮಂದಿ ಉದ್ಯೋಗಿಗಳನ್ನು ಈ ಸರ್ವೆಯಲ್ಲಿ ಬಳಸಿಕೊಳ್ಳಲಾಗಿತ್ತು.

ಬೆಂಗಳೂರು(ಅ.03): ಬೆಳ್ಳಂ ಬೆಳಗ್ಗೆ ಆಫೀಸಿಗೆ ಓಡಿಬರ್ಬೇಕು ಎನ್ನುವ ಈ ಯುಗದಲ್ಲಿ ಬ್ರೇಕ್‌ ಫಾಸ್ಟ್‌ಗೆ ಬಹುತೇಕರಿಗೆ ಸಮಯವೇ ಸಿಗ್ತಿಲ್ಲ. ಆಘಾತಕಾರಿ ವಿಚಾರ ಅಂದ್ರೆ, ಹೀಗೆ ಬ್ರೇಕ್‌ಫಾಸ್ಟ್ ಬಿಟ್ರೆ ಹೃದಯಕ್ಕೇ ತೊಂದರೆಯಂತೆ. ಹಾರ್ವರ್ಡ್ ಸ್ಕೂಲ್ ಆ್ ಪಬ್ಲಿಕ್ ಹೆಲ್ತ್ ನಡೆಸಿದ ಸರ್ವೆಯಲ್ಲಿ ಇದು ಗೊತ್ತಾಗಿದೆ.

ಒಟ್ಟಾರೆ 27 ಸಾವಿರ ಮಂದಿ ಉದ್ಯೋಗಿಗಳನ್ನು ಈ ಸರ್ವೆಯಲ್ಲಿ ಬಳಸಿಕೊಳ್ಳಲಾಗಿತ್ತು. ಇದರಲ್ಲಿ ಶೇ.60 ಮಂದಿ ಬೆಳಗ್ಗೆ ಬ್ರೇಕ್‌ಾಸ್ಟೇ ಮಾಡೋದಿಲ್ಲ, ಟೈಮ್ ಆಗೋದಿಲ್ಲ ಎಂಬ ನೆಪ ಹೇಳಿದ್ದರು. ಇವರೆಲ್ಲರಿಗೂ ಹೃದಯದ ತೊಂದರೆಯಿತ್ತು. ಬೊಜ್ಜು ಮತ್ತು ಅಕ ರಕ್ತದೊತ್ತಡ, ಹೈ ಕೊಲೆಸ್ಟೆರಾಲ್ ಮತ್ತು ಡಯಾಬಿಟೀಸ್‌ನಿಂದ ಇವರು ಬಳಲುತ್ತಿದ್ದರು. ಸರ್ವೆ ಹಂತದಲ್ಲಿ 16 ಮಂದಿ ಹೃದಯಾಘಾತದಿಂದ ಮಡಿದಿದ್ದಾರೆ. ಹಾಗೆ ಮಡಿದವರೂ ಬೆಳಗ್ಗಿನ ಉಪಾಹಾರಕ್ಕೆ ಆದ್ಯತೆ ನೀಡುತ್ತಿರಲಿಲ್ಲವಂತೆ.