ಶಾಲೆಗಳಲ್ಲಿ ಮೊದಲೆಲ್ಲಾ ಸ್ಕಿಪ್ಪಿಂಗ್‌ಅನ್ನು ಸಹ ಒಂದು ಸ್ಪರ್ಧೆಯಾಗಿ ಮಾಡುತ್ತಿದ್ದರು. ಸ್ಕಿಪ್ಪಿಂಗ್ ಮಾಡೋದರಿಂದ ಏನು ಲಾಭ ಎನ್ನುವುದು ನಿಮಗೆ ಗೊತ್ತಾ, ಸ್ಕಿಪ್ಪಿಂಗ್‌ಗೆ ಯಾವುದೇ ವಯಸ್ಸಿನ ಮಿತಿಯಿಲ್ಲ.

ದಿನವೂ ಬೆಳಗ್ಗೆ ಸಂಜೆ ಸ್ಕಿಪ್ಪಿಂಗ್ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತೆ. ಅಲ್ಲದೆ ಬೊಜ್ಜು ಕರಗುವುದು, ಹೊಟ್ಟೆ ಕರಗುವುದು, ಎತ್ತರ ಆಗುವುದು, ರಕ್ತ ಸಂಚಲನ, ಉಸಿರಾಟ, ಹಸಿವಾಗುವುದು, ಹೃದಯ ಬಡಿತ ಚೆನ್ನಾಗಿರುತ್ತೆ. ಹೀಗೆ ಒಂದೇ ಸಮನೆ ಸ್ಕಿಪ್ಪಿಂಗ್ ಮಾಡುವುದರಿಂದ ದೇಹದಲ್ಲಿನ ತ್ಯಾಜ್ಯವನ್ನು ಬೆವರಿನ ಮೂಲಕ ಹೊರ ಹಾಕಿ ದಿನ ಪೂರ್ತಿ ಆ್ಯಕ್ಟಿವ್ ಆಗಿರುವಂತೆ ಮಾಡುತ್ತೆ.