ವೇಗದ ಬದುಕಿನಲ್ಲಿ ಸುಖ ಸಂತೋಷ ಅನುಭವಿಸುವುದಕ್ಕೆ ಸಮಯವೆ ಇರುವುದಿಲ್ಲ. ಈ ಖುಷಿಯ ಕ್ಷಣಗಳಲ್ಲಿ ಸೆಕ್ಸ್ ಲೈಫ್ ಅತ್ಯಂತ ಪ್ರಮುಖವಾದುದು. ಲೈಂಗಿಕ ಸುಖವನ್ನು  ಎಂಜಾಯ್ ಮಾಡಲು ಸಾಧ್ಯವಾಗದೆ ನೋವು ಅನುಭವಿಸುವವರೆ ಹೆಚ್ಚು. ಸಂಬಂಧಗಳು ಹಾಳಾಗುತ್ತವೆ, ಮನಸ್ಥಾಪಗಳು ಎದುರಾಗುತ್ತವೆ. ಎಷ್ಟೆ ಹಣ ಐಶ್ವರ್ಯವಿದ್ದರೂ ಕೆಲವರಿಗೆ ಬದುಕಿದ್ದು ವ್ಯರ್ಥವೆನಿಸುತ್ತದೆ. ದುಃಖ ಅನುಭವಿಸುವವರಲ್ಲಿ ಪುರುಷರು ಹಾಗೂ ಮಹಿಳೆರೆನ್ನುವ ಬೇಧವಿಲ್ಲ.  ಅಂತಹ ಅತೃಪ್ತಿ ಹೊಂದುವುದಕ್ಕೆ ಕಾರಣವಾಗುವ ಅಂಶಗಳು ಹಾಗೂ ಪರಿಹಾರಗಳು ಇಂತಿವೆ.

1) ಸೆಕ್ಸ್ ಸುಖಕ್ಕೆ ಕಾಲಾವಕಾಶವಿರಲಿ : ಒಂದು ಕ್ಷಣ ಯೋಚನೆ ಮಾಡಿ. ಮಾಮೂಲಿ ಹಸಿವಾದಾಗ ನಿಮಗೆ ಹೆಚ್ಚು ಊಟವನ್ನು ಬಲವಂತವಾಗಿ ಬಡಿಸಿದರೆ ನಿಮಗೆ ಏನನ್ನಿಸುತ್ತದೆ ಹೇಳಿ. ಆಹಾರ ಸೇವಿಸುತ್ತಾ ಅದನ್ನು ಕಕ್ಕಿಕೊಳ್ಳುವುದು ಹೆಚ್ಚು. ಅದೇ ರೀತಿ ಸೆಕ್ಸ್ ಸುಖ ಕೂಡ ಆಸೆಯಾಗಿದೆ ಎಂದು ಒಂದೇ ದಿನ ನಾಲ್ಕೖದು ದಿನ ಲೈಂಗಿಕ ಕ್ರಿಯೆಗೆ ಒಳಗಾದರೆ. ನೀವು ಹೊಸ ಸುಖ ಪಡೆಯಲು ಬಹಳ ದಿನಗಳೆ ಬೇಕಾಗುತ್ತದೆ. ಪರಸ್ಪರರಲ್ಲಿ ಯಾರಾದರೂ ಒಬ್ಬರಿಗೆ ನಿರಾಸಕ್ತಿ ಉಂಟಾಗಲು ಬಹುದು. ಆದ ಕಾರಣ ಹಾಸಿಗೆ ಸುಖ ಬೇಕಾದವರು ತಾಳ್ಮೆ ಮಿತಿಯನ್ನು ಅನುಸರಿಸಬೇಕು. ಬೇಕನಿಸಿದಾಗ ಇಬ್ಬರು ಒಂದು ಅಥವಾ ಎರಡು ಬಾರಿ ಕೂಡಿದರೆ ರೋಚಕ ಕ್ಷಣಗಳನ್ನು
ಅನುಭವಿಸಬಹುದು.

2) ದಿನವನ್ನು ನಿಗದಿಪಡಿಸಿಕೊಳ್ಳಿ  : ಸೆಕ್ಸ್ ಸುಖ ವಾರದಲ್ಲಿ ಎಷ್ಟು ದಿನ ಅನುಭವಿಸಬೇಕು ಎಂಬದರ ಬಗ್ಗೆ ಸಮಯ ನಿಗದಿಪಡಿಸಿಕೊಳ್ಳಿ. ಆ ದಿನಗಳಂದೆ ಇಬ್ಬರು ಕೂಡಿಕೊಳ್ಳಿ. ಅದನ್ನು ಬಿಟ್ಟು ಮುಂಚಿತವಾಗಿ ಕೂಡಲು ಹೋಗಲೇ ಬೇಡಿ. ತಡವಾದರೂ ನಿಮ್ಮ ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ ವಿನಃ ಕಡಿಮೆಯಾಗುವುದಿಲ್ಲ. ಇದು ಅಭ್ಯಾಸವಾದರೆ ನಿಮ್ಮ ಖುಷಿಗೆ ಪಾರವೇ ಇರುವುದಿಲ್ಲ.  

3)ಸ್ಥಳ, ಸಮಯ ಬದಲಾವಣೆ ಸೂಕ್ತ : ನೂರಕ್ಕೆ ನೂರರಷ್ಟು ಮಂದಿ ಸೆಕ್ಸ್'ನಲ್ಲಿ ಕೂಡುವುದು ಬೆಡ್ ರೂಮಿನಲ್ಲಿಯೇ. ಇದು ಕೆಲವೊಮ್ಮೆನೇರವಾಗಿ ಬೇಸರವಾಗದಿದ್ದರೂ ಪರೋಕ್ಷವಾಗಿ ಬೇಸರವಾಗುವುದು ಸಾಮಾನ್ಯ. ವಾರದಲ್ಲಿ ತಿಂಗಳಲ್ಲಿ ಪ್ರವಾಸಕ್ಕೆ ಹೋಗುವ ಅಭ್ಯಾಸವಿದ್ದರೆ. ಪ್ರವಾಸಿ ಸ್ಥಳದ ಕೊಠಡಿಯಲ್ಲಿ ನಿಮ್ಮ ಸಲ್ಲಾಪದಲ್ಲಿ ತೊಡಗಿಸಿಕೊಳ್ಳಿ. ಅದು ನಿಮಗೆ ಹೆಚ್ಚು ಮಜವನ್ನು ಕೊಡುತ್ತದೆ. ಕೇಲವ ರಾತ್ರಿಯ ವೇಳೆ ಸೇರುತ್ತಿದ್ದರೆ ಸಮಯವಿದ್ದರೆ ಬೆಳಗಿನ ಸಮಯದಲ್ಲೂ ಮಿಲನ ಸುಖ ಅನುಭವಿಸಿ.

4)ವಿವಿಧ ರೀತಿಯಲ್ಲಿ ಸೆಕ್ಸ್: ಒಂದೇ ರೀತಿಯ ಸೆಕ್ಸ್ ಸ್ತ್ರೀ ಪುರುಷರಿಬ್ಬರಿಗೂ ಬೇಸರವಾಗುವುದು ಸಹಜ. ಕೆಲವರು ರೀತಿಯ ಭಂಗಿಯಲ್ಲಿ ಮಿಲನ ಸುಖದಲ್ಲಿ ತೊಡಗುತ್ತಾರೆ. ಸೆಕ್ಸ್ ಆಕಾರಗಳನ್ನು ಬದಲಿಸಿಕೊಂಡರೆ ಖುಷಿಯು ಮತ್ತಷ್ಟು ಹೆಚ್ಚಾಗುತ್ತದೆ. ವಿರಸದ ಭಾವವು ಕಡಿಮೆಯಾಗುತ್ತದೆ. ಒಬ್ಬರಿಗೊಬ್ಬರ ಅನುಮತಿಯಿಂದ ಈ ರೀತಿ ಮಾಡಿಕೊಳ್ಳುವುದು ಉತ್ತಮ.    

(ಸಾಂದರ್ಭಿಕ ಚಿತ್ರ)