ಹೊಟ್ಟೆ ಕರಗಿಸೋಕೆ ರೆಡಿಯಾಗಿ

First Published 20, Mar 2018, 4:06 PM IST
Do these exercises to reduce tummy
Highlights

'ಕೂತು ಕೂತು ಬಸುರಿಯಾದೆ' ಅನ್ನೋದಕ್ಕೆ ಇರೋದು ಒಂದೇ ಅರ್ಥ, ಹೊಟ್ಟೆ ದಪ್ಪಗಾಗಿದೆ ಅಂತ. ಯಾವ ಡ್ರೆಸ್ ಹಾಕ್ಕೊಂಡರೂ ಎದ್ದು ಕಾಣೋ ಹೊಟ್ಟೇನ ಕರಗಿಸೋಕೆ ಇಲ್ಲಿದೆ ಪಂಚ ಸೂತ್ರ.

'ಕೂತು ಕೂತು ಬಸುರಿಯಾದೆ' ಅನ್ನೋದಕ್ಕೆ ಇರೋದು ಒಂದೇ ಅರ್ಥ, ಹೊಟ್ಟೆ ದಪ್ಪಗಾಗಿದೆ ಅಂತ. ಯಾವ ಡ್ರೆಸ್ ಹಾಕ್ಕೊಂಡರೂ ಎದ್ದು ಕಾಣೋ ಹೊಟ್ಟೇನ ಕರಗಿಸೋಕೆ ಇಲ್ಲಿದೆ ಪಂಚ ಸೂತ್ರ.


- ಓಟ


ನಿಮ್ಮ ಕೆಲಸ, ಒತ್ತಡ, ಸಮಸ್ಯೆಗಳನ್ನೆಲ್ಲ ಗಂಟುಮೂಟೆ ಕಟ್ಟಿಡಿ. ಈಗಿಂದೀಗ್ಲೇ ಜಾಗಿಂಗ್ ಮಾಡೋ ಶಪಥ ಮಾಡಿ. ಕೆಲಸ, ಒತ್ತಡ ಯಾವಾಗ್ಲೂ ಇದ್ದಿದ್ದೇ. ಆದ್ರೆ ಒಮ್ಮೆ ಹೊಟ್ಟೆ ಭಾಗದಲ್ಲಿ ಬೊಜ್ಜು ಬೆಳೆಸಿಕೊಂಡರೆ ಆಮೇಲೆ ಇಳಿಸೋದು ಕಷ್ಟ. ಇದರಿಂದ ಅನೇಕ ದೈಹಿಕ ಸಮಸ್ಯೆಗಳು ಶುರುವಾಗುತ್ತವೆ. ಜೊತೆಗೆ ನೀನು ಇಷ್ಟು ದಪ್ಪಗಾಗಿದ್ದೆ ಅಂತ ತೋರಿಸೋಕೆ ಸ್ಟ್ರೆಚ್ ಮಾರ್ಕ್ ಬಂದುಬಿಟ್ಟಿರುತ್ತೆ. ಬೆಳಗ್ಗೆ ಅಥವಾ ಸಂಜೆ 40 ನಿಮಿಷ ಓಡಿದ್ರೆ ನಿಮ್ಮ ಹೊಟ್ಟೆಯ ಬೊಚ್ಚು ಸಂಪೂರ್ಣ ಇಳಿದುಹೋಗುತ್ತೆ ಅಂತಾರೆ ಫಿಟ್‌ನೆಸ್ ಎಕ್ಸ್‌ಪರ್ಟ್‌ಗಳು.

- ವಾಕಿಂಗ್ ಮಾಡಿ


ಬ್ರಿಸ್ಕ್ ವಾಕಿಂಗ್ ಮಾಡಿದ್ರೂ ಓಡಿದಷ್ಟೇ ಪರಿಣಾಮಕಾರಿಯಾಗಿರುತ್ತೆ. ವೇಗವಾಗಿ ನಡೆಯೋದನ್ನು ಅಭ್ಯಾಸ ಮಾಡಿಕೊಂಡರೆ ದೇಹಕ್ಕೆ ಫ್ಲೆಕ್ಸಿಬಿಲಿಟಿ ಬರುತ್ತೆ. ಬರೀ ಹೊಟ್ಟೆ ಮಾತ್ರವಲ್ಲ, ಇಡೀ ದೇಹದಲ್ಲೇ ಬೊಜ್ಜು ಹೇಳ ಹೆಸರಿಲ್ಲದಂತೆ ಮಾಯವಾಗಿಬಿಡುತ್ತೆ.

ಸೈಕ್ಲಿಂಗ್


ಸೈಕ್ಲಿಂಗ್ ಹವ್ಯಾಸ ಇರುವವರನ್ನು ಸೂಕ್ಷ್ಮವಾಗಿ ಗಮನಿಸಿ. ಅವರಿಗೆ ಬೊಜ್ಜಿನ ಸಮಸ್ಯೆ ಇರಲ್ಲ. ಕಿಲೋಮೀಟರ್ ಗಟ್ಟಲೆ ಪೆಡಲಿಂಗ್ ಮಾಡಿ ಅದರ ದೇಹದ ಬ್ಯಾಲೆನ್ಸಿಂಗ್ ಚೆನ್ನಾಗಿರುತ್ತೆ. ಹಾಗೇ ಎನರ್ಜಿಯೂ ಹೆಚ್ಚಿರುತ್ತೆ. ದಿನದಲ್ಲಿ ಒಂದಿಷ್ಟು ಹೊತ್ತು ಸೈಕ್ಲಿಂಗ್ ಮಾಡೋದ್ರಿಂದ ಹೊಟ್ಟೆಯ ಬೊಜ್ಜನ್ನು  ಕರಗಿಸಬಹುದು. ಮುಂದೆ ಬಾಗಿ ಸೈಕಲ್ ತುಳಿದರೆ ಇನ್ನೂ ಬೇಗ ಹೊಟ್ಟೆ ಕರಗುತ್ತೆ.

- ರಿವರ್ಸ್ ಕ್ರಂಚ್


ಜಿಮ್‌ಗೆ ಹೋದ್ರೆ ಈ ಎಕ್ಸರ್‌ಸೈಸ್ ಮಾಡುವ ಕ್ರಮ ತಿಳಿಯುತ್ತೆ. ಮನೆಯಲ್ಲೂ ಇದನ್ನು ಪ್ರಯತ್ನಿಸಬಹುದು. ನೆಲದ ಮೇಲೆ ಅಂಗಾತ ಮಲಗಿ. ಕಾಲನ್ನು ಎತ್ತರದಲ್ಲಿ ಚಾಚಿ. ಕೈಗಳನ್ನು ಭುಜಗಳ ಎರಡೂ ಬದಿಯಲ್ಲಿದೆ. ನಿಧಾನಕ್ಕೆ ಮುಂದಕ್ಕೆ ಬಾಗಿ ಉಸಿರು ಹೊರಹಾಕಿ. ಉಸಿರೆಳೆದುಕೊಳ್ಳುತ್ತಾ ಮತ್ತೆ ಹಿಂದಕ್ಕೆ ಬಾಗಿ. ಇದನ್ನು ಹೆಚ್ಚೆಚ್ಚು ಮಾಡಿದರೆ ಹೊಟ್ಟೆಯ ಬೊಜ್ಜು ಕರಗುತ್ತದೆ.

- ಯೋಗವೂ ಆಗುತ್ತೆ

ಯೋಗದ ಕೆಲವು ಆಸನಗಳು ಹೊಟ್ಟೆ ಕರಗಿಸಲು ಹೇಳಿ ಮಾಡಿಸಿದಂತಿವೆ. ಅವುಗಳ ಬಗ್ಗೆ ಪರಿಣಿತರಿಂದ ತಿಳಿದುಕೊಂಡು ನಿಯಮಿತವಾಗಿ ಪಾಲಿಸಿಕೊಂಡು ಬನ್ನಿ. ಅದೂ ಅಲ್ಲದೇ ಮಾನಸಿಕ ನೆಮ್ಮದಿಯೂ ಸಿದಿಟಛಿಯಾಗುತ್ತದೆ. ಒಂದೇ ಕೆಲಸದಿಂದ ಎರಡೆರಡು ಉಪಯೋಗ ನಿಮಗೆ ದೊರೆಯುತ್ತದೆ.

loader