ಡಿಸ್ಕೌಂಟ್‌ನಲ್ಲಿ 20 ಡಾಲರ್‌ ಶೂ 600 ಡಾಲರ್‌ಗೆ ಸೇಲ್‌!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Dec 2018, 1:03 PM IST
Discount Shoe Brand Opens Fake Luxury Store Sold 20 dollars Shoes For 600 dollars
Highlights

ಅಮೆರಿಕದಲ್ಲಿ ಡಿಸ್ಕೌಂಟ್‌ ದರಕ್ಕೆ ಶೂಗಳನ್ನು ಮಾರಾಟ ಮಾಡುವ ಕಂಪನಿಯೊಂದು ಪ್ರಸಿದ್ಧ ಬ್ರ್ಯಾಂಡ್‌ ಹೆಸರಿನಲ್ಲಿ ಅಂಗಡಿ ತೆರೆದು ತನ್ನ ಶೂಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿ ಭರ್ಜರಿ ಲಾಭಗಳಿಸಿದೆ.

ನರಿಗೆ ಹುಲಿ ವೇಷ ಹಾಕಿದ ಮಾತ್ರಕ್ಕೆ ನರಿಯೇನೂ ಹುಲಿಯಾಗುವುದಿಲ್ಲ. ಇದೀಗ ಈ ಮಾತೇಕೆ ಅಂದರೆ, ಅಮೆರಿಕದಲ್ಲಿ ಡಿಸ್ಕೌಂಟ್‌ ದರಕ್ಕೆ ಶೂಗಳನ್ನು ಮಾರಾಟ ಮಾಡುವ ಕಂಪನಿಯೊಂದು ಪ್ರಸಿದ್ಧ ಬ್ರ್ಯಾಂಡ್‌ ಹೆಸರಿನಲ್ಲಿ ಅಂಗಡಿ ತೆರೆದು ತನ್ನ ಶೂಗಳನ್ನು ದುಬಾರಿ ದರಕ್ಕೆ ಮಾರಾಟ ಮಾಡಿ ಭರ್ಜರಿ ಲಾಭಗಳಿಸಿದೆ.

ಪೇಲೆಸ್‌ ಕಂಪನಿಯ ಶೂಗಳು ಸಾಮಾನ್ಯವಾಗಿ ರಿಯಾಯಿತಿ ದರದಲ್ಲಿ 20 ರಿಂದ 50 ಡಾಲರ್‌(1395 ರು.ನಿಂದ 3488 ರು.)ಗೆ ಸಿಗುತ್ತವೆ. ಆದರೆ, ಅದೇ ಶೂಗಳನ್ನು ಪಾಲೆಸ್ಸಿ ಬ್ರ್ಯಾಂಡ್‌ ಶೋ ರೂಮ್‌ನಲ್ಲಿ ಇಟ್ಟು ಭಾರೀ ಪ್ರಚಾರ ನೀಡಲಾಗಿತ್ತು. ಜನರು ಡಿಸ್ಕೌಂಟ್‌ ಆಸೆಗೆ ಶೂ ಖರೀದಿಸಲು ಮುಗಿಬಿದ್ದಿದ್ದು, 20 ಡಾಲರ್‌ಗೆ ಸಿಗುವ ಶೂಗಳನ್ನು 600 ಡಾಲರ್‌(41862 ರು.)ಕೊಟ್ಟು ಖರೀದಿಸಿದ್ದಾರೆ.

loader