Asianet Suvarna News Asianet Suvarna News

ಮೌತ್ ವಾಷ್ ಅತಿಯಾದರೆ ಬರುತ್ತೆ ಡಯಾಬಿಟಿಸ್!

ಸುಖಾ ಸುಮ್ಮನೆ ಬಾಯಿ ವಾಸನೆ ಮಾಡಿಕೊಂಡಿರುವ ಬದಲು, ಮೌತ್ ವಾಷ್ ಬಳಸಬಹುದು. ಆದರೆ, ಇದನ್ನು ಬಳಸಲೂ ತನ್ನದೇ ಆದ ರೀತಿ ನೀತಿಗಳಿವೆ. ಬೇಕಾಬಿಟ್ಟಿ ಬಳಸಿದರೆ ಆರೋಗ್ಯಕ್ಕೆ ಕುತ್ತು ಗ್ಯಾರಂಟಿ. ಏನಾಗುತ್ತೆ ಇದರಿಂದ?

Disadvantages using excess of Mouth wash
Author
Bengaluru, First Published Feb 25, 2019, 3:38 PM IST

ಮೌತ್‌ವಾಷ್ ಅನ್ನು ಬಾಯಿ ದುರ್ಗಂಧ ನಿವಾರಿಸಲು ಹಾಗೂ ಇತರೆ ಸಮಸ್ಯೆ ನಿವಾರಿಸಲು ಬಳಸಲಾಗುತ್ತದೆ.  ಆದರೆ ಈ ಮೌತ್ ವಾಷ್ ಆರೋಗ್ಯಕ್ಕೆ ಉತ್ತಮವೇ? ಮೌತ್ ವಾಷ್‌ನಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್ ತತ್ವ ಇರುತ್ತದೆ. ಇದು ಬಾಯಿಯಲ್ಲಿರುವ ಮೈಕ್ರೋಬ್ಸ್ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಪಚನ ಕ್ರಿಯೆ ಮೇಲೂ ದುಷ್ಪರಿಣಾಮ ಬೀರೋ ಸಾಧ್ಯತೆ ಇದೆ. ಜೊತೆಗೆ ಗಂಭೀರ ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಬೇರೆ ಏನೆಲ್ಲಾ ಸಮಸ್ಯೆ ಇವೆ ಅನ್ನೋ ಡಿಟೇಲ್ಸ್ ಇಲ್ಲಿದೆ... 

Disadvantages using excess of Mouth wash

  • ಒಂದು ವರದಿಯಂತೆ ಪ್ರತಿ ದಿನ ಎರಡು ಬಾರಿ ಮೌತ್ ವಾಷ್ ಬಳಸುವುದರಿಂದ ಜನರಿಗೆ ಡಯಾಬಿಟಿಸ್ ಸಮಸ್ಯೆ ಉಂಟಾಗುವ ಸಾಧ್ಯತೆ ಶೇ. 55ರಷ್ಟಿದೆ. 
  • ಮೌತ್‌ವಾಷ್ ಬಳಕೆಯಿಂದ ಆರೋಗ್ಯಕ್ಕೆ ಲಾಭ ಕಡಿಮೆ ಮತ್ತು ಸಮಸ್ಯೆ ಹೆಚ್ಚು. ಈ ಸಂಶೋಧನೆಗಾಗಿ ಸುಮಾರು 1,206  ಬೊಜ್ಜಿರುವವರನ್ನು ಬಳಸಿಕೊಂಡಿದ್ದರು. ಅವರ ವಯಸ್ಸು 40 ರಿಂದ 65ರ ಒಳಗಿತ್ತು. ಇವರಿಗೆ ಯಾವುದೇ ರೀತಿಯ ಡಯಾಬಿಟಿಸ್ ಸಮಸ್ಯೆ ಇರಲಿಲ್ಲ. 
  • ಇವರಲ್ಲಿ ಶೇ.43 ಜನರಿಗೆ ದಿನದಲ್ಲಿ ಒಂದು ಬಾರಿ ಮೌತ್‌ವಾಷ್ ಬಳಸಲು ಸೂಚಿಸಲಾಗಿತ್ತು. ಅಲ್ಲದೆ ಶೇ.22 ಜನರಿಗೆ ದಿನದಲ್ಲಿ ಎರಡು ಬಾರಿ ಮೌತ್‌ವಾಷ್ ಬಳಸಲು  ಹೇಳಿದರು. ದಿನದಲ್ಲಿ ಎರಡು ಬಾರಿ ಮೌತ್‌ವಾಷ್ ಬಳಸುವವರಲ್ಲಿ ಡಯಾಬಿಟಿಸ್ ಉಂಟಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬಂತು.

ಆಗಾಗ ಮೌತ್‌ವಾಷ್ ಬಳಸೋ ಮುನ್ನ ಇರಲಿ ಎಚ್ಚರ. ಹೆಚ್ಚಾದರೆ ಅಮೃತವೂ ವಿಷವಾಗುತ್ತೆ ಎಂಬುವುದು ನೆನಪಿರಲಿ.

ಮೌತ್‌ವಾಶ್ ಬಳಸೋದು ಹೇಗೆ?

Follow Us:
Download App:
  • android
  • ios