ಕಟಕ ರಾಶಿಯವರಿಗಿಂದು ಗಜಕೇಸರಿ ಯೋಗ : ಉಳಿದ ರಾಶಿ ..?
ಮೇಷ : ಸಪ್ತಮದ ಗುರುವಿನಿಂದಾಗಿ ದಾಂಪತ್ಯದಲ್ಲಿ ಸಾಮ್ಯತೆ, ಹೊಂದಾಣಿಕೆ ಸಾಧ್ಯತೆ, ಕಳೆದು ಹೋಗಿದ್ದ ನಂಟು ಮತ್ತೆ ಬೆಸೆಯಲಿದೆ, ಐಕ್ಯಮತ್ಯ ಮಂತ್ರಗಳ ಪಾರಾಯಣ ಮಾಡಿಸಿದರೆ ನೆಮ್ಮದಿ
ವೃಷಭ : ಆರೋಗ್ಯ ಬಾಧೆ ಕೆಲವೇ ದಿನಗಳಲ್ಲಿ ಸರಿಹೋಗಲಿದೆ, ಕೆಲವರಿಗೆ ಅನುಕೂಲಕರ ದಿನವೂ ಆಗಿದೆ.
ಮಿಥುನ : ರಾಶಿಯ ಅಧಿಪತಿ ಕರ್ಮ ಸ್ಥಾನದಲ್ಲಿದ್ದಾನೆ, ಆದರೆ ನೀಚನಾಗಿದ್ದಾನೆ, ಕಿರಿಕಿರಿ ಉಂಟಾಗಬಹುದು. ಗಂಧರ್ವರ ಆರಾಧನೆ ಮಾಡಿ
ಕಟಕ : ರಾಶ್ಯಾಧಿಪತಿ ಗುರುಯುತನಾಗಿರುವುದರಿಂದ ಗಜಕೇಸರಿ ಯೋಗ, ಸುಖ ಸಮೃದ್ಧಿ, ಶುಭದಿನ
ಸಿಂಹ : ಸಹೋದರ-ಸಹೋದರಿಯರಿಂದ ಉತ್ತಮ ಪ್ರತಿಕ್ರಿಯೆ, ಪಂಚಮ ಶನಿ ಕಾಟ ಇದ್ದೇ ಇದೆ, ಶನೈಶ್ಚರ ಮಂತ್ರ ಪಠಿಸಿ
ಕನ್ಯಾ : ಅರೋಗ್ಯ ಕ್ಷೀಣತೆ, ಅನಾನುಕೂಲ ವಾತಾವರಣ, ಸಾಹಸದಲ್ಲಿ ಸೋಲು. ಸಮಾನ್ಯದಿನ
ತುಲಾ : ಧೈರ್ಯದಿಂದ ಕಾರ್ಯ ಮುನ್ನಡೆಸಲಿದ್ದೀರಿ, ತಾಯಿಯಿಂದ ಸಹಕಾರ ದೊರೆಯಲಿದೆ, ಮಹಾಲಕ್ಷ್ಮಿಗೆ ತಾವರೆ ಹೂವನ್ನು ಸಮರ್ಪಿಸಿ
ವೃಶ್ಚಿಕ : ಸಹೋದರರಿಂದ ಹೆಚ್ಚಿನ ಸಹಾಯ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ದಿನ, ನಾಗಯಕ್ಷಿಯ ಆರಾಧನೆ ಮಾಡಿ
ಧನಸ್ಸು : ಸ್ವಂತ ವ್ಯಾಪಾರಿಗಳಿಗೆ ಲಾಭದ ದಿನ, ದಾಂಪತ್ಯದಲ್ಲಿ ಮಾತಿನ ಸಮರ, ಅರ್ಧನಾರೀಶ್ವರ ದರ್ಶನ ಮಾಡಿ
ಮಕರ : ಹಣಕಾಸಿನ ತೊಂದರೆ, ಮಾತಿನಿಂದ ಕಾರ್ಯ ವಿಘ್ನ, ಸಾಧಾರಣ ದಿನ, ಕಾಲಭೈರವ ಸ್ತೋತ್ರ ಪಠಿಸಿ
ಕುಂಭ : ಗುರು ದೃಷ್ಟಿಯಿಂದಾಗಿ ಆರೋಗ್ಯದಲ್ಲಿ ಚೇತರಿಕೆ, ಕಾಲಹರಣ ಮಾಡದೆ ಕಾರ್ಯ ಸಾಧಿಸಿ, ರುದ್ರಾಭಿಷೇಕ ಮಾಡಿಸಿದವರಿಗೆ ಇಷ್ಟಾರ್ಥ ಸಿದ್ಧಿ
ಮೀನ : ಗುರುಬಲವಿಲ್ಲದ ಕಾರಣ ಗುರುಚರಿತ್ರೆ ಪಾರಾಯಣ ಮಾಡಿ, ಹೆಚ್ಚು ವಾದಮಾಡುವುದು ಬೇಡ, ತಾಳ್ಮೆ ಇರಲಿ
