ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತೆ..?

Dina Bhavishya May 5
Highlights

ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತೆ..?

ಮೇಷ
ಹಳೆಯ ನೆನಪಲ್ಲಿ ಮರುಗದೆ ಭವಿಷ್ಯವನ್ನು
ಯೋಚಿಸಿ. ಸ್ನೇಹಿತರ ಸಹಕಾರ ನಿಮಗಿದೆ.
ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಿ.

ವೃಷಭ
ನಿಮ್ಮನ್ನು ದ್ವೇಷಿಸುವರೂ ಸ್ನೇಹಿತರಾಗುತ್ತಾರೆ.
ಹಿರಿಯರ ಸ್ಮರಣೆ ಒಳಿತು. ನೆಮ್ಮದಿಗಾಗಿ
ಹುಡುಕಾಟ ನಡೆಸದಿರಿ. ಮೌನ ಒಳ್ಳೆಯದು.

ಮಿಥುನ
ನಿಮ್ಮ ಉದ್ಯೋಗದ ವಿವಾದಗಳು ಇಂದು
ಬಗೆಹರಿಯಲಿದೆ. ಜೀವನದಲ್ಲಿ ಮತ್ತಷ್ಟು
ಯಶಸ್ಸು ಸಿಗಲಿದೆ. ಶ್ರಮಜೀವಿಗಳು ನೀವು.

ಕಟಕ
ವಿದ್ಯಾರ್ಥಿಗಳಿಗೆ ಇದು ಓದುವ ಸಮಯ.
ಅದರ ಕಡೆಗಷ್ಟೇ ಗಮನವಿರಲಿ. ಎಂತಹ
ಕಷ್ಟಗಳು ಬಂದರೂ ಎದುರಿಸಲು ಸಜ್ಜಾಗಿರಿ.

ಸಿಂಹ
ಸೋಮಾರಿತನ ಮೈಗೂಡಿಸಿಕೊಳ್ಳದೇ ಜಾಗೃತ
ರಾಗಿರಿ. ನಿಮ್ಮಲ್ಲಿ ಈಗಿರುವ ಏಕಾಗ್ರತೆಯನ್ನು
ಸರಿಯಾಗಿ ಬಳಸಿಕೊಂಡರೆ ಉತ್ತಮ ಫಲವಿದೆ. 

ಕನ್ಯಾ
ನಿಮ್ಮ ಕಟು ಮಾತು ನಿಮ್ಮಪ್ಪನಲ್ಲಿ ಒಂಚೂರು
ನೋವನ್ನುಂಟು ಮಾಡಿದೆ. ನೀವು ಬೇಕಂತ
ಅಂದದ್ದಲ್ಲ. ಅವರಲ್ಲಿ ಕ್ಷಮೆ ಕೇಳಿ ಬಿಡಿ.

ತುಲಾ
ನಿಮ್ಮ ಮನಸ್ಸು ಡೋಲಾಯಮಾನವಾಗಿದೆ.
ಸದಾ ಗ್ರಹಗತಿಯನ್ನೇ ಗುಣಿಸಿ ಎಣಿಸುವ
ತುಲಾ ಗುಣದಲ್ಲೇ ಇರದಿರಿ. ಈ ದಿನ ನಿಮ್ಮದೆ.

ವೃಶ್ಚಿಕ
ಸಂಬಂಧಿಕರ ಆಗಮನದಿಂದ ಮನಃಶಾಂತಿ
ಲಭಿಸಲಿದೆ. ಅವರು ನಿಮಗೆ ಬೆಂಬಲವಾಗಿ
ನಿಲ್ಲುವರು. ಧನಾತ್ಮಕವಾಗಿ ಆಲೋಚಿಸಿರಿ.

 ಧನುಸ್ಸು
ಮಾಡಿದ್ದೆಲ್ಲವೂ ಒಳಿತಾಗಲಿದೆ. ಆತುರ ಬೇಡ.
ಯೋಜನೆ, ಆಲೋಚನೆಗಳು ಒಳ್ಳೆಯದಿರಲಿ.
ನಿಮ್ಮ ನಿರ್ಧಾರಗಳನ್ನು ಪರಿಶೀಲಿಸಿರಿ.

ಮಕರ
ಹೆಚ್ಚಿನ ಒತ್ತಡಗಳ ಕೆಲಸವು ನಿಮ್ಮಲ್ಲಿ ಹೆದರಿಕೆ
ಮೂಡಿಸಬಹುದು. ನಿಂದೆ ಎದುರಿಸಬೇಕಾಗ
ಬಹುದು. ಧೈರ್ಯಗೆಡದೇ ಮುಂದಡಿ ಇಡಿ.

ಕುಂಭ
ಹೊಟ್ಟೆಯ ಭಾದೆಯಿದೆ. ವಾತಾವರಣದ
ಪ್ರಭಾವ. ನಿಮ್ಮತನವನ್ನು ಕಳೆದುಕೊಳ್ಳದಿರಿ.
ಗೊಂದಲಗಳಿಂದ ದೂರವಿದ್ದರೆ ಕ್ಷೇಮ.

ಮೀನ
ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ.
ಅದರ ಮೂಲ ಇಂದಿನಿಂದಲೇ ಆರಂಭಗೊಳ್ಳಲಿದೆ. ಗೆಳೆಯರು ಸಹಾಯ ನಿಮಗಿದೆ

loader