ಶುಭೋದಯ ಹೇಗಿದೆ ಇಂದಿನ ನಿಮ್ಮ ದಿನ..?

Dina Bhavishya May 29
Highlights

ಶುಭೋದಯ ಹೇಗಿದೆ ಇಂದಿನ ನಿಮ್ಮ ದಿನ..?

ಮೇಷ
ನಿಮ್ಮ ನೆಮ್ಮದಿಯು ದ್ವಿಗುಣವಾಗಲಿದೆ. ಅದಕ್ಕೆ
ಬಲವಾದ ಕಾರಣ ನಿಮ್ಮ ನೆಚ್ಚಿನವರು ನೀವು
ಇದ್ದಲ್ಲಿಗೇ ಬರಲಿದ್ದಾರೆ. ಖುಷಿಯ ದಿನವಿದು.

ವೃಷಭ
ದೂರದ ನೆಂಟರು ನಿಮ್ಮ ಮಗಳಿಗೆ ಒಳ್ಳೆಯ
ವರನನ್ನು ಹುಡುಕಿದ್ದಾರೆ. ಆ ಸಂಬಂಧದ
ಮಾತುಕತೆಯು ಇಂದಾಗುವ ಲಕ್ಷಣವಿದೆ.

ಮಿಥುನ
ಪೇಂಟ್ ಮಾರಾಟದವರಿಗೆ ಒಳ್ಳೆಯ ದಿನ.
ಆದಾಯವು ಹೆಚ್ಚು. ಹಳೆಯ ಬಾಕಿಗಳು ಈ
ದಿನ ನಿಮ್ಮ ಕೈ ಸೇರಲಿವೆ. ಯೋಚನೆಗೆ ಬ್ರೇಕ್!

ಕಟಕ
ಮದುವೆಗಾಗಿ ಕನ್ಯೆಯನ್ನು ಹುಡುಕುವವರಿಗೆ
ಆಶಾಭಾವ ಹೆಚ್ಚಿಸುವ ಸುದ್ದಿಗಳು ಮುಟ್ಟಲಿವೆ.
ನಿಮ್ಮ ಹಣಕಾಸಿನ ಸಮಸ್ಯೆ ದೂರಾಗಲಿದೆ.

ಸಿಂಹ
ಕಲಾಲೋಕದಲ್ಲಿ ದುಡಿಯುವವರಿಗೆ ಹೊಸ
ಹೊಸ ಐಡಿಯಾಗಳು ಬರಲಿದೆ. ಅವುಗಳು
ಸಾಕಾರಗೊಂಡಲ್ಲಿ ಸಾಕಷ್ಟು ಹಣವು ಬರಲಿದೆ.

ಕನ್ಯಾ
ರಾಜಕಾರಣಿಗಳಿಗೆ ಇನ್ನೂ ನೆಮ್ಮದಿ ಸಿಕ್ಕಿಲ್ಲ.
ಆದರೆ ಇಂದು ನೀವು ಅದರತ್ತ ಸಾಗಲಿದ್ದೀರಿ.
ಶುಭ ಸೂಚನೆಗಳು ಎದುರುಗೊಳ್ಳುವ ದಿನ.

ತುಲಾ
ಆದಾಯವು ಹೆಚ್ಚಾಗಿದ್ದರೂ ಅದಕ್ಕೆ ತಕ್ಕ
ಖರ್ಚುಗಳೂ ಹೆಚ್ಚಾಗಿದ್ದವು. ಆದರೆ ಈ
ತುಲಾ ದಿನದಿಂದ ಖರ್ಚುಗಳು ಅಷ್ಟಾಗವು.

ವೃಶ್ಚಿಕ
ಮನೆಯ ಹಿರಿಯ ಆರೋಗ್ಯವು ಯಥಾಸ್ಥಿತಿ
ಯಲ್ಲಿದೆ. ಏರುಪೇರು ಆಗದಿದ್ದರೂ ಆಗಾಗ
ಅವರನ್ನು ಹುರುಪಿನಲ್ಲಿರಿಸಿ. ಖುಷಿ ಪಡಿಸಿರಿ. 

ಧನುಸ್ಸು
ಇಂದು ಹೊಸ ರುಚಿಯನ್ನು ಸವಿದ ಕಾರಣ
ಆರೋಗ್ಯದಲ್ಲಿ ಏರುಪೇರು. ಗಂಡನಿಗೆ ಹೊಸ
ರುಚಿ ತಿನ್ನಿಸುವ ಭರದಲ್ಲಷ್ಟೇ ಇದು ನಡೆದಿದೆ.

ಮಕರ
ಪುಟ್ಟ ಮಕ್ಕಳಂತಹ ಮನಸ್ಸು ನಿಮ್ಮದು.
ಯಾವುದೇ ಮೋಸದ ಬುದ್ಧಿ ನಿಮ್ಮಲ್ಲಿ ಇಲ್ಲ.
ಆದರೆ ಕೋಪವು ಮುಂದಿದೆ. ತಾಳ್ಮೆ ಆಗತ್ಯ.

ಕುಂಭ
ಕಷ್ಟದ ದಿನವು ಎಂದೆಂದೂ ಇರದು. ಅದರ
ಬಗ್ಗೆ ನಿಮಗೂ ಗೊತ್ತು. ಆದರೂ ನಿಮ್ಮ
ಮುಂಗೋಪ ನಿಮ್ಮನ್ನು ಕಾಡಲಿದೆ. ಜೋಕೆ!

ಮೀನ 
ನಿಮಗೆ ಬಣ್ಣದ ಮೋಹ ಹೆಚ್ಚಾಗಲಿದೆ.
ಸೂಟೂ-ಬೂಟೂ ಹಾಕಬೇಕೆಂಬ ಬಯಕೆ
ಆಸೆಯು ಇಂದು ನೆರವೇರುವ ಲಕ್ಷಣವಿ

loader