ಈ ರಾಶಿಯವರಿಗಿಂದು ಒತ್ತಡದ ದಿನ : ಉಳಿದ ರಾಶಿ ಹೇಗಿದೆ..?

life | Monday, May 28th, 2018
Suvarna Web Desk
Highlights

ಈ ರಾಶಿಯವರಿಗಿಂದು ಒತ್ತಡದ ದಿನ : ಉಳಿದ ರಾಶಿ ಹೇಗಿದೆ..?

ಈ ರಾಶಿಯವರಿಗಿಂದು ಒತ್ತಡದ ದಿನ : ಉಳಿದ ರಾಶಿ ಹೇಗಿದೆ..?

ಮೇಷ
ಒತ್ತಡವು ಹೆಚ್ಚಲಿದೆ. ಆದರೂ ನಿಮ್ಮಲ್ಲಿನ
ಸಾಮರ್ಥ್ಯಕ್ಕೆ ಇದೇನು ಅಷ್ಟು ದೊಡ್ಡದಲ್ಲ.
ನಿಭಾಯಿಸಲಿದ್ದೀರಿ. ಧೈರ್ಯವೇ ಮುಖ್ಯ.

ವೃಷಭ
ಸಹಕಾರಿ ಕ್ಷೇತ್ರದಲ್ಲಿ ನಿಮಗೆ ಘನತೆ ಮತ್ತು
ಗೌರವ ಲಭಿಸುತ್ತದೆ. ಹೊಸದಾದ ಯೋಜನೆ
ಹಾಕಲಿದ್ದೀರಿ. ಅದು ಸಾಕಾರವೂ ಆಗಲಿದೆ.

ಮಿಥುನ
ಮಾನಸಿಕ ಒತ್ತಡವು ನಿಮ್ಮ ಜೀವನದ ಮೇಲೆ
ಪ್ರಭಾವ ಬಿರುತ್ತದೆ. ಆರ್ಥಿಕ ಪರಿಸ್ಥಿತಿಯು
ಉತ್ತಮವಾಗುವ ದಿನವು ಇದಾಗಲಿದೆ.

ಕಟಕ
ಗ್ರಹಗಳ ವ್ಯತ್ಯಾಸದಿಂದ ಇಂದಿನ ದಿನ ಸ್ವಲ್ಪ
ಖುಷಿ ಇದೆ. ಅದನ್ನು ಹೆಚ್ಚು ಮಾಡುವಂತಹ
ಹೊಸ ಸುದ್ದಿಯೊಂದು ನಿಮ್ಮ ಕಿವಿ ಮುಟ್ಟಲಿದೆ.

ಸಿಂಹ
ಪ್ರವಾಸ ಕೈಗೊಳ್ಳುವ ಸಮಯ. ಮನೆಯಲ್ಲಿ
ಸಂಭ್ರಮದ ವಾತಾವರಣವು ಏರ್ಪಟ್ಟು ಹೆಚ್ಚು
ಆನಂದಮಯವಾಗಲಿದೆ. ಸಂಭ್ರಮದ ದಿನ.

ಕನ್ಯಾ
ಇಂದು ದೂರದ ಪ್ರಯಾಣವನ್ನು ಮಾಡುವ
ಯೋಗವಿದೆ. ಆದರೆ ಅದರಿಂದ ನಿಮ್ಮ ಮನದ
ತುಮುಲ ಜಾಸ್ತಿಯಾಗಲಿದೆ. ಜಾಗ್ರತರಾಗಿರಿ.

ತುಲಾ
ಮನೆಯಲ್ಲಿ ನೆಮ್ಮದಿ. ವೈವಾಹಿಕ ಜೀವನವು
ಎಲ್ಲ ರೀತಿಯ ಸುಖ-ಸಂತೋಷಗಳನ್ನೂ
ತುಲಾ ನೀಡುತ್ತದೆ. ಈ ದಿನ ಎಲ್ಲವೂ ಒಳಿತಾಗಲಿದೆ.

ವೃಶ್ಚಿಕ
ದೇಹಾರೋಗ್ಯ ಕೈಕೊಡುವ ಸಂಭವ. ಹೆಚ್ಚು
ದ್ರವಾಹಾರಗಳನ್ನು ಸೇವಿಸಿ. ಹೊರಗಡೆ
ಹೊರಡುವಾಗ ಮುಂಜಾಗ್ರತೆಯನ್ನು ವಹಿಸಿ. 

ಧನುಸ್ಸು
ಸರಕಾರಿ ಒಪ್ಪಂದಗಳನ್ನು ಪಡೆಯುವಿರಿ.
ನಿಮ್ಮ ಪ್ರೇಮ ಜೀವನಕ್ಕೆ ಅದ್ಭುತವಾದ
ಹೊಸ ತಿರುವೊಂದು ಈ ದಿನವೇ ಸಿಗಲಿದೆ

ಮಕರ
ನಿಮ್ಮದಲ್ಲದ ತಪ್ಪಿಗೆ ನೀವು ದೂಷಣೆಗೆ ಗುರಿ
ಯಾಗುತ್ತೀರಿ. ಯಾವುದಕ್ಕೂ ತಾಳ್ಮೆಯಿರಲಿ.
ಅವರಿಗೆ ನಿಜ ಏನೆಂದು ಕ್ರಮೇಣ ತಿಳಿಯುತ್ತೆ.

ಕುಂಭ
ಕೃಷಿಕರೂ ಆದ ನೀವು ಯೋಚಿಸಿ ನಿರ್ಧಾರ
ಗಳನ್ನು ತೆಗೆದುಕೊಂಡರೆ ಇದು ಒಳ್ಳೆಯ
ದಿನವೇ ಆಗಲಿದೆ. ತಾಳ್ಮೆಯಿಂದ ವರ್ತಿಸಿರಿ.

ಮೀನ 
ದುಡ್ಡು-ಕಾಸಿನ ವ್ಯವಹಾರದಲ್ಲಿ ಪ್ರಗತಿಯಿದೆ.
ಮಾನಸಿಕ ತೊಳಲಾಟಕ್ಕೆ ಸ್ವಲ್ಪ ಬ್ರೇಕ್ ಸಿಗಲಿದೆ.
ಮನೆಯಲ್ಲಿನ ಹಿರಿಯರ ಕಡೆಗೆ ಗಮನವಿರಲಿ.

Comments 0
Add Comment

    Related Posts