ಯಾರ ಪಾಲಿಗೆ ಹೇಗಿದೆ ಇಂದಿನ ದಿನ..?

Dina Bhavishya May 22
Highlights

ಹೇಗಿದೆ ಇಂದಿನ ಭವಿಷ್ಯ, ತಿಳಿಯಿರಿ ರಾಶಿ ಭವಿಷ್ಯದ ಮೂಲಕ

ಮೇಷ
ನಿಮ್ಮ ವಾಟ್ಸ್‌ಆ್ಯಪ್‌ಗೆ ಬಂದ ಮೆಸೇಜ್
ನಿಮ್ಮಲ್ಲಿ ಆತಂ ಮೂಡಿಸಲಿದೆ. ಅದೇನು
ಅಂತಹ ಮುಖ್ಯ ವಿಷಯವಲ್ಲ. ಮರೆತುಬಿಡಿ.

ವೃಷಭ
ಬಹು ದೊಡ್ಡ ಕೆಲಸವೊಂದಕ್ಕೆ ಕೈ ಹಾಕಲಿದ್ದೀರಿ.
ಬದಲಾವಣೆಯ ನಿರೀಕ್ಷೆಯಲ್ಲಿದ್ದರೂ ಆತುರ
ಪಡದೆ ತಾಳ್ಮೆಯಿಂದ ಅದನ್ನು ನಿಭಾಯಿಸಿರಿ.

ಮಿಥುನ
ಆಸ್ತಿ ವಿವಾದಗಳಿಗೆ ತೆರೆ ಬೀಳುವ ಕಾಲವು ಈಗ
ಬಂದಿದೆ. ನಿಮ್ಮ ಕೊಡುವ ಕೈ ಮುಂದಾಗಲಿ.
ಕೆಲಸದಲ್ಲಿ ಆಸಕ್ತಿ ಇದ್ದರೆ ಎಲ್ಲವೂ ಒಳಿತೇ!

ಕಟಕ
ಇತ್ತೀಚೆಗೆ ನಿಮ್ಮ ಜೀವನವು ಏರುಪೇರಾಗು
ತ್ತಿದೆ ಎಂಬ ಭಾವ ನಿಮ್ಮದು. ಎಲ್ಲರ ಜೀವನ
ದಲ್ಲೂ ಇದ್ದದ್ದೇ ಎನ್ನುವುದನ್ನು ತಿಳಿಯಿರಿ.

ಸಿಂಹ
ಕಲಹ-ವಿರಸಗಳು ಕಡಿಮೆಯಾಗುವ
ದಿನಗಳು ತುಂಬಾ ಹತ್ತಿರದಲ್ಲಿದೆ. ನಿಮ್ಮ
ಬಂಧುಗಳ ಸಹಕಾರವೂ ಹೆಚ್ಚಾಗಲಿದೆ

ಕನ್ಯಾ
ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಲು
ಇದು ಸೂಕ್ತ ಸಮಯ. ನಿರುದ್ಯೋಗಿಗಳಿಗೆ
ನೌಕರಿ ಸಿಗುವ ಸಂಭವವು ಈಗ ಹೆಚ್ಚಾಗಿದೆ.

ತುಲಾ
ಗುರಿ ಸಾಧಿಸುವುದಕ್ಕೆ ಇಂದು ಸೂಕ್ತ ದಿನ.
ಸಹಪಾಠಿಗಳ ಮಾತುಗಳಿಂದ ಸ್ವಲ್ಪ ಕ್ಲೇಷ
ತುಲಾ ಕ್ಕೊಳಗಾಗಬೇಕಾಗಬಹುದು. ಚಿಂತಿಸದಿರಿ.

ವೃಶ್ಚಿಕ
ದೀರ್ಘಕಾಲದ ಸಮಸ್ಯೆಗೆ ಪರಿಹಾರ
ದೊರೆಯಲಿದೆ. ಈಗ ನಿಮ್ಮ ಫಲಾಫಲಗಳು
ಉತ್ತಮ. ಹೊಸಬರು ಸ್ನೇಹಿತರಾಗುತ್ತಾರೆ. 

ಧನುಸ್ಸು
ಕಷ್ಟದ ದಿನಗಳು ನಿಮ್ಮನ್ನು ಮುತ್ತಿದ್ದರೂ ನಿಮ್ಮ
ಮನಸ್ಥೈರ್ಯದಿಂದ ನೀವೇ ಗೆಲ್ಲುತ್ತಿದ್ದೀರಿ.
ಯಾವುದೇ ನಿರ್ಧಾರಕ್ಕೂ ಮುನ್ನ ಯೋಚಿಸಿ.

ಮಕರ
ಪಿತ್ರಾರ್ಜಿತ ಆಸ್ತಿಯ ಮಾತುಕತೆಗಳು
ನಡೆಯಲಿವೆ. ಆರೋಗ್ಯದ ವಿಷಯದಲ್ಲಿ
ಆತಂಕವು ಸಲ್ಲದು. ನೆಮ್ಮದಿಯ ದಿನ.

ಕುಂಭ
ಆತಂಕಪಡುವ ಅಗತ್ಯವಿಲ್ಲ. ಎಲ್ಲವೂ
ನಿಮ್ಮಂತೆಯೇ ನಡೆಯಲಿದೆ. ಅಲ್ಲದೇ
ಉತ್ತಮ ಫಲಿತಾಂಶವೂ ಸಿಗುವ ದಿನವಿದು.

ಮೀನ
ಕುಟುಂಬಸ್ಥರೊಂದಿಗೆ ಹೆಚ್ಚಿನ ಸಮಯ
ಕಳೆಯುವಿರಿ. ಸಾಂಸ್ಕೃತಿಕ ಚಟುವಟಿಕೆಯಲ್ಲಿ
ಭಾಗವಹಿಸುವುದರಿಂದ ಅನುಕೂಲವಾಗಲಿದೆ.

loader