ದಿನ ಭವಿಷ್ಯ : ಈ ದಿನ ಯಾರ ಪಾಲಿಗೆ ಹೇಗಿದೆ..?

Dina Bhavishya May 14
Highlights

ಇಂದಿನ ದಿನ ಯಾರ ಪಾಲಿಗೆ ಹೇಗಿದೆ..? ತಿಳಿಯಿರಿ ರಾಶಿ ಭವಿಷ್ಯದ ಮೂಲಕ

ಮೇಷ

ಸಮಾಜ ಸೇವೆಯಲ್ಲಿ ಆಸಕ್ತಿ ಮೂಡಲಿದೆ.
ವಾಹನ ವಿಲೇವಾರಿಯಲ್ಲಿ ಗಣನೀಯ
ಆದಾಯ ಗಳಿಸುವಿರಿ. ಲಾಭವು ಅಷ್ಟಿಲ್ಲ.


ವೃಷಭ
ನಕಾರಾತ್ಮಕ ಭಾವನೆಗಳಿಂದ ಹೊರಬನ್ನಿ. ನಿಮ್ಮ
ಜೀವನದಲ್ಲಿ ಇದು ಈಗಲೇ ಆಗಬೇಕಾಗಿದೆ.
ಜೀವನದ ದಿಕ್ಕು ಕೂಡ ಬದಲಾಗಲಿದೆ.


ಮಿಥುನ
ವಯಸ್ಸಾದ ಅಮ್ಮನ ಮಾತು ಕೇಳಲೇಬೇಕು.
ಮಡದಿಯ ಮಾತೂ ಮೀರುವಂತಿಲ್ಲ.
ಮಧ್ಯದಲ್ಲಿ ಅಡಕತ್ತರಿಯಾಗಿದ್ದೀರಿ.


ಕಟಕ
ಧ್ಯಾನ- ಪ್ರಾಣಾಯಮದಿಂದ ನಿಮ್ಮ ಶ್ವಾಸದ
ಕಾಯಿಲೆಗಳು ದೂರಾಗಲಿವೆ. ನಿನ್ನೆಯ ನಿಮ್ಮ
ಆಹಾರದ ಪಥ್ಯವೂ ಸಹಕಾರಿಯಾಗಲಿದೆ.

ಸಿಂಹ

ನಿನ್ನೆಯವರೆಗೂ ಸರಿಯಿದ್ದ ನಿಮ್ಮ ಹೊಸ
ವಾಹನದ ಖರೀದಿಯ ವಿಷಯ ಇಂದು
ಬೇರೆಯದೇ ತಿರುವನ್ನು ಪಡೆಯಲಿದೆ. 


ಕನ್ಯಾ
ಒತ್ತಡದ ಕೆಲಸಗಳು ಕಡಿಮೆಯಾಗಿದೆ. ಹಿತ
ಚಿಂತಕರ ಆಗಮನವಾಗಲಿದೆ. ಮನಸ್ಸಿಗೆ
ಉಲ್ಲಾಸ ಸಿಗುವ ದಿನವಿದು. ಧನಾಗಮನ.

ತುಲಾ
ಮಗಳು ಒಂದು ಊರು. ಮಗನೂ ಒಂದು
ಊರು. ಇಬ್ಬರೂ ಈಗ ನಿಮ್ಮನ್ನು ಅವರವರ
ತುಲಾ ಮನೆಗೆ ಕರೆದಿದ್ದಾರೆ. ಯೋಚಿಸಿ ನಿರ್ಧರಿಸಿ.

ವೃಶ್ಚಿಕ
ದೇವಕೃಪೆಯು ಇಂದು ನಿಮ್ಮ ಮೇಲಿದ್ದು
ಮಾಡಿದ್ದೆಲ್ಲವೂ ಒಳಿತಾಗಲಿದೆ. ಆತುರ ಬೇಡ.
ಯೋಚಿಸಿ ನಿರ್ಧಾರ ಮಾಡುವುದು ಸೂಕ್ತ.


ಧನುಸ್ಸು
ಸಂಶೋಧನಾ ಕ್ಷೇತ್ರದವರಿಗೆ ಉತ್ತಮ
ಸಮಯ. ನಿರಂತರ ಶ್ರಮವೀಗ ಸಾರ್ಥಕ
ವಾಗಲಿದೆ. ಗೌರವಕ್ಕೆ ಪಾತ್ರರಾಗುತ್ತೀರಿ.


ಮಕರ
ವ್ಯವಹಾರದಲ್ಲಿ ಪ್ರಗತಿ. ಭಿನ್ನಾಭಿಪ್ರಾಯ
ಭೇದದಿಂದ ವೈಮನಸ್ಯಗಳು ಉಂಟಾಗ
ಬಹುದು. ಎಚ್ಚರಿಕೆಯಿಂದ ವ್ಯವಹರಿಸಿ.


ಕುಂಭ
ಎಲ್ಲರೊಂದಿಗೂ ಬೆರೆಯಿರಿ, ಧನಾತ್ಮಕವಾದ
ಆಲೋಚನೆಗಳಿಂದ ನಿಮ್ಮ ಕೆಲಸಗಳಲ್ಲಿ ಈಗ
ಯಶಸ್ಸು ದೊರೆಯಲಿದೆ. ನೆಮ್ಮದಿಯಿಂದಿರಿ.

ಮೀನ
ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಸ್ಥಿಮಿತಕ್ಕೆ
ಬರುವ ದಿನವು ಹತ್ತಿರದಲ್ಲಿದೆ. ನಿರೀಕ್ಷೆಯು
ಮೀನ ಎಂದೂ ಹುಸಿಯಾಗದು ತಾಳ್ಮೆಯಿರಬೇಕಷ್ಟೆ

loader