ಮಿಥುನ ರಾಶಿಯವರೇ ಆಸ್ತಿ ಖರೀದಿಗೆ ಇದು ಸುಸಮಯ : ಉಳಿದ ರಾಶಿ ಹೇಗಿದೆ..?

First Published 25, Jan 2018, 5:35 AM IST
Dina bhavishya in kannada 25 Jan 2018
Highlights

ಮಿಥುನ ರಾಶಿಯವರೇ ಆಸ್ತಿ ಖರೀದಿಗೆ ಇದು ಸುಸಮಯ : ಉಳಿದ ರಾಶಿ ಹೇಗಿದೆ..?

ಮೇಷ

ನಿಮಗೆ ಫಲಾಫಲಗಳ ಬಗ್ಗೆ ಹೆಚ್ಚು ಆಸಕ್ತಿ ಇದೆ.

ಅದು ಇದ್ದರೆ ಇರಲಿ. ಆದರೆ ಕರ್ತವ್ಯದ ಬಗ್ಗೆ

ಕೂಡ ಅಷ್ಟೇ ಆಸ್ಥೆ ಇರಲಿ. ತಾಳ್ಮೆ ಬೇಕು.

 

ವೃಷಭ

ತಲೆ ಬಿಸಿಯಲ್ಲೇ ಕಾಲ ನೂಕುವ ಬದಲು

ಹೊಸ ಆಲೋಚನೆಗಳನ್ನು ಮಾಡಿರಿ. ನೀವು

ನಿಮ್ಮತನವನ್ನು ಉಳಿಸಿಕೊಂಡರೆ ಒಳಿತು.

 

ಮಿಥುನ

ಆಸ್ತಿ ಖರೀದಿಗೆ ಸೂಕ್ತ ಸಮಯ ಇದಾಗಿದೆ.

ಹಣಕಾಸಿನ ವ್ಯವಹಾರದಲ್ಲಿ ಯೋಚಿಸಿ

ಮುಂದಡಿಯಿಡಿ. ಶ್ರಮದ ಜೀವನ ನಿಮ್ಮದು

 

ಕಟಕ

ಕನಸಲ್ಲಿ ಕಂಡಂತೆ ಎಲ್ಲಾ ಘಟಿಸಲಿದೆ. ಹಣವು

ನಿಮ್ಮನ್ನೇ ಹುಡುಕಿ ಬರಲಿದೆ. ಲಕ್ಷ್ಮೀ ಕಟಾಕ್ಷ

ಎನ್ನಬಹುದು. ಖುಷಿಯ ದಿನವಿದು.

 

ಸಿಂಹ

ಹಿರಿಯರೊಬ್ಬರಿಗೆ ನೀವು ಎಂದೋ ಮಾಡಿದ

ಉಪಕಾರವು ಇಂದು ಕೆಲಸ ಮಾಡಲಿದೆ.

ಗೌರವ ಸನ್ಮಾನಗಳು ಲಭಿಸುವ ದಿನವಿದು

 

ಕನ್ಯಾ

ಮಕ್ಕಳನ್ನು ಕಟ್ಟುನಿಟ್ಟಲ್ಲಿ ಕೂರಿಸಿ ಓದಿಸಬೇಡಿ.

ಅವರ ಮನಸ್ಸನ್ನು ಅರ್ಥ ಮಾಡಿಕೊಂಡರೆ

ಒಳ್ಳೆಯದು. ಮಾನಸಿಕ ಒತ್ತಡ ಹೇರದಿರಿ.

 

ತುಲಾ

ದೂರದ ಊರಿಂದ ನಿಮ್ಮ ಹಳೆಯ ಗೆಳೆಯರು

ನಿಮ್ಮಲ್ಲಿಗೆ ಬರಲಿದ್ದಾರೆ. ಹಳೆಯ ನೆನಪುಗಳ

ತುಲಾ ಮೆಲುಕು ಹಾಕುತ್ತಾ ಕಾಲ ಕಳೆಯಲಿದ್ದೀರಿ.

 

ವೃಶ್ಚಿಕ

ಮಕ್ಕಳ ಆರೋಗ್ಯದತ್ತ ಗಮನ ಕೊಡುವುದು

ಸೂಕ್ತ. ಪರೀಕ್ಷೆ ಹತ್ತಿರ ಬಂತೆಂದು ಹೆಚ್ಚು ಹೊರೆ

ಹೊರೆಸದಿರಿ. ವಿಶ್ರಾಂತಿ ಕೊಡುವುದು ಸೂಕ್ತ.

 

ಧನಸ್ಸು

ಕಸೂತಿಯ ಕೆಲಸದಲ್ಲಿ ಪ್ರಗತಿ ಸಾಧಿಸುತ್ತೀರಿ.

ಹೊಸ ಗೆಳೆಯನಿಂದ ಹಣದ ಸಹಾಯವೂ

ಸಿಗಲಿದೆ. ನೆಮ್ಮದಿಯ ದಿನ ಇದಾಗಿದೆ.

 

ಮಕರ

ಮನೆಯಲ್ಲಿ ಕಲಹ-ಕದನಗಳು ಇಂದು

ಇರುವುದಿಲ್ಲ. ನಿಮ್ಮಾಕೆಯ ಹುಟ್ಟುಹಬ್ಬವೇ

ಇದಕ್ಕೆ ಕಾರಣ. ಸಂಭ್ರಮದಿಂದ ಕಳೆಯಿರಿ.

 

ಕುಂಭ

ಸ್ತ್ರೀಯರ ಆರೋಗ್ಯದಲ್ಲಿ ಏರುಪೇರಾಗಲಿದೆ.

ಪ್ರಯಾಣವನ್ನು ಮುಂದೂಡಿ. ನಿಮ್ಮ ಈಗಿನ

ಹುಮ್ಮಸ್ಸನ್ನು ಯಾರಾದರೂ ಮೆಚ್ಚಲೇಬೇಕು.

 

ಮೀನ

ಆಭರಣ, ಆಸ್ತಿಗಳ ಖರೀದಿಗಳಿಂದ ಲಾಭ

ಗ್ಯಾರಂಟಿ. ವಡವೆಗಳನ್ನು ಕೊಳ್ಳಲು ಸಾಲ

ಮೀನ ಮಾಡುವ ಅಗತ್ಯವಿಲ್ಲ. 

loader