ಮೇಷ ರಾಶಿಯವರಿಗಿಂದು ಯೋಗದ ದಿನ : ಉಳಿದ ರಾಶಿ ಹೇಗಿದೆ..?

First Published 21, Feb 2018, 7:02 AM IST
Dina bhavishya in kannada 21 Feb 2018
Highlights

ಮೇಷ ರಾಶಿಯವರಿಗಿಂದು ಯೋಗದ ದಿನ : ಉಳಿದ ರಾಶಿ ಹೇಗಿದೆ..?

ಮೇಷ ರಾಶಿ : ಗಜ ಕೇಸರಿ ಯೋಗ, ಕಾರ್ಯಗಳಲ್ಲಿ ಜಯ, ಹೊಸ ಸಾಹಸ ಪ್ರಯತ್ನಕ್ಕೆ ಜಯ ಸಿಕ್ಕಲಿದೆ.

ವೃಷಭ : ಪ್ರಯತ್ನ ವಿಫಲವಾಗುವ ಸಾಧ್ಯತೆ, ರಾಮ ತಾರಕ ಮಂತ್ರ ಪಠಿಸಿ, ದಿನದ ಅಂತ್ಯದಲ್ಲಿ ಸಮಾಧಾನ

ಮಿಥುನ : ರಾಶ್ಯಾಧಿಪತಿ ಭಾಗ್ಯದಲ್ಲಿದ್ದಾನೆ, ಗುರು ದೃಷ್ಟಿಯೂ ಇದೆ ಹಾಗಾಗಿ ಅತ್ಯಂತ ಶುಭ ದಿನವಾಗಿರಲಿದೆ, ಓ ನಮೋ ನಾರಾಯಣಾಯ ಮಂತ್ರ ಪಠಿಸಿ

ಕಟಕ : ಕೇಂದ್ರದ ಗುರುವಿನಿಂದ ಸೌಖ್ಯ, ತಾಯಿಯಲ್ಲಿ ಗೌರವ, ವಾಹನ ಖರೀದಿಗೆ ತಯಾರಿ

ಸಿಂಹ : ಪಂಚಮ ಶನಿಯಿಂದಾಗಿ ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಬುದ್ಧಿಗೆ ಮಂಕು ಕವಿಯಲಿದೆ, ಶನಿ ಶಾಂತಿ ಮಾಡಿಸಿ

ಕನ್ಯಾ : ದ್ರವ್ಯ ಲಾಭ, ಕುಟುಂಬದಲ್ಲಿ ಹೊಂದಾಣಿಕೆ, ಆರೋಗ್ಯದಲ್ಲಿ ಏರುಪೇರು

ತುಲಾ : ಬಾದಾಮಿ ಬನಶಂಕರಿ ದರ್ಶನ ಮಾಡಿ, ಅಂದುಕೊಂಡ ಕಾರ್ಯಗಳು ನೆರವೇರುತ್ತವೆ, ಶುಭ ಕಾರ್ಯಗಳಿಗೆ ತಯಾರಿ

ವೃಶ್ಚಿಕ : ಆರೋಗ್ಯದಲ್ಲಿ ವತ್ಯಯ, ಕ್ರೀಡಾಪಟುಗಳಿಗೆ ಹೊಸ ಅವಕಾಶ, ಸ್ಥಾನ ಬದಲಾವಣೆ, ಸುಬ್ರಹ್ಮಣ್ಯ ಜಪ ಮಾಡಿ

ಧನಸ್ಸು : ಸಾಡೇಸಾತಿನ ಪ್ರಭಾವ ನಿಮ್ಮ ಮನಸ್ಸನ್ನು ರಾಡಿಗೊಳಿಸಲಿದೆ, ಹೆದರುವ ಅವಶ್ಯಕತೆ ಇಲ್ಲ, ಶನೈಶ್ಚರ ಮಂತ್ರ ಪಠಿಸಿ

ಮಕರ : ಯಾವುದೇ ಕೆಲಸ ಪೂರ್ಣವಾಗುವುದಿಲ್ಲ, ಆರೋಗ್ಯ ವೃದ್ಧಿಗಾಗಿ ಸಂಜೀವಿನಿ ಹೋಮ ಮಾಡಿಸಿ

ಕುಂಭ : ಸರ್ಕಾರಿ ಕೆಲಸಗಳು ನೆರವೇರುತ್ತವೆ, ಲಾಭದ ದಿನ, ಉತ್ತಮ ಅವಕಾಶ

ಮೀನ : ಶ್ರಮದ ಬದುಕು, ಅನ್ಯರ ಆಶ್ರಯದಲ್ಲಿ ಜೀವನ, ಬೇಸರದ ವಾತಾವರಣ, ಗುರು ದರ್ಶನ ಮಾಡಿ

loader