Asianet Suvarna News Asianet Suvarna News

ವೃಷಭ ರಾಶಿಯವರಿಗೆ ಆರೋಗ್ಯ ಹಾನಿ ಸಂಭವ : ಉಳಿದ ರಾಶಿ ಹೇಗಿದೆ..?

ವೃಷಭ ರಾಶಿಯವರಿಗೆ ಆರೋಗ್ಯ ಹಾನಿ ಸಂಭವ : ಉಳಿದ ರಾಶಿ ಹೇಗಿದೆ..?

Dina bhavishya in kannada 16 Jan 2018

ಮೇಷ ರಾಶಿ : ಆಹ್ಲಾದದ ಬದುಕು. ಸಪ್ತಮದ ಗುರುವಿನಿಂದ ದೇಹಾರೋಗ್ಯ ಸುಧಾರಣೆ, ಚೈತನ್ಯಶೀಲತೆ. ಸುಬ್ರಹ್ಮಣ್ಯ ದರ್ಶನ ಮಾಡಿ

ವೃಷಭ : ಅಷ್ಟಮದಲ್ಲಿನ ಚಂದ್ರ - ಶನಿ ಸಂಯೋಗದಿಂದ ಆರೋಗ್ಯ ಹಾನಿ, ಧನಾಧಿಪತಿಯೂ ಅಷ್ಟಮ ಸೇರಿರುವುದರಿಂದ ಆರೋಗ್ಯಕ್ಕಾಗಿ ಧನ ವ್ಯಯ, ಧನ್ವಂತರಿ ಹೋಮ ಮಾಡಿಸಿಕೊಳ್ಳಿ

ಮಿಥುನ : ಪಂಚಮದ ಗುರು ಪ್ರತಿಭಾ ಕಾರ್ಯಗಳನ್ನು ತಂದುಕೊಡುವನು, ಯಶಸ್ಸಿನ ದಿನ, ಉತ್ತಮ ಕಾರ್ಯಗಳು, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ

ಕಟಕ : ಚತುರ್ಥ ಗುರುವಿನಿಂದ ಸುಖ ಶಾಂತಿ, ಕರ್ಮಸ್ಥಾನವನ್ನು ಗುರು ವೀಕ್ಷಣೆ ಮಾಡುತ್ತಿರುವುದರಿಂದ ಉದ್ಯೋಗ ವೃದ್ಧಿ, ನೆಮ್ಮದಿಗಾಗಿ ಗುರು ಮಂತ್ರ ಪಠಿಸಿ

ಸಿಂಹ : ರಾಶ್ಯಾಧಿಪತಿಯು ಷಷ್ಠಸ್ಥಾನದಲ್ಲಿರುವುದರಿಂದ ಆರೋಗ್ಯದಲ್ಲಿ ಏರುಪೇರು, ತೃತೀಯ ಗುರು ಹಾಗೂ ಕುಜರಿಂದ ಸಹೋದರರಿಂದ ಸಹಕಾರ, ಶಿವ ಸ್ಮರಣೆ ಅಗತ್ಯವಿದೆ.

ಕನ್ಯಾ : ರಾಶ್ಯಾಧಿಪತಿಯಾದ ಬುಧನು ಕೇಂದ್ರ ಸ್ಥಾನದಲ್ಲಿರುವುದರಿಂದ ಉತ್ತಮ ದಿನವಾಗಿರಲಿದೆ, ಧನ ಸ್ಥಾನದಲ್ಲಿನ ಗುರುವಿನಿಂದ ಧನಪ್ರಾಪ್ತಿ. ಕೃಷ್ಣ  ನಾಮಸ್ಮರಣೆ ಮಾಡಿ

ತುಲಾ : ರಾಶಿಯಲ್ಲೇ ಗುರುವಿನ ಜೊತೆ ಕುಜನೂ ಇರಲಾಗಿ ದೈಹಿಕ ಶ್ರಮ, ಕಾರ್ಯ ಸಾದನೆಗೆ ಪ್ರಯಾಸ, ಗುರುವಿನ ದರ್ಶನ ಮಾಡಿ

ವೃಶ್ಚಿಕ : ಧನಾಧಿಪತಿ ವ್ಯಯದಲ್ಲಿರುವುದರಿಂದ ಧನ ವ್ಯಯ, ಆರೋಗ್ಯ ಹಾನಿ, ಯೋಚನೆಯ ದಿನ, ದುರ್ಗಾಸಪ್ತಶತಿ ಪಾರಾಯಣ ಮಾಡಿ

ಧನಸ್ಸು : ರಾಶಿಯಲ್ಲೇ ಚಂದ್ರನಿರುವ ಕಾರಣ ಪುಷ್ಕಳ ಭೋಜನ, ದ್ವಿತಿಯಾಧಿಪತಿ ಶನಿಯಿಂದ ಅಜೀರ್ಣ ಸಮಸ್ಯೆಯೂ ಕಾಡಲಿದೆ, ಜೀರಿಸೇವನೆ ಮಾಡಿ

ಮಕರ : ಸಂತಾನಕ್ಕೆ ತೊಂದರೆ, ವಾಹನದಲ್ಲಿ ತೊಂದರೆ, ಪ್ರಕಾಶಕರಿಗೆ ಉತ್ತಮ ಲಾಭ, ದುರ್ಗಾ ಅಷ್ಟೋತ್ತರ ಪಠಿಸಿ

ಕುಂಭ : ರಾಶಿಯಲ್ಲಿರುವ ರವಿ-ಕೇತುಗಳಿಂದ ದೇಹಕ್ಕೆ ಸಮಸ್ಯೆ, ಶಿವ ಗಣಪತಿಯರ ಆರಾಧನೆಯಿಂದ ಸಮಸ್ಯೆ ನಿವಾರಣೆ

ಮೀನ : ಶನಿ ಲಾಭದಲ್ಲಿರುವುದರಿಂದ ಶ್ರಮಕ್ಕೆ ತಕ್ಕ ಲಾಭ, ಉದ್ಯೋಗ ವೃದ್ಧಿ, ಉತ್ತಮ ದಿನ, ಗುರು ಚರಿತ್ರೆ ಪಠಿಸಿ

Follow Us:
Download App:
  • android
  • ios