ಮೇಷ ರಾಶಿಯವರ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ : ಉಳಿದ ರಾಶಿ ಹೇಗಿದೆ..?

ಮೇಷ

ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣ

ಗಳು ಕಂಡು ಬರುತ್ತಿವೆ. ಕೂಡಿಟ್ಟ ಹಣವು

ವೈದ್ಯರ ಪಾಲಾಗಲಿದೆ. ವಿಶ್ರಾಂತಿ ಬೇಕಾಗಿದೆ.

ವೃಷಭ

ಅನಿರಿಕ್ಷಿತ ಲಾಭಗಳು ನಿಮ್ಮನ್ನು ಹುಡುಕಿ

ಬರಲಿದೆ. ಬಾಕಿ ಇರುವ ಹಣವು ನಿಮ್ಮನ್ನು

ಸೇರಲಿದೆ. ನಿಮಗಿದು ಒಳ್ಳೆಯ ದಿನವಾಗಿದೆ.

ಮಿಥುನ

ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.

‘ಆರೋಗ್ಯವೇ ಭಾಗ್ಯ’ಎನ್ನುವ ಮಾತನ್ನು

ನೆನಪಿಡಿ. ಎಂದೂ ದುಡ್ಡಿನ ಹಿಂದೆ ಬೀಳದಿರಿ.

ಕಟಕ

ನೀವು ನಿಮ್ಮತನವನ್ನು ಕಳೆದುಕೊಳ್ಳಬೇಡಿ.

ಗಲಭೆಗಳಿಂದ ದೂರವಿರಿ. ಅದಕ್ಕಾಗಿ ಸ್ವಲ್ಪ

ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ.

ಸಿಂಹ

ನಿಮ್ಮ ಮಕ್ಕಳೂ ಸಹ ನಿಮ್ಮ ಜವಾಬ್ದಾರಿಯನ್ನು

ಎತ್ತಿ ತೋರಿಸುವ ಪರಿಸ್ಥಿತಿ ಉಲ್ಬಣಗೊಂಡಿದೆ.

ಸಮಾಜವೇ ಹೀಗಿದೆ. ಹೊಂದಿಕೊಳ್ಳಬೇಕ

ಕನ್ಯಾ

ನಿಮ್ಮ ಹಳೆಯ ಪ್ರಿಯತಮೆಯು ನಿಮ್ಮನ್ನು

ಭೇಟಿಯಾಗಲಿದ್ದಾರೆ. ಆದರೆ ಅಷ್ಟೇ ನಿರ್ಮಲ

ಮನಸ್ಸಿಂದ ಮಾತಾಡಿ ಗೌರವ ಕೊಡಲಿದ್ದೀರಿ.

ತುಲಾ

ಪ್ರಯಾಣದ ಆಲಸ್ಯವನ್ನು ಅಲಕ್ಷಿಸದಿರಿ.

ಆರೋಗ್ಯ ತಪಾಸಣೆಯು ನಿಮಗೀಗ ಅಗತ್ಯ.

ತುಲಾ ಒತ್ತಡದ ಕೆಲಸದಿಂದ ದೂರವಿದ್ದರೆ ಕ್ಷೇಮ.

ವೃಶ್ಚಿಕ

ಮೊದಲ ಪ್ರಯತ್ನವಾಗಿ ನೀವು ನಿಮ್ಮದೇ ಸ್ವಂತ

ಬ್ಯುಸಿನೆಸ್ ಶುರು ಮಾಡಲಿದ್ದೀರಿ. ಅದರಿಂದ

ಲಾಭ ಸಿಗಲಿದೆ. ಶ್ರಮ ಪಟ್ಟರೆ ಫಲ ಗ್ಯಾರಂಟಿ.

ಧನುಸ್ಸು

ಮನೆಯಲ್ಲಿನ ಖುಷಿಯ ವಾತಾವರಣವು

ನಿಮ್ಮಲ್ಲಿ ಹೊಸ ಹುರುಪನ್ನು ತರಲಿದೆ. ನಿಮ್ಮ

ಹಳೆಯ ನೋವುಗಳು ದೂರಾಗಲಿದೆ.

ಮಕರ

ವಿದೇಶ ಪ್ರಯಾಣ ಯೋಗ. ಮಕ್ಕಳಿಗೆ ಉನ್ನತ

ಶಿಕ್ಷಣದ ಯೋಗವಿದೆ. ಕಲಾಲೋಕದ ವ್ಯಕ್ತಿ

ಗಳಿಗೂ ಬಣ್ಣದ ವ್ಯಾಪಾರಿಗಳಿಗೂ ಲಾಭವಿದೆ.

ಕುಂಭ

ಕಷ್ಟವು ನಿಮ್ಮನ್ನು ಕಾಡಲು ಬಂದರೂ ಅದಕ್ಕೆ

ಸರಿಯಾದ ಪರಿಹಾರವು ನಿಮ್ಮಲ್ಲಿರುತ್ತದೆ.

ನಿಮ್ಮಲ್ಲಿನ ಆತ್ಮಶಕ್ತಿಯೇ ನಿಮಗೆ ಸಹಕಾರಿ.

ಮೀನ

ರೈತರಿಗೆ ಈಗ ಬೆಳೆಯುತ್ತಿರುವ ಬೆಳೆಯಲ್ಲಿ

ಸಾಕಷ್ಟು ಲಾಭ ಸಿಗಲಿದೆ. ತಾಳ್ಮೆಯಿಂದ ಇದ್ದರೆ

ಮೀನ ಕ್ಷೇಮ. ಹೆಚ್ಚಿನ ಸಾಲ ಅಷ್ಟು ಒಳ್ಳೆಯದಲ್ಲ.