ಕಟಕ ರಾಶಿಯವರಿಗಿದೆ ಸಿಹಿ ಸುದ್ದಿ : ಉಳಿದ ರಾಶಿ ಹೇಗಿದೆ..?

First Published 5, Feb 2018, 6:58 AM IST
Dina bhavishya in kannada 05 Feb 2018
Highlights

ಕಟಕ ರಾಶಿಯವರಿಗಿದೆ ಸಿಹಿ ಸುದ್ದಿ : ಉಳಿದ ರಾಶಿ ಹೇಗಿದೆ..?

ಮೇಷ

ಪ್ರಯಾಣದ ಆಲಸ್ಯಕ್ಕೆ ವಿಶ್ರಾಂತಿ ಅಗತ್ಯ.

ನಿಮ್ಮ ಗೆಳೆಯನ ಸಂಸಾರದವರು ನಿಮ್ಮನ್ನು

ಸಂಪರ್ಕಿಸಲಿದ್ದಾರೆ. ಖುಷಿ ಹಂಚಿಕೊಳ್ಳದ್ದೀರಿ.

 

ವೃಷಭ

ಜಮೀನು ಕೊಳ್ಳುವ ಪ್ರಯತ್ನದಲ್ಲಿ ಒಂದು

ಹೆಜ್ಜೆ ಮುಂದಿಡಬಹುದು. ಆದರೆ ಆತುರದ

ನಿರ್ಧಾರ ಬೇಡ, ತಾಳ್ಮೆಯಿಂದಿದ್ದರೆ ಕ್ಷೇಮ.

 

ಮಿಥುನ

ಸ್ವಂತ ಉದ್ಯೋಗ ಹೊಂದಿರುವವರಿಗೆ ಲಾಭ.

ಸ್ನೇಹಪರ ನಡವಳಿಕೆಯು ನಿಮ್ಮ ಪ್ರಗತಿಗೆ

ಕಾರಣ. ಅವೆಲ್ಲವೂ ನಿಮ್ಮನ್ನು ಕಾಪಾಡಲಿದೆ.

 

ಕಟಕ

ನಿರುದ್ಯೋಗಿಗಳಿಗೆ ಉದ್ಯೋಗದ ಸಾಧ್ಯತೆ.

ಕೆಲವು ವಿಚಾರಗಳಲ್ಲಿ ಸ್ನೇಹಿತರಿಂದ ಸಲಹೆ

ಕೋರಿ. ಅಲ್ಲದೇ ಸ್ವಂತವಾಗಿಯೂ ಚಿಂತಿಸಿ.

 

ಸಿಂಹ

ವಿದ್ಯಾರ್ಥಿಗಳಿಗೆ ಇದು ಒತ್ತಡದ ಸಮಯ.

ಧ್ಯಾನದಿಂದ ಒತ್ತಡವನ್ನು ನಿವಾರಿಸಿಕೊಳ್ಳಿ.

ಪರೀಕ್ಷೆಗಳಿಗೆ ನೆಮ್ಮದಿಯಿಂದ ತಯಾರಾಗಿ.

 

ಕನ್ಯಾ

ಲೆಕ್ಕಪತ್ರ ವ್ಯವಹಾರದ ನಿಮ್ಮ ಬುದ್ಧಿಮತ್ತೆಯು

ಈ ಸಮಯದಲ್ಲಿ ಉಪಯೋಗಕ್ಕೆ ಬರಲಿದೆ.

ಹಳೇ ಕಡತಗಳ ವಿಲೇವಾರಿಯಾಗಲಿದೆ.

 

ತುಲಾ

ಹಣಕಾಸಿನ ಬಗ್ಗೆ ಚಿಂತಿಸದಿರಿ. ನಿಮ್ಮಲ್ಲಿನ ಪರಿ

ಶ್ರಮ ಹಾಗೂ ಏಕಾಗ್ರತೆಯಿಂದ ಬಾಕಿ ಉಳಿದ

ತುಲಾ ಕೆಲಸಗಳು ಮುಗಿಯಲಿವೆ. ನೆಮ್ಮದಿಯ ದಿನ.

 

ಧನುಸ್ಸು

ಹೊಸ ಥರದ ಆಲೋಚನೆಗಳು ನಿಮ್ಮನ್ನು

ಹುರಿದುಂಬಿಸಲಿದೆ. ಮಾನಸಿಕ ನೆಮ್ಮದಿ

ಹೊಂದುತ್ತೀರಿ. ಬೆಳಗಿನ ಜಾವ ಧ್ಯಾನ ಮಾಡಿ.

 

ವೃಶ್ಚಿಕ

ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ ನಿಮ್ಮ

ಸಮಚಿತ್ತ ಮನಸ್ಸಿನಿಂದ ಕಾರ್ಯ ಪ್ರವೃತ್ತ

ರಾಗಿರಿ. ಅದೇ ನಿಮ್ಮ ದೊಡ್ಡ ಗುಣವಾಗಲಿದೆ.

 

ಮಕರ

ನಿಮ್ಮ ನಿಲುವುಗಳು ನಿಮಗೆ ಬೇಕಾದವರಿಗೆ

ಆದರ್ಶವಾಗುತ್ತವೆ. ವಿದ್ಯಾರ್ಥಿಗಳಿಗೆ

ಅಧ್ಯಯನದಲ್ಲಿ ಆಸಕ್ತಿಯು ಹೆಚ್ಚಲಿದೆ.

 

ಕುಂಭ

ನೀವಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ

ನೆರವೇರಲಿವೆ. ಆರೋಗ್ಯದಲ್ಲಿ ಅಲ್ಪ-ಸ್ವಲ್ಪ

ಏರುಪೇರಾಗುವ ಸಾಧ್ಯತೆಗಳಿವೆ. ಜಾಗ್ರತೆ.

 

ಮೀನ

ದೂರದ ಸಂಬಂಧಿಯು ನಿಮ್ಮ ಸಹಾಯಕ್ಕೆ

ಬಂದು ಮಗನಿಗೆ ಉತ್ತಮ ಸಂಬಂಧವನ್ನು

ಮೀನ ಗೊತ್ತು ಮಾಡಲಿದ್ದಾರೆ. ಖುಷಿಯ ದಿನವಿದು

loader