ಕನ್ಯಾ ರಾಶಿಯವರ ಮನೆಯಲ್ಲಿ ಸಿಹಿ ಸುದ್ದಿ : ಉಳಿದ ರಾಶಿ ಹೇಗಿದೆ..?

First Published 3, Mar 2018, 6:59 AM IST
Dina bhavishya in kannada 03 March 2018
Highlights

ಕನ್ಯಾ ರಾಶಿಯವರ ಮನೆಯಲ್ಲಿ ಸಿಹಿ ಸುದ್ದಿ : ಉಳಿದ ರಾಶಿ ಹೇಗಿದೆ..?

ಕನ್ಯಾ ರಾಶಿಯವರ ಮನೆಯಲ್ಲಿ ಸಿಹಿ ಸುದ್ದಿ : ಉಳಿದ ರಾಶಿ ಹೇಗಿದೆ..?

 

ಮೇಷ

ದ್ವಿಚಕ್ರ ವಾಹನ ಮಾರಾಟದಿಂದ ಅಧಿಕ

ಲಾಭ ಸಿಗಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ.

ಆರೋಗ್ಯದತ್ತ ಗಮನಹರಿಸುವುದು ಸೂಕ್ತ.

 

ವೃಷಭ

ಕುಟುಂಬದಲ್ಲಿನ ಯಾರದೇ ಕಷ್ಟಗಳು

ನಿಮ್ಮದೆಂಬಂತೆ ತಿಳಿಯಿರಿ. ಅವುಗಳನ್ನು

ಬಗೆಹರಿಸುವ ಜವಾಬ್ದಾರಿ ನಿಮ್ಮ ಮೇಲಿದೆ.

 

ಮಿಥುನ

ಎಲ್ಲವೂ ನೀವಂದುಕೊಂಡಂತೆ ನಡೆಯಲಿದೆ.

ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

ಆರೋಗ್ಯದತ್ತ ಗಮನಹರಿಸುವುದು ಸೂಕ್ತ.

 

ಕಟಕ

ಪ್ಲಾಸ್ಟಿಕ್ ಉತ್ಪನ್ನಗಳ ವ್ಯಾಪಾರಿಗಳಿಗೆ ಅಲ್ಪ

ಸ್ವಲ್ಪ ಕಷ್ಟದ ದಿನಗಳಿವು. ಧೈರ್ಯದಿಂದ ನಿಮ್ಮ

ಕೆಲಸ ಕಾರ್ಯಗಳಲ್ಲಿ ತೊಡಗುವುದು ಸೂಕ್ತ.

 

ಸಿಂಹ

ನಿಮ್ಮ ಕೌಟುಂಬಿಕ ಚಿಂತೆಗಳು ಕಚೇರಿಯ

ಕೆಲಸಗಳಿಗೆ ಅಡ್ಡಿ ಮಾಡದಂತೆ ನೋಡಿಕೊಳ್ಳಿ.

ಆರೋಗ್ಯ ಉತ್ತಮಗೊಳ್ಳುವ ದಿನವಿದು

 

ಕನ್ಯಾ

ಮನೆಯಲ್ಲಿನ ಖುಷಿಯ ಸುದ್ದಿ ನಿಮ್ಮ

ಸಂಸಾರದ ಮೇಲೂ ಪ್ರಭಾವ ಬೀರಲಿದೆ.

ಅದು ಮನಸ್ಸಿಗೆ ಸಂಬಂಧಿಸಿದ ವಿಷಯ.

 

ತುಲಾ

ನಿಮ್ಮ ಸ್ವಂತ ಊರಿಂದ ಶುಭ ಸುದ್ದಿಯೊಂದು

ದಿಢೀರೆಂದು ಬರಲಿದೆ. ಆತಂಕ ಪಡಬೇಡಿ.

ತುಲಾ ಅದು ನಿಮಗೆ ಖುಷಿಯನ್ನೇ ತರಲಿದೆ.

 

ವೃಶ್ಚಿಕ

ಎಣ್ಣೆಯ ವ್ಯಾಪಾರಿಗಳಿಗೆ ಸುದಿನ. ಉಡುಪು

ತಯಾರಕರೂ ಹಾಗೂ ಮಾರಾಟಗಾರರಿಗೆ

ಸ್ಪಲ್ಪ ನೆಮ್ಮದಿಯ ದಿನಗಳು ಕಂಡು ಬರುತ್ತಿವೆ.

 

ಧನುಸ್ಸು

ಹಿರಿಯರನ್ನು ಗೌರವಿಸಿ, ಕಿರಿಯರನ್ನು

ಪ್ರೀತಿಸಿ. ಹಿತ ಮಿತವಾಗಿ ಮಾತನಾಡಿ.

ನಿಮ್ಮ ಧಾರಾಳತನವೇ ನಿಮಗೆ ಶ್ರೀರಕ್ಷೆ.

 

ಮಕರ

ನಿಮ್ಮ ವಾಟ್ಸ್‌ಆ್ಯಪ್‌ಗೆ ಹೊಸ ವ್ಯಕ್ತಿಯಿಂದ

ಬಂದ ಸಂದೇಶ ನಿಮ್ಮ ಮನಸ್ಸನ್ನು ಚಂಚಲ

ಗೊಳಿಸಲಿದೆ. ಅದು ನಿಮಗಲ್ಲ. ಜೋಕೆ.

 

ಕುಂಭ

ಎರಡು ಪೋನಿಟೇಲ್‌ಗಳ ಒಳಜಗಳವು ಈಗ

ಬೀದಿರಂಪವಾಗಿದೆ. ಒಳ ಜಗಳಗಳನ್ನು

ಒಳಗೇ ಇತ್ಯರ್ಥಗೊಳಿಸುವುದು ಸೂಕ್ತ.

 

ಮೀನ

ಮನಃಸ್ತಾಪಕ್ಕೆ ಒಳಗಾಗದಿರಿ. ಶಾಂತ

ಚಿತ್ತರಾಗಿದ್ದು ಕೆಲಸದಲ್ಲಿ ತೊಡಗಿ. ಹೆಚ್ಚಿನ

ಹೊಣೆಗಾರಿಕೆಗೆ ಹೆದರದೇ ಮುನ್ನುಗ್ಗಿ.

loader